ವಿಶ್ವದ ಮಹಿಳೆಯರಿಗೆ ಮಹತ್ವದ ಕ್ಷಣ: ಮಾಳವಿಕಾ ಅವಿನಾಶ್

ವಿಶ್ವದ ಮಹಿಳೆಯರಿಗೆ ಮಹತ್ವದ ಕ್ಷಣ: ಮಾಳವಿಕಾ ಅವಿನಾಶ್

ಮಹಿಳಾ ಮೀಸಲಾತಿಗೆ ಸಂಭ್ರಮ.

ಮೈಸೂರು: ಮಹಿಳಾ ಮೀಸಲಾತಿಯು ಕರ್ನಾಟಕ, ಭಾರತ ಮಾತ್ರವಲ್ಲ ವಿಶ್ವದ ಎಲ್ಲ ಮಹಿಳೆಯರಿಗೂ ಸಂಭ್ರಮದ ಕ್ಷಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕಾ ಅವಿನಾಶ್ ಅವರು ತಿಳಿಸಿದ್ದಾರೆ. ಪ್ರಧಾನಿಯವರಿಂದ ಇದೊಂದು ಪ್ರಮುಖ ನಿರ್ಣಯ ಎಂದು ವಿಶ್ಲೇóಷಿಸಿದ್ದಾರೆ.

ಮೈಸೂರಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಅವರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಜೀ ಯವರ ಕನಸಿನ ಭಾರತ, 2047ರ ವಿಕಸಿತ ಭಾರತಕ್ಕೆ ಮಹಿಳಾ ನೇತೃತ್ವದ ಅಭಿವೃದ್ಧಿಯ ಚಿಂತನೆ ಇದರ ಹಿಂದಿದೆ ಎಂದು ವಿವರ ನೀಡಿದರು. ಇದು ಮಹಿಳಾ ನಾಯಕತ್ವದ ಪರಿಕಲ್ಪನೆ ಎಂದರು. ರಾಜಕೀಯ ಪಕ್ಷಗಳು ಇದರಲ್ಲಿ ರಾಜಕಾರಣ ಮಾಡುವುದಿಲ್ಲ ಎಂಬ ಅಪೇಕ್ಷೆ ಮತ್ತು ನಮ್ಮ ನಿರೀಕ್ಷೆ ಎಂದು ಹೇಳಿದರು.

ರಾಜಕೀಯವಾಗಿ ಮಹಿಳಾ ಸಬಲೀಕರಣ ಮಾಡುವ ಶೇ 33 ಮೀಸಲಾತಿಯನ್ನು ನೀಡಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರು ಇದೇ 16ರಿಂದ ಕರೆದಿದ್ದಾರೆ. ಸಂಸತ್ತಿನ ಅಧಿವೇಶನದಲ್ಲಿ 3 ದಿನಗಳ ಕಾಲ ನಾರಿಶಕ್ತಿ ವಂದನ್ ಕುರಿತು ಚರ್ಚೆ ನಡೆಯಲಿದೆ. ಇದು ಕಾನೂನಾಗಿ ಜಾರಿಗೊಳ್ಳಲಿದೆ. ಈಗಾಗಲೇ ಲೋಕಸಭೆಯಲ್ಲಿ 543 ಸೀಟುಗಳಿದ್ದು ಅದನ್ನು ಹೆಚ್ಚಿಸಿ 816 ಮಾಡಲಿದ್ದಾರೆ. ಇದರಿಂದ ಪುರುಷರ ಇರುಸುಮುರುಸನ್ನು ತಪ್ಪಿಸಲು ಸಾಧ್ಯವಿದೆ. ಜನಸಂಖ್ಯೆ ಹೆಚ್ಚಳದಿಂದ ಸೀಟುಗಳನ್ನು ಹೆಚ್ಚಿಸುವ ಅನಿವಾರ್ಯತೆಯೂ ಇದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ಅಶ್ವಿನ್ ಗೌಡ, ನಿಕಟಪೂರ್ವ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಳಾ ಸೋಮಶೇಖರ್, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ರೀನಾ ಪ್ರಕಾಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಣುಕಾ ರಾಜು ಮತ್ತು ಮೈಸೂರು ಗ್ರಾಮಾಂತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ನಳಿನಾ ಇದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *