ರಣಬೀರ್-ಸಾಯಿ ಪಲ್ಲವಿ ನಾಯಕ, ಟೀಸರ್ ಮೆಚ್ಚುಗೆ ಪಡೆದರೂ ಅಭಿಮಾನಿಗಳು ಯಶ್ ನೋಡುವ ನಿರೀಕ್ಷೆಯಲ್ಲಿ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಲ್ಲಿ ರಿಲೀಸ್ ಆಗಲಿದೆ. ಮೊದಲ ಪಾರ್ಟ್ ಈ ವರ್ಷ ತೆರೆಗೆ ಬಂದರೆ, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ. ಈ ಚಿತ್ರದ ಪ್ರಚಾರವನ್ನು ಇನ್ನೂ ಆರಂಭಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಇದಕ್ಕೆ ಉತ್ತರವಾಗಿ ಸಿನಿಮಾ ತಂಡ ಪ್ರಚಾರ ಆರಂಭಿಸಿದೆ. ‘ರಾಮಾಯಣ’ ತಂಡ ಇತ್ತೀಚೆಗೆ ಲಾಸ್ ಏಂಜಲೀಸ್ಗೆ ತೆರಳಿತ್ತು. ಅಲ್ಲಿ ‘ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಆದರೆ, ಈ ಶೋನಲ್ಲಿ ಯಶ್ ಇರಲಿಲ್ಲ.
ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾವಣನಾಗಿ ಯಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಶೋನಲ್ಲಿ ಭಾಗವಹಿಸಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾದ ಗ್ರಾಫಿಕ್ಸ್ನ ಹಾಡಿ ಹೊಗಳಿದ್ದಾರೆ. ಈ ವಿಮರ್ಶೆಗಳನ್ನು ಕೇಳಿ ರಣಬೀರ್ ಕಪೂರ್ ಕೂಡ ಖುಷಿಪಟ್ಟಿದ್ದಾರೆ.
‘ಅದ್ಭುತ ವಿಶ್ಯುವಲ್ಸ್’ ಎಂದು ಕೆಲವರು ಹೇಳಿದ್ದಾರೆ. ‘ಈ ಸಿನಿಮಾ ನೋಡಲು ಕಾದಿದ್ದೇವೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಈ ಟೀಸರ್ ನೋಡಲು ಅಭಿಮಾನಿಗಳು ಕಾದಿದ್ದಾರೆ. ಏಪ್ರಿಲ್ 2ರಂದು ಟೀಸರ್ ಪ್ರೇಕ್ಷಕರ ಎದುರು ಬರಲಿದೆ. ಯಶ್ ಅವರನ್ನು ರಾವಣನಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
‘ರಾಮಾಯಣ’ ಚಿತ್ರಕ್ಕೆ 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ರಿಕವರಿ ಮಾಡಲಿದೆಯೇ ಎಂಬುದು ಸದ್ಯದ ಪ್ರಶ್ನೆ. ಎಲ್ಲಕ್ಕಿಂತ ಮುಖ್ಯವಾಗಿ, ಸಿನಿಮಾ ಸೂಕ್ಷ್ಮ ವಿಷಯಗಳ ಮೇಲಿದೆ. ಹೀಗಾಗಿ, ಕಥೆಯಲ್ಲಿ ಕೊಂಚ ಬದಲಾವಣೆ ಆದರೂ ಸಾಕಷ್ಟು ಟ್ರೋಲ್ಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.
For More Updates Join our WhatsApp Group :




