ಬೇಸಿಗೆಯಲ್ಲಿ ಹೈ BP ಇರುವವರು ಎಚ್ಚರಿಕೆ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ಬೇಸಿಗೆಯಲ್ಲಿ ಹೈ BP ಇರುವವರು ಎಚ್ಚರಿಕೆ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.

ತೀವ್ರ ತಲೆನೋವು, ಎದೆ ನೋವು, ಉಸಿರಾಟದ ತೊಂದರೆ – ತಕ್ಷಣ ವೈದ್ಯರೊಂದಿಗೆ ಸಂಪರ್ಕಿಸಿ.

ಇತ್ತೀಚಿನ ದಿನಗಳಲ್ಲಿ ಹೈ ಬಿಪಿ  ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರುವುದನ್ನು ನೀವು ಕಾಣಬಹುದಾಗಿದೆ. ಇದಕ್ಕೆ ಜೀವನಶೈಲಿಯಲ್ಲಿ ಆಗಿರುವಂತಹ ಬದಲಾವಣೆ, ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಜೊತೆಗೆ ಒತ್ತಡ (ಸ್ಟ್ರೆಸ್) ಪ್ರಮುಖ ಕಾರಣಗಳಾಗಿವೆ. ಅದರಲ್ಲಿಯೂ ಈ ಸಮಯದಲ್ಲಿ ಅಂದರೆ ಬೇಸಿಗೆಯಲ್ಲಿ ಬಿಸಿಲು ವಿಪರೀತವಾಗಿರುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು, ಇದು ರಕ್ತದ ಒತ್ತಡದ ಮೇಲೆ ಪರಿಣಾಮ ಬೀರಬಹುದು. ಹೆಚ್ಚು ಬೆವರು ಬರುವುದರಿಂದ ದೇಹದಲ್ಲಿನ ಇಲೆಕ್ಟ್ರೋಲೈಟ್‌ಗಳ ಸಮತೋಲನ ಹಾಳಾಗಬಹುದು, ಇದು ಹೃದಯ ಮತ್ತು ಬಿಪಿ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ದೇಹದ ತಾಪಮಾನವನ್ನು ನಿಯಂತ್ರಿಸಲು ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಬೇಸಿಗೆಯಲ್ಲಿ ಕೆಲವರಿಗೆ ಹಸಿವು ಕಡಿಮೆಯಾಗುತ್ತದೆ, ಇದರಿಂದ ಸರಿಯಾದ ಆಹಾರ ಸೇವನೆ ಆಗದೆ, ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದರಿಂದ ದುರ್ಬಲತೆ ಮತ್ತು ಬಿಪಿಯಲ್ಲಿ ಏರುಪೇರಿನ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಬಿಪಿ ಇರುವವರು ಈ ಸಮಯದಲ್ಲಿ ಕಂಡುಬರುವ ಕೆಲವು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಜೊತೆಗೆ ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಈ ರೀತಿ ಸಮಸ್ಯೆಯನ್ನು ತಡೆಯಬಹುದು.

ಹೈ ಬಿಪಿ ಇರುವವರು ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

  • ತೀವ್ರ ತಲೆನೋವು
  • ತಲೆ ಸುತ್ತುವುದು
  • ಕಣ್ಣು ಮಸುಕಾಗುವುದು
  • ಎದೆ ನೋವು
  • ಉಸಿರಾಟದ ತೊಂದರೆ
  • ಹೃದಯ ಬಡಿತದಲ್ಲಿ ಏರಿಳಿತ
  • ಹೆಚ್ಚು ಬೆವರುವುದು
  • ದುರ್ಬಲತೆ ಮತ್ತು ದಣಿವು ಈ ಲಕ್ಷಣಗಳು ಪದೇಪದೇ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಬೇಸಿಗೆಯಲ್ಲಿ ಪಾಲಿಸಬೇಕಾದ ಸರಳ ಕ್ರಮಗಳು:

  • ಹೈ ಬಿಪಿ ಇರುವವರು ತಮ್ಮ ದಿನಚರಿ ಮತ್ತು ಆಹಾರದ ಬಗ್ಗೆ ವಿಶೇಷ ಗಮನ ಕೊಡಬೇಕು
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು
  • ಹೆಚ್ಚು ಉಪ್ಪು ಮತ್ತು ಎಣ್ಣೆ ಅಂಶವಿರುವ ಆಹಾರ ಸೇವನೆ ಮಾಡುವುದನ್ನು ಬಿಡಬೇಕು
  • ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು
  • ತೀವ್ರ ಬಿಸಿಲಿರುವಾಗ ಹೊರಗೆ ಹೋಗುವುದನ್ನು ತಪ್ಪಿಸಬೇಕು
  • ಹೊರಗೆ ಹೋಗಲೇಬೇಕಾದಾಗ ತಲೆ ಮತ್ತು ದೇಹವನ್ನು ಮುಚ್ಚಿಕೊಳ್ಳಬೇಕು
  • ನಿಯಮಿತವಾಗಿ ಬ್ಲಡ್ ಪ್ರೆಶರ್ ಚೆಕ್ ಮಾಡಿಕೊಳ್ಳಬೇಕು

ಇತರ ಪ್ರಮುಖ ಸಲಹೆಗಳು:

  • ಪ್ರತಿದಿನ ಲಘು ವ್ಯಾಯಾಮ ಅಥವಾ ವಾಕಿಂಗ್ ಮಾಡುವ ಅಭ್ಯಾಸ ಇರಲಿ
  • ಅತಿಯಾಗಿ ದೇಹಕ್ಕೆ ಒತ್ತಡ ಕೊಡುವ ವ್ಯಾಯಾಮಗಳನ್ನು ತಪ್ಪಿಸಿ
  • ಒತ್ತಡವನ್ನು ನಿಯಂತ್ರಿಸಿ
  • ಸರಿಯಾಗಿ ನಿದ್ರೆ ಮಾಡಿ
  • ವೈದ್ಯರ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ
  • ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಈ ಸರಳ ಕ್ರಮಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಹೈ ಬಿಪಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಬರುವುದನ್ನು ತಪ್ಪಿಸಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *