ಶಿವಾನಂದ ಸರ್ಕಲ್‌ನಲ್ಲಿ ಬಸ್ ಅಪಘಾತ.

ಶಿವಾನಂದ ಸರ್ಕಲ್‌ನಲ್ಲಿ ಬಸ್ ಅಪಘಾತ.

ಡಿವೈಡರ್ಗೆ ಡಿಕ್ಕಿ, ಮುಂಭಾಗ ಕತ್ತರಿಸಿದ ಎಂಜಿನ್!

ಬೆಂಗಳೂರು : ವೇಗವಾಗಿ ಬಂದ ಆಂಧ್ರ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇಂದು ಮುಂಜಾನೆ ನಡೆದಿದೆ. ಅಧೋನಿಯಿಂದ ಅನಂತಪುರ ಮೂಲಕ ಬೆಂಗಳೂರಿಗೆ ಬರ್ತಿದ್ದ ಬಸ್​​ ಡಿವೈಡರ್​ಗೆ ಡಿಕ್ಕಿಯಾದ ರಭಸಕ್ಕೆ ಮುಂಭಾಗದ ಚಕ್ರ ಮತ್ತು ಇಂಜಿನ್ ಕಿತ್ತು ಬಂದಿದೆ.

ಬಸ್​​ನಲ್ಲಿರುವ ಪ್ರಯಾಣಿಕರೆಲ್ಲವೂ ಸುರಕ್ಷಿತವಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *