ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಬದುಕಲು ಕೋರ್ಟ್ ಒಪ್ಪಿಗೆ.

ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಬದುಕಲು ಕೋರ್ಟ್ ಒಪ್ಪಿಗೆ

“ನಾನು ನನ್ನ ಇಚ್ಛೆಯಂತೆ ಬದುಕುತ್ತೇನೆ”

ನವದೆಹಲಿ : 19 ವರ್ಷದ ಯುವತಿ ನ್ಯಾಯಾಲಯದಲ್ಲಿ ಸ್ಪಷ್ಟವಾಗಿ ಹೇಳಿಕೆ ನೀಡಿ, ಗಂಡ ಮತ್ತು ಪೋಷಕರ ಜೊತೆ ಇರಲು ನಿರಾಕರಿಸಿ ಪ್ರಿಯಕರನೊಂದಿಗೆ ಹೋಗುವುದಾಗಿ ತಿಳಿಸಿದರು.

ತನಗಿಂತ 2 ಪಟ್ಟು ಹೆಚ್ಚು ವಯಸ್ಸಿನವನ ಜೊತೆ ಮನೆಯವರು ಮದುವೆ ಮಾಡಿಕೊಟ್ಟಿದ್ದರಿಂದ 19 ವರ್ಷದ ಯುವತಿ ಆ ಮದುವೆಯಲ್ಲಿ ಸಂತೋಷವಾಗಿರಲಿಲ್ಲ. ಆಕೆಗೆ ಇನ್ನೋರ್ವ ಯುವಕನ ಮೇಲೆ ಮನಸಾಗಿತ್ತು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ಆಕೆ ತಾನು ತನ್ನ ಮನೆಯಲ್ಲಿ ವಯಸ್ಸಾದ ಗಂಡನಿಂದ ಯಾವ ರೀತಿ ದೌರ್ಜನ್ಯವನ್ನು ಸಹಿಸಿಕೊಂಡಿದ್ದೇನೆ, ತನ್ನ ತವರು ಮನೆಯವರು ಯಾವ ರೀತಿ ತನ್ನನ್ನು ದೂರ ಇಟ್ಟಿದ್ದಾರೆ, ಎರಡೂ ಕಡೆ ಆಶ್ರಯ ಸಿಗದೆ ತಾನು ಹೇಗೆ ಕಷ್ಟ ಅನುಭವಿಸುತ್ತಿದ್ದೇನೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಳು.

ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಏಪ್ರಿಲ್ 2ರಂದು ಆಕೆಯ ಪತಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಆಕೆಯನ್ನು ಇನ್ನೊಬ್ಬ ಪುರುಷ ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. ಆದರೆ, ತನ್ನ ಪತಿ, ಪೋಷಕರು ಮತ್ತು ಪ್ರಿಯಕರನ ಜೊತೆ ನ್ಯಾಯಾಲಯಕ್ಕೆ ಹಾಜರಾದ ಆ ಯುವತಿ ತನ್ನ ಗಂಡ ಮಾಡಿದ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದ ನಂತರ ಈ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿತು.

ಆಕೆಯ ಪ್ರಿಯಕರನನ್ನು ಕೂಡ ಈ ಬಗ್ಗೆ ವಿಚಾರಿಸಲಾಯಿತು. ಆತನೂ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೆ ನೀಡಿದನು. ಅವಳ ವಿಚ್ಛೇದನದ ನಂತರ ಅವಳನ್ನು ಮದುವೆಯಾಗುವ ಉದ್ದೇಶವಿದೆ ಎಂದು ಕೂಡ ಹೇಳಿದನು. ಯಾವುದೇ ರೀತಿಯಲ್ಲಿ ಅವಳಿಗೆ ಕಿರುಕುಳ ನೀಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದನು.

ಆಕೆಯ ಗಂಡನ ವಯಸ್ಸು, ಆಕೆಯ ವಯಸ್ಸು ಗಮನಿಸಿದ ನ್ಯಾಯಾಲಯವು ಆಕೆ ತನ್ನ ಸ್ವಂತ ಇಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳುವ ಪ್ರೌಢಿಮೆ ಹೊಂದಿದ್ದಾಳೆ ಎಂದು ದೃಢಪಡಿಸಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *