ಸಂಸ್ಥಾಪಕ ಅಧ್ಯಕ್ಷರಿಗೆ ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ನಟರಾಜ್ ಮೌರ್ಯ ಮನವಿ..
ಮಧುಗಿರಿ : ಕಳೆದ ಎರಡು ತಿಂಗಳಿನಿಂದ ನೆನೆಗುಂದಿಗೆ ಬಿದ್ದಿರುವ ಭೀಮ್ ಆರ್ಮಿ ಸಂಘಟನೆಯ ಕರ್ನಾಟಕ ರಾಜ್ಯಕ್ಕೆ ಹೊಸ ರಾಜ್ಯದ್ಯಕ್ಷರನ್ನಾಗಿ ತುರ್ತಾಗಿ ನೇಮಿಸಬೇಕೆಂದು ಮಧುಗಿರಿ ತಾಲ್ಲೂಕ್ ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷರಾದ ನಟರಾಜ್ ಮೌರ್ಯ ರವರು ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ್ ಅಜಾದ್ ರಾವಣ್ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ವಿನಯ್ ರತನ್ ಸಿಂಗ್ ರಾಜ್ಯ ಉಸ್ತುವಾರಿಗಳಾದ ಯಶ್ ಪಾಲ್ ಬೋರೆ ರವರು ಹಾಗೂ ರಾಜ್ಯ ಮುಖಂಡರಾದ ಖಾಲಿದ್ ಹುಸೇನ್ ರವರಿಗೆ ಪತ್ರಿಕೆ ಮುಖಾಂತರ ಮನವಿ ಮಾಡಿದರು.
ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಅಹಿಂದ ವರ್ಗಕ್ಕೆ ತುಂಬಾ ಸಮಸ್ಯೆಗಳಾಗುತ್ತಿದ್ದು ಈ ಸಮಸ್ಯೆಗಳ ವಿರುದ್ಧ ಹೋರಾಡಲು ನಮ್ಮ ಭೀಮ್ ಆರ್ಮಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕ ತುಂಬಾ ಅವಶ್ಯಕತೆವಿದ್ದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಿಟ್ಟಿದ್ದ ಹಣವನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಹಾಗೂ ನಮ್ಮ ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ಹಾಗೂ ಅನ್ಯಾಯಗಳನ್ನು ಎಸಗುತ್ತಿರುವ ಕಾರಣ ಎರಡು ತಿಂಗಳಿನಿಂದ ಭೀಮ್ ಆರ್ಮಿ ಸಂಘಟನೆಗೆ ಹೊಸ ರಾಜ್ಯ ಸಾರಥಿ ಇಲ್ಲದೆ ಸಂಘಟನೆಯು ಮಂಕಾಗಿದ್ದು ನಮ್ಮ ರಾಜ್ಯಕ್ಕೆ ಭೀಮ್ ಆರ್ಮಿ ಸಂಘಟನೆಯ ನೇತೃತ್ವ ವಹಿಸಲು ಶೀಘ್ರವಾಗಿ ಹೊಸ ರಾಜ್ಯಾಧ್ಯಕ್ಷರ ನೇಮಕವನ್ನು ಮಾಡಬೇಕು ಎಂದು ಮನವಿ ಮಾಡುತ್ತೇನೆ.
ಅವಿನಾಶ್ ಸಿ ಎಲ್ ರವರನ್ನು ನೂತನ ಭೀಮ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕೆಂದು ಈ ಪತ್ರಿಕಾ ಹೇಳಿಕೆ ಮುಖಾಂತರ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ್ ಅಜಾದ್ ರಾವಣ್ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ವಿನಯ್ ರತನ್ ಸಿಂಗ್ ಮತ್ತು ರಾಜ್ಯ ಉಸ್ತುವಾರಿಗಳಾದ ಯಶ್ ಪಾಲ್ ಬೋರೆ ರಾಜ್ಯ ಮುಖಂಡರಾದ ಖಾಲಿದ್ ಹುಸೇನ್ ರವರಲ್ಲಿ ಒತ್ತಾಯಿಸುತ್ತಿದ್ದೇನೆ.
For More Updates Join our WhatsApp Group :




