54 ವರ್ಷಗಳ ನಂತರ ಚಂದ್ರನೆಡೆಗೆ ಮಾನವ.

54 ವರ್ಷಗಳ ನಂತರ ಚಂದ್ರನೆಡೆಗೆ ಮಾನವ.

ನಾಸಾದ ಆರ್ಟೆಮಿಸ್ II ಮಿಷನ್ ಆರಂಭ.

ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, 54 ವರ್ಷಗಳ ಬಳಿಕ ಚಂದ್ರನೆಡೆಗೆ ಗಗನಯಾತ್ರಿಗಳನ್ನು ಕಳುಹಿಸಿದೆ. ನಾಸಾ ಈ ನಾಲ್ವರು ಗಗನಯಾತ್ರಿಗಳಿಗೆ ಫ್ಲೋರಿಡಾದಲ್ಲಿ ತರಬೇತಿ ನೀಡಿ ನಂತರ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಈ ಗಗನಯಾತ್ರಿಗಳಲ್ಲಿ ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್‌ಗಳಾದ ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸೆನ್ ಸೇರಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ), ಮುಂದಿನ ಕೆಲವು ವರ್ಷಗಳಲ್ಲಿ ಚಂದ್ರನ ಮೇಲೆ ಶಾಶ್ವತ ನೆಲೆಯನ್ನು ಸ್ಥಾಪಿಸಲು ಯೋಜಿಸಿದೆ.

1972 ರ ನಂತರ ಚಂದ್ರನನ್ನು ತಲುಪಿದ ಮೊದಲ ಮಾನವಸಹಿತ ಮಿಷನ್ (ಅಪೊಲೊ 17). ಸರಿಸುಮಾರು 10 ದಿನಗಳ ಈ ಮಿಷನ್ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಮತ್ತು ಓರಿಯನ್ ಬಾಹ್ಯಾಕಾಶ ನೌಕೆಯನ್ನು ಬಳಸುತ್ತದೆ. ನಾಸಾದ ಆರ್ಟೆಮಿಸ್ II ಮಿಷನ್ 10 ದಿನಗಳದ್ದಾಗಿ. ಇದರರ್ಥ ಏಪ್ರಿಲ್ 1 ರಂದು ಉಡಾವಣೆಯಾಗಿದ್ದು, ಏಪ್ರಿಲ್ 10-11 ರ ವೇಳೆಗೆ ಮಿಷನ್ ಭೂಮಿಗೆ ಮರಳಬಹುದು.

ಈ ಮಿಷನ್ ನಲ್ಲಿ ನಾಲ್ಕು ಜನ ಸಿಬ್ಬಂದಿ ಇದ್ದು, ಇವರು ಚಂದ್ರನ ಮೇಲೆ ಇಳಿಯುವುದಿಲ್ಲ, ಬದಲಿಗೆ ಭೂಮಿಗೆ ಹಿಂತಿರುಗುವ ಮೊದಲು ಚಂದ್ರನ ಸುತ್ತ ಸುತ್ತಲಿದ್ದಾರೆ. ಭವಿಷ್ಯದಲ್ಲಿ ಮಾನವನನ್ನು ಚಂದ್ರನ ಮೇಲೆ ಇಳಿಸುವ ಮಿಷನ್‌ಗೆ ಮುನ್ನ, ಒರಾಯನ್ ನೌಕೆಯ ಜೀವ ರಕ್ಷಕ ವ್ಯವಸ್ಥೆಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಪರೀಕ್ಷಿಸುವುದು ಇದರ ಮುಖ್ಯ ಗುರಿಯಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *