ಕೊ* ಬಳಿಕ ದೇಹ ಸುಟ್ಟ ಸ್ಥಿತಿ.
ಕಲಬುರಗಿ : ಕಮಲಾಪುರ ತಾಲ್ಲೂಕಿನ ಕಲ್ಮೂಡ ಗ್ರಾಮದಲ್ಲಿ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ (57) ಅವರ ಸುಟ್ಟ ದೇಹ ಪತ್ತೆ. ದೇಹವು ಹಿಂಸೆಪೂರ್ಣವಾಗಿ ಸುಟ್ಟು, ಕಾಲು ಮಾತ್ರ ಉಳಿದಿತ್ತು. ಪ್ರಕರಣ ಸಂಬಂಧ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಜ್ಯೋತಿ ಕಪಾಳೆ ಹಿರೇಮಠ ಕೆಲಸ ಮಾಡುತ್ತಿದ್ದರು. ಹೀಗಾಗಿ ಬೀದರ್ನಲ್ಲಿಯೇ ಮನೆ ಮಾಡಿಕೊಂಡು ಶಾಲೆಗೆ ಹೋಗಿ ಬರುತ್ತಿದ್ದರು. ಆದರೆ ವಾರಕೊಮ್ಮೆ ಕಲಬುರಗಿಗೆ ಬಂದು ವಾಪಸ್ ತೆರಳುವ ಅಭ್ಯಾಸ ಅವರಿಗೆ ಇತ್ತು. ಹೀಗೆ ಬಂದವರು ಕಲಬುರಗಿಯಿಂದ ಬೀದರ್ಗೆ ತೆರಳುವಾಗ ಆರೋಪಿ ಕೊಲೆಗೈದಿದ್ದಾನೆ. ಶಿಕ್ಷಕಿ ಜ್ಯೋತಿಗೆ ಪರಿಚಯಸ್ಥನಾಗಿದ್ದ ಆರೊಪಿ, ಅವರಿಂದ 14 ಲಕ್ಷ ಹಣ ಪಡೆದಿದ್ದ. ಕೊಟ್ಟ ಈ ಹಣವನ್ನು ಜ್ಯೋತಿ ವಾಪಸ್ ಕೇಳಿರುವುದೇ ಕೊಲೆಗೆ ಕಾರಣವಾಗಿದೆ.
ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಮಹಿಳೆಯೋರ್ವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ ಹಿನ್ನೆಲೆ ಬೇರೆಡೆ ಕೊಲೆ ಮಾಡಿ ಶವ ತಂದು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಇಡೀ ದೇಹ ಸುಟ್ಟು ಕೇವಲ ಕಾಲು ಮಾತ್ರ ಉಳಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಎಸ್ಪಿ, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ತನಿಖೆಗಿಳಿದಾಗ ಕೊಲೆ ಹಿಂದಿನ ಸತ್ಯ ಬಯಲಾಗಿದೆ. ಸದ್ಯ ಆರೋಪಿ ಆನಂದ್ನನ್ನು ಪೊಲೀಸರು ಬಂಧಿಸಿದ್ದಾರೆ.
For More Updates Join our WhatsApp Group :




