ಗ್ಯಾಸ್ ಕೊರತೆ ಪರಿಣಾಮ: ಕೊಡಗಿನಲ್ಲಿ ಸೌದೆ-ಇದ್ದಿಲಿಗೆ ಭಾರೀ ಬೇಡಿಕೆ.

ಗ್ಯಾಸ್ ಕೊರತೆ ಪರಿಣಾಮ: ಕೊಡಗಿನಲ್ಲಿ ಸೌದೆ-ಇದ್ದಿಲಿಗೆ ಭಾರೀ ಬೇಡಿಕೆ.

ಸಿಲಿಂಡರ್ ಸಿಗದೆ ಹೋಟೆಲ್, ರೆಸಾರ್ಟ್‌ಗಳು ಸಾಂಪ್ರದಾಯಿಕ ಅಡುಗೆಗೆ ಮರುಗು.

ಕೊಡಗು: ಗಲ್ಫ್ ರಾಷ್ಟ್ರದಲ್ಲಾಗುತ್ತಿರುವ ಯುದ್ಧದಿಂದಾಗಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪ್ರತಿಯೊಂದು ಕ್ಷೇತ್ರವೂ ಸೌದೆ ಒಲೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಸೌದೆ, ಇದ್ದಿಲುಗೆ ಭಾರೀ ಬೇಡಿಕೆ ಬಂದಿದೆ. ಗ್ಯಾಸ್​ ಕೊರತೆಯಿಂದಾಗಿ ಇದೀಗ ಸೌದೆ ಮತ್ತು ಇದ್ದಿಲು ಬಳಸಲಾಗುತ್ತಿದೆ. ಹಾಗಾಗಿ ಇದೀಗ ಸೀಸನ್​​ ಅಲ್ಲದಿದ್ದರೂ ಸೌದೆಗೆ ವ್ಯಾಪಕ ಬೇಡಿಕೆ ಸೃಷ್ಟಿಯಾಗುತ್ತಿದೆ.

ಗ್ಯಾಸ್ಸಿಲಿಂಡರ್ಗಳಿಲ್ಲದೇ ಪರದಾಟ

ಇರಾನ್-ಇಸ್ರೆಲ್ ಯುದ್ಧದಿಂದಾಗಿ ಜಾಗತಿಕವಾಗಿ ಆಗಿರುವ ಅಡ್ಡಪರಿಣಾಮಗಳು ಒಂದೆರಡಲ್ಲ. ವಿಶೇಷವಾಗಿ ಅಡುಗೆ ಅನಿಲದ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಬೀರಿದೆ. ಅದರಲ್ಲೂ ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹೋಟೆಲ್, ರೆಸಾರ್ಟ್,​ ಹೋಮ್ ಸ್ಟೇಗಳಲ್ಲಿ ಕಮರ್ಷಿಯಲ್ ಸಿಲಿಂಡರ್​ಗಳಿಲ್ಲದೆ ಎಲ್ಲರೂ ಪರದಾಡುವಂತಾಗಿದೆ.

ಇದುವರೆಗೂ ಹೋಟೆಲ್​ಗಳಲ್ಲಿ ಅಡುಗೆ ತಯಾರಿಸಲು ಹೊಗೆ ಮುಕ್ತ ಗ್ಯಾಸನ್ನ ಬಳಸಲಾಗಿತ್ತಿತ್ತು. ಆದರೆ ಇದೀಗ ವಾಣಿಜ್ಯ ಸಿಲಿಂಡರ್​ಗಳ ಕೊರತೆಯಿಂದಾಗಿ ಗ್ಯಾಸ್ ಬಳಸಿ ಅಡುಗೆ ಮಾಡಲಾಗುತ್ತಿಲ್ಲ. ಹಾಗಾಗಿ ಸದ್ಯ ಇದ್ದಿಲುಗಳಿಗೆ ಬೇಡಿಕೆ ಬಂದಿದೆ. ಸಾಂಪ್ರದಾಯಿಕ ಶೈಲಿಯಲ್ಲೇ ಗ್ರಿಲ್ ಚಿಕನ್, ತಂದೂರಿ ಚಿಕನ್ ಮಾಡಲು ಮುಂದಾಗಿದ್ದಾರೆ. ಹಾಗಾಗಿ ಮಡಿಕೇರಿಯಲ್ಲಿ ಇದ್ದಿಲುಗಳಿಗೆ ಬೇಡಿಕೆ ಬಂದಿದೆ.

ಸೌದೆಗೆ ಬೇಡಿಕೆ: ಕೆಜಿಗೆ 8 ರೂ ಮಾರಾಟ

ಇದೇ ವೇಳೆ ಸೌದೆಗೂ ಕೂಡ ಜಿಲ್ಲೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಇದುವರೆಗೂ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗಳಲ್ಲಿ ಮಾತ್ರ ಸೌದೆಗಳನ್ನ ಬಳಕೆ ಮಾಡುತ್ತಿದ್ದರು. ಆದರೆ ಇದೀಗ ಹೋಟೆಲ್, ರೆಸಾರ್ಟ್​ಗಳಲ್ಲೂ ಸೌದೆ ಒಲೆಗಳನ್ನ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಸೌದೆ ಡಿಪೋಗಳು ಹಾಗೂ ಹಳೆ ಮನೆಯ ಸಾಮಾಗ್ರಿ ಮಾರಾಟ ಕೇಂದ್ರಗಳಲ್ಲೂ ಸೌದೆಗಳಿಗೆ ಬೇಡಿಕೆ ಇದೆ. ಕೆಜಿಗೆ 8 ರೂ ನಂತೆ ಮಾರಾಟ ಮಾಡಲಾಗುತ್ತಿದೆ.

ಜಿಲ್ಲೆಯ ಪ್ರತಿಷ್ಠಿತ ಹೋಟೆಲ್, ರೆಸಾರ್ಟ್​ಗಳ ಬಾಣಸಿಗರೆಲ್ಲರೂ ಹಳೆಯ ಸೌದೆ ಒಲೆಗಳಿಗೆ ಪರಿವರ್ತನೆಯಾಗಿದ್ದಾರೆ. ಅಷ್ಟೇ ಅಲ್ಲದೆ ಈಗ ಕೊಡಗಿನ ಕಾಫಿ ತೋಟಗಳಲ್ಲಿ ಬೇಕಾದಷ್ಟು ಸೌದೆಗಳು ಸಿಗ್ತಾ ಇರೋದು ಬೇಡಿಕೆ ತಕ್ಕಷ್ಟು ಪೂರೈಕೆ ದೊರೆಯುವಂತೆ ಮಾಡಿದೆ. ಹಾಗಾಗಿ ಸದ್ಯಕ್ಕೆ ಕೊಡಗಿನಲ್ಲಿ ಅಡುಗೆಗಂತೂ ಯಾವುದೇ ಅಡ್ಡಿ ಆತಂಕವಿಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *