ತುಮಕೂರಿನ ಪ್ರತಿಷ್ಠಿತ ವಿದ್ಯಾನಿಧಿ ಪಿ ಯು ಕಾಲೇಜಿಗೆ ಉತ್ತಮ ಫಲಿತಾಂಶ.
ತುಮಕೂರು : ತುಮಕೂರಿನ ಪ್ರತಿಷ್ಠಿತ ವಿದ್ಯಾನಿಧಿ ಪಿಯು ಕಾಲೇಜು ಈ ಬಾರಿಯೂ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ರೋಹನ್ ಮತ್ತು ಪೂರ್ವಿ 597 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಮೂರನೇ ರ್ಯಾಂಕ್ ಗಳಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಗುಬ್ಬಿ ಮೂಲದ ಪೂರ್ವಿ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ರೋಹನ್ ಅವರ ಈ ಸಾಧನೆ ವಿಶೇಷವಾಗಿದೆ. ಕಳೆದ ವರ್ಷ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದ ಜ್ಞಾನವಿ ಅವರ ಸಹೋದರರಾಗಿರುವ ರೋಹನ್, ಈ ಬಾರಿಯೂ 597 ಅಂಕ ಪಡೆದು ಕುಟುಂಬದ ಸಾಧನೆಯನ್ನು ಮುಂದುವರಿಸಿದ್ದಾರೆ. ಅಕ್ಕ-ತಮ್ಮ ಇಬ್ಬರೂ ಶೇ. 99.5 ಅಂಕ ಗಳಿಸಿರುವುದು ವಿಶೇಷ ಗಮನಸೆಳೆದಿದೆ.
ಫಲಿತಾಂಶ ಪ್ರಕಟವಾದ ತಕ್ಷಣ ಕಾಲೇಜಿನಲ್ಲಿ ಸಂಭ್ರಮಾಚರಣೆ ನಡೆದಿದ್ದು, ಟಾಪರ್ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಶುಭಾಶಯ ಕೋರಿದ್ದಾರೆ.
For More Updates Join our WhatsApp Group :




