ಪ್ರೀಮಿಯಮ್ Petrol, Diesel ಬೆಲೆಗೆ ಬಲವಾದ ಏರಿಕೆ.

ಪ್ರೀಮಿಯಮ್ ಪೆಟ್ರೋಲ್, ಡೀಸಲ್ ಬೆಲೆಗೆ ಬಲವಾದ ಏರಿಕೆ.

ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್​ಗೆ 11 ರೂ ದರ ಹೆಚ್ಚಳ.

ನವದೆಹಲಿ: ಹೊಸ ವರ್ಷದ ಮೊದಲ ದಿನದಂದು ಸಾಮಾನ್ಯ ಜನರಿಗೆ ಡಬಲ್ ಶಾಕ್ ಸಿಕ್ಕಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 19 ರೂ ಏರಿಕೆಯಾದರೆ, ಪ್ರೀಮಿಯಮ್ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲೂ ಭರ್ಜರಿ ಹೆಚ್ಚಳ ಆಗಿದೆ. ಪ್ರೀಮಿಯಮ್ ಪೆಟ್ರೋಲ್ ಬೆಲೆ ಲೀಟರ್​ಗೆ 11 ರೂನಷ್ಟು ಹೆಚ್ಚಿದೆ. ಪ್ರೀಮಿಯಮ್ ಡೀಸಲ್ ಬೆಲೆಯಲ್ಲಿ ಒಂದೂವರೆ ರೂನಷ್ಟು ಅಲ್ಪ ಹೆಚ್ಚಳ ಆಗಿದೆ. ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಈ ದರ ಏರಿಕೆ ಮಾಡಿವೆ. ಕಳೆದ ತಿಂಗಳು ಕೂಡ ಪ್ರೀಮಿಯಮ್ ಇಂಧನ ಬೆಲೆಗಳಲ್ಲಿ ಏರಿಕೆ ಮಾಡಲಾಗಿತ್ತು.

ಭಾರತದ ಅತಿದೊಡ್ಡ ತೈಲ ಮಾರುಕಟ್ಟೆ ಸಂಸ್ಥೆಯಾದ ಇಂಡಿಯನ್ ಆಯಿಲ್ ತನ್ನ ಪ್ರೀಮಿಯಮ್ ದರ್ಜೆಯ ಎಕ್ಸ್​ಪಿ100 ಪೆಟ್ರೋಲ್ ಬೆಲೆಯನ್ನು 160 ರೂ ಹೆಚ್ಚಿಸಿದೆ. 149 ರೂ ಇದ್ದ ಇದರ ಬೆಲೆಯಲ್ಲಿ 11 ರೂ ಏರಿಕೆ ಆಗಿದೆ. ಈ ಎಕ್ಸ್​ಪಿ100 ಭಾರತದ ಮೊದಲ 100 ಆಕ್ಟೇನ್ ಪ್ರೀಮಿಯಮ್ ಪೆಟ್ರೋಲ್ ಎನಿಸಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆಯ ಪವರ್100 ಪೆಟ್ರೋಲ್ ದರವೂ ಏರಿಕೆ ಆಗಿರುವುದು ತಿಳಿದುಬಂದಿದೆ. ಈ ಪ್ರೀಮಿಯಮ್ ಪೆಟ್ರೋಲ್ ಅನ್ನು ಅಧಿಕ ಎಂಜಿನ್ ಕಾರ್ಯಕ್ಷಮತೆ ಅಗತ್ಯ ಇರುವ ಲಕ್ಷುರಿ ಕಾರು, ಸ್ಪೋರ್ಟ್ಸ್ ಬೈಕ್​ಗಳಲ್ಲಿ ಬಳಸಲಾಗುತ್ತದೆ.

ಪ್ರೀಮಿಯಮ್ ಡೀಸಲ್ ಬೆಲೆಯಲ್ಲೂ ಏರಿಕೆ

ಇನ್ನು, ಪ್ರೀಮಿಯಮ್ ಡೀಸಲ್ ಬೆಲೆಯಲ್ಲೂ ಹೆಚ್ಚಳ ಆಗಿದೆ. ಇಂಡಿಯನ್ ಆಯಿಲ್​ನ ಎಕ್ಸ್​ಟ್ರಾ ಗ್ರೀನ್ ಪ್ರೀಮಿಯಮ್ ಡೀಸಲ್​ನ ರೀಟೇಲ್ ಬೆಲೆ ಒಂದು ಲೀಟರ್​ಗೆ 91.49 ರೂನಿಂದ 92.99 ರೂಗೆ ಏರಿದೆ.

ಇದೇ ವೇಳೆ ಇವತ್ತು 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 195 ರೂನಷ್ಟು ಏರಿಕೆ ಆಗಿದೆ. ಮಾರ್ಚ್ ತಿಂಗಳಿಂದೀಚೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 300 ರೂ ಹೆಚ್ಚಳ ಆದಂತಾಗಿದೆ. ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ ತಿಂಗಳು ಒಮ್ಮೆ ಏರಿಕೆ ಆಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *