ಟೋಲ್‌ನಲ್ಲಿ New rule : ಕ್ಯಾಶ್ ಪಾವತಿಗೆ ಸಂಪೂರ್ಣ ಬ್ರೇಕ್.

ಟೋಲ್‌ನಲ್ಲಿ New rule : ಕ್ಯಾಶ್ ಪಾವತಿಗೆ ಸಂಪೂರ್ಣ ಬ್ರೇಕ್.

ಕ್ಯಾಶ್‌ಲೆಸ್‌ನಿಂದ ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ

ನೆಲಮಂಗಲ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂದಿನಿಂದ (ಏಪ್ರಿಲ್ 1) ನಗದುರಹಿತ ಟೋಲ್ ಪಾವತಿ ಕಡ್ಡಾಯಗೊಳಿಸಲಾಗಿದೆ. ಹೊಸ ನಿಯಮದ ಪ್ರಕಾರ, ವಾಹನ ಸವಾರರು ಟೋಲ್ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವಂತಿಲ್ಲ. ಬದಲಿಗೆ, ಫಾಸ್ಟ್‌ಟ್ಯಾಗ್ ಅಥವಾ ಡಿಜಿಟಲ್ ಪಾವತಿ ವಿಧಾನಗಳಾದ ಫೋನ್‌ಪೇ ಮತ್ತು ಗೂಗಲ್‌ಪೇ ಮೂಲಕ ಸ್ಕ್ಯಾನ್ ಮಾಡಿ ಶುಲ್ಕ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯಂತೆ ಈ ಕ್ರಮ ಜಾರಿಯಾಗಿದೆ.

ಬೆಂಗಳೂರು ಸಮೀಪದ ನೆಲಮಂಗಲದ ಟೋಲ್ ಬಳಿ ಈ ಹೊಸ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಬೆಳಗ್ಗಿನಿಂದಲೂ ಫಾಸ್ಟ್‌ಟ್ಯಾಗ್ ಮೂಲಕ ಅಥವಾ ಸ್ಕ್ಯಾನರ್ ಬಳಸಿ ಫೋನ್‌ಪೇ ಮೂಲಕ ಪಾವತಿಸುವವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ನಗದು ಪಾವತಿಗೆ ಯಾವುದೇ ಅವಕಾಶವಿರುವುದಿಲ್ಲ. ಹಿಂದೆ ನಗದು ಪಾವತಿಯಲ್ಲಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿತ್ತು (ಉದಾಹರಣೆಗೆ, ₹37 ರ ಬದಲು ₹80). ಈಗ ಫಾಸ್ಟ್‌ಟ್ಯಾಗ್‌ನಲ್ಲಿ ₹37 ಹಾಗೂ ಫೋನ್‌ಪೇ ಮೂಲಕ ₹45 ಪಾವತಿಸಬೇಕಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಹೇಳಿಕೊಂಡಿದೆ. ಏತನ್ಮಧ್ಯೆ, ಟೋಲ್​​ಗಳಲ್ಲಿ ಫಾಸ್ಟ್‌ಟ್ಯಾಗ್​ಗೆ ಬೇಡಿಕೆ ಹೆಚ್ಚಾಗಿದ್ದು, ಅದನ್ನು ಆ್ಯಕ್ಟಿವೇಶನ್ ಮಾಡುವವರು ಮತ್ತೆ ಸಕ್ರಿಯರಾಗಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *