ತಮಿಳು ನಟ Dalapathy Vijay ಆಸ್ತಿ ವಿವರದಿಂದ ಬಹಿರಂಗವಾಯ್ತು ಸತ್ಯ.

ತಮಿಳು ನಟ Dalapathy Vijay ಆಸ್ತಿ ವಿವರದಿಂದ ಬಹಿರಂಗವಾಯ್ತು ಸತ್ಯ.

ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಸುದ್ದಿಗೆ ಈಗ ಸ್ಪಷ್ಟನೆ.

Dalapathy Vijay  ಭಾರತದ ಹಾಲಿ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶದ ನಾನಾ ರಾಜ್ಯಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ದಳಪತಿ ವಿಜಯ್ ಹೊಂದಿದ್ದಾರೆ. ವಿಜಯ್ ಅವರ ಸಿನಿಮಾಗಳು ನೂರಾರು ಕೋಟಿ ಬಾಕ್ಸ್ ಆಫೀಸ್​​ನಲ್ಲಿ ಕಲೆಕ್ಷನ್ ಮಾಡುತ್ತವೆ. ಇದರ ಜೊತೆಗೆ ವಿಜಯ್, ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂದು ಸಹ ಹೇಳಲಾಗುತ್ತಿತ್ತು. ಆದರೆ ಇದೀಗ ದಳಪತಿ ವಿಜಯ್ ಚುನಾವಣೆಗೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರವನ್ನು ಸಹ ಘೋಷಣೆ ಮಾಡಿದ್ದಾರೆ. ಈ ಆಸ್ತಿ ವಿವರ ನೋಡಿದರೆ ದಳಪತಿ ವಿಜಯ್ ಬಗ್ಗೆ ಹೇಳಲಾಗಿದ್ದ ದೊಡ್ಡ ಸುಳ್ಳೊಂದು ಬಹಿರಂಗವಾಗಿದೆ.

ವಿಜಯ್ ಅವರು ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂಬ ಸುದ್ದಿ ಹರಡಲಾಗಿತ್ತು, ಅವರ ಅಭಿಮಾನಿಗಳು ಇದಕ್ಕೆ ಭಾರಿ ಪ್ರಚಾರ ನೀಡಿದ್ದರು. ಆದರೆ ಈಗ ವಿಜಯ್ ಅವರ ಆಸ್ತಿ ವಿವರ ನೋಡಿದರೆ ಇದು ಸುಳ್ಳು ಎಂಬುದು ಸ್ಪಷ್ಟವಾಗುತ್ತಿದೆ. ವಿಜಯ್ ಅವರು ಪ್ರತಿ ಸಿನಿಮಾಕ್ಕೆ 200 ರಿಂದ 250 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಅವರ ಕೊನೆಯ ಸಿನಿಮಾ ಆಗಿರುವ, ಇನ್ನೂ ಬಿಡುಗಡೆ ಆಗದ ‘ಜನ ನಾಯಗನ್’ ಸಿನಿಮಾಕ್ಕೆ 275 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ವಿಜಯ್ ಅವರ ಆಸ್ತಿ ವಿವರ ನೋಡಿದರೆ ಇದೆಲ್ಲ ಸುಳ್ಳು ಎಂದು ತಿಳಿದು ಬರುತ್ತಿದೆ.

ವಿಜಯ್ ಅವರು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷ ಸ್ಥಾಪಿಸಿದ್ದು, ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಹುತೇಕ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಸ್ವತಃ ವಿಜಯ್ ಅವರು ತಿರುಚಿ ಈಸ್ಟ್ ಮತ್ತು ಪೆರಂಬೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಭರ್ಜರಿಯಾಗಿ ಚುನಾವಣೆ ಪ್ರಚಾರವನ್ನೂ ಸಹ ಮಾಡುತ್ತಿದ್ದಾರೆ. ಫಲಿತಾಂಶ ಏನಾಗುತ್ತದೆಯೋ ಕಾದು ನೋಡಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *