ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ BJP ಸೇರ್ಪಡೆ.

ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ BJP ಸೇರ್ಪಡೆ.

ಬಂಗಾಳ ಚುನಾವಣಾ ಅಖಾಡಕ್ಕೆ ಸ್ಟಾರ್ ಎಂಟ್ರಿ; ರಾಜಕೀಯ ಕಾವು ಹೆಚ್ಚಳ.

ಕೋಲ್ಕತಾ: ಭಾರತೀಯ ಟೆನಿಸ್​ನ ಸರ್ವಶ್ರೇಷ್ಠ ಆಟಗಾರನೆಂದು ಪರಿಗಣಿಸಲಾಗಿರುವ ಲಿಯಾಂಡರ್ ಪೇಸ್ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಅಖಾಡಕ್ಕೆ ಪೇಸ್ ಧುಮುಕಿದ್ದಾರೆ. ಇದರೊಂದಿಗೆ, ಬಂಗಾಳದ ಚುನಾವಣಾ ರಂಗು ಮತ್ತಷ್ಟು ಹೆಚ್ಚಿದೆ. ಸೆಲಬ್ರಿಟಿಗಳ ಸಂಖ್ಯೆಯೂ ಹೆಚ್ಚಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ ಇದೀಗ ಪೇಸ್​ರ ಬಿಜೆಪಿ ಸೇರ್ಪಡೆಯನ್ನು ಲೇವಡಿ ಮಾಡಿದ್ದಾರೆ. ಮತ್ತೊಬ್ಬ ಹೊರಗಿನವರು ಬಿಜೆಪಿಗೆ ಬಂದಿದ್ದಾರೆ ಎಂದು ಟಿಎಂಸಿ ಟೀಕಿಸಿದೆ.

ಲಿಯಾಂಡರ್ ಪೇಸ್ ಬಂಗಾಳಿಯಲ್ಲವಾ?

ಲಿಯಾಂಡರ್ ಪೇಸ್ ಅವರು ಅರ್ಧ ಬಂಗಾಳಿ, ಅರ್ಧ ಗೋವನ್. ಅವರ ತಂದೆ ವೀಸ್ ಪೇಸ್ ಗೋವಾದವರು. ತಾಯಿ ಬಂಗಾಳಿಯವರು. ಲಿಯಾಂಡರ್ ಪೇಸ್ ಹುಟ್ಟಿ ಬೆಳೆದಿದ್ದೆಲ್ಲಾ ಕೋಲ್ಕತಾದಲ್ಲಿ. ನಂತರದ ಅವರ ಕಾರ್ಯಕ್ಷೇತ್ರ ಗೋವಾಗೆ ವರ್ಗವಾಯಿತು.

ಅಪ್ಪಟ ಕ್ರೀಡಾ ಕುಟುಂಬ ಪೇಸ್​ರದ್ದು

ಲಿಯಾಂಡರ್ ಪೇಸ್ ಅವರ ತಂದೆ ವೀಸ್ ಪೇಸ್ ಅವರು ಪ್ರಖ್ಯಾತ ಹಾಕಿ ಆಟಗಾರ. 1972ರಲ್ಲಿ ಜರ್ಮನಿಯ ಮ್ಯೂನಿಕ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರಾಗಿದ್ದರು.

ಪೇಸ್ ಅವರ ತಾಯಿ ಜೆನ್ನಿಫರ್ ಅವರು ಬಂಗಾಳಿ ಕವಿ ಮೈಕೇಲ್ ಮಧುಸೂದನ್ ದತ್ತ ಅವರ ಮರಿಮೊಮ್ಮಗಳು. 1980ರ ಏಷ್ಯನ್ ಬ್ಯಾಸ್ಕೆಟ್​ಬಾಲ್ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು.

ಟೆನಿಸ್ ಮಾಂತ್ರಿಕ ಲಿಯಾಂಡ್ ಪೇಸ್

ಲಿಯಾಂಡರ್ ಪೇಸ್ ಅವರು ಒಲಿಂಪಿಕ್ಸ್ ಪದಕ ಗೆದ್ದಿರುವ ಹೆಗ್ಗಳಿಕೆ ಹೊಂದಿದ್ಧಾರೆ. ಅನೇಕ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ವಿಶ್ವ ಸಾರ್ವಕಾಲಿಕ ಟೆನಿಸ್ ಡಬಲ್ಸ್ ಆಟಗಾರರಲ್ಲಿ ಅವರೂ ಒಬ್ಬರು. ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ವಿಶ್ವ ಟೆನಿಸ್ ಡಬಲ್ಸ್​ನಲ್ಲಿ ಅದ್ವಿತೀಯ ಎನಿಸಿತ್ತು. 1986ರಿಂದ 2020ರವರೆಗೂ ಅವರು ಟೆನಿಸ್​ನಲ್ಲಿ ಸಕ್ರಿಯವಾಗಿದ್ದರು. 47ರ ವಯಸ್ಸಲ್ಲಿ ನಿವೃತ್ತಿಯಾಗುವ ಮುನ್ನ 18 ಗ್ರ್ಯಾನ್ ಸ್ಲಾಂ ಜಯಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಹೊರಟಿರುವ ಬಿಜೆಪಿಗೆ ಪೇಸ್ ಸೇರ್ಪಡೆ ಎಷ್ಟು ಸಹಾಯವಾದೀತು ಗೊತ್ತಿಲ್ಲ? ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಮೇ 4ರಂದು ಫಲಿತಾಂಶ ಪ್ರಕಟವಾಗುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *