ಪ್ರೀತಿ ನಿರಾಕರಿಸಿದಕ್ಕೆ ಯುವಕ ಆತ್ಮ*ತ್ಯೆ .!

ಕಲೆಕ್ಷನ್ ಆತ್ಮ*ತ್ಯೆ: ಪ್ರೀತಿ ನಿರಾಕರಿಸಿದುದಕ್ಕೆ ಯುವಕ ಅಂತ್ಯ.!

ಯುವತಿ ಮದುವೆಗೆ ಒಪ್ಪದೇ ಕಾಲೇಜು ಲವ್ ದಿನ ಅಂತ್ಯ..

ಬೆಂಗಳೂರು : ಮದುವೆಗೆ ಯುವತಿ ಒಪ್ಪದಿದ್ದಕ್ಕೆ ಮನನೊಂದ ಯುವಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ  ಶರಣಾಗಿರುವಂತಹ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಭಿಷೇಕ್(23) ಮೃತ ಯುವಕ. ಇತ್ತೀಚೆಗಷ್ಟೇ ಅಭಿಷೇಕ್ ಖಾಸಗಿ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಅಭಿಷೇಕ್​ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಯುವತಿಯ ಜೊತೆ ಪ್ರೀತಿ ಮಾಡಿದ. ಕಳೆದ ಆರೇಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿತ್ತು. ಇತ್ತ ಯುವತಿಯ ಪೋಷಕರು ಅಭಿಷೇಕ್ ಜತೆ ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಯುವತಿ ಅಭಿಷೇಕ್​ನನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ. ಇದರಿಂದ ಮನನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೇಣು ಬಿಗಿದ ಸ್ಥಿತಿಯಲ್ಲಿ 6ನೇತರಗತಿ ವಿದ್ಯಾರ್ಥಿನಿ ಶವಪತ್ತೆ

ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ ಆಗಿರುವಂತಹ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಪ್ರದೇಶದ ಎ ಬ್ಲಾಕ್‌ನಲ್ಲಿ ನಡೆದಿದೆ. ಜೀವಿತಾ(12) ಮೃತ ವಿದ್ಯಾರ್ಥಿನಿ. ಸದ್ಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಮ್ಮನ​ಕಟ್ಟೆಯ ಶಾಲೆಯಲ್ಲಿ ಜೀವಿತಾ 6ನೇ ತರಗತಿ ಓದುತ್ತಿದ್ದಳು. ರಜೆ ಇದ್ದ ಕಾರಣ ಮನೆಯಲ್ಲೇ ಇದ್ದಳು. ಆದರೆ ಏಕಾಏಕಿ ದುರ್ಘಟನೆ ಸಂಭವಿಸಿದೆ. ಸದ್ಯ ಬಾಲಕಿ ಜೀವಿತಾ ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಸಂಪೂರ್ಣ ತನಿಖೆಯಿಂದಲೇ ನಿಜಾಂಶ ಬಹಿರಂಗವಾಗಬೇಕಿದೆ. ಬಾಲಕಿ ತಾಯಿ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ.

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಚಿಕ್ಕಬಳ್ಳಾಪುರ ನಗರದದಲ್ಲಿ ನಡೆದಿದೆ. ಮನೋರೋಗದಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ವಿಜಿ(57) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *