ಡಿಜೆ ಹಳ್ಳಿ ಬಳಿ ಇರುವ ಶಾಂಪುರ ರಸ್ತೆಯಲ್ಲಿ ನಿನ್ನೆ ಅಗ್ನಿ ದುರಂತ.
ಬೆಂಗಳೂರು: ನಗರದ ಡಿಜೆ ಹಳ್ಳಿ ಬಳಿ ಇರುವ ಶಾಂಪುರ ರಸ್ತೆಯಲ್ಲಿ ನಿನ್ನೆ ಅಗ್ನಿ ದುರಂತವೊಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಆರು ಹಸುಗಳು ಸಾವನ್ನಪ್ಪಿದ್ದವು. ಶೆಡ್ನಲ್ಲಿದ್ದ 20 ಹಸುಗಳ ಪೈಕಿ ಆರು ಮೂಕಜೀವಿಗಳು ಬೆಂಕಿಯ (Fire) ಜ್ವಾಲೆಗೆ ನರಳಿ ಪ್ರಾಣ ಬಿಟ್ಟಿದ್ದಾವೆ.
ಮೊದಲು ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ನಡೆದಿದೆ ಎನ್ನಲಾಗಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೇಕಂತಲೇ ಕಿರಾತಕನೊಬ್ಬ ಹಸುಗಳಿದ್ದ ಶೆಡ್ಗೆ ಬೆಂಕಿ ಇಟ್ಟು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. . ಸದ್ಯ ಘಟನೆ ಸಂಬಂಧ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಂಕಿ ಇಟ್ಟು ಮೂಕಪ್ರಾಣಿಗಳನ್ನ ಬಲಿಪಡೆದ ವಿಕೃತನಿಗೆ ಬಲೆ ಬೀಸಿದ್ದಾರೆ.
For More Updates Join our WhatsApp Group :




