ಲೈಂಗಿಕ ಕಿರುಕುಳ, ಮತಾಂತರ ಆರೋಪಗಳ ನಡುವೆ ಕಾರ್ಯಾಚರಣೆ ಸ್ಥಗಿತ.
ನಾಸಿಕ್: ಭಾರತದ ಐಟಿ ದೈತ್ಯ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ ನಾಸಿಕ್ ಕಚೇರಿಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೇವಲ ಕೆಲಸದ ಕಿರುಕುಳ ಎಂದು ಆರಂಭವಾದ ದೂರುಗಳು ಈಗ ಅತ್ಯಾಚಾರ, ಮತಾಂತರದ ಸಂಚು ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳಂತಹ ಭಯಾನಕ ಸ್ವರೂಪ ಪಡೆದುಕೊಂಡಿವೆ.
ನಾಸಿಕ್ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್ ಅವರು ಈ ಪ್ರಕರಣದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. “ಇದು ಕೇವಲ ವೈಯಕ್ತಿಕ ಘರ್ಷಣೆಯಲ್ಲ, ಬದಲಿಗೆ ಇದೊಂದು ಸಂಘಟಿತ ಜಾಲದಂತೆ ಕಂಡುಬರುತ್ತಿದೆ. ಹಿರಿಯ ಅಧಿಕಾರಿಗಳೇ ತಮ್ಮ ಕೈಕೆಳಗಿನ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ,” ಎಂದು ಅವರು ತಿಳಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.
ತನಿಖೆಯ ತೀವ್ರತೆಯನ್ನು ಪರಿಗಣಿಸಿ, ಪ್ರಕರಣದ ವಿವರಗಳನ್ನು ಭಯೋತ್ಪಾದನಾ ನಿರೋಧಕ ದಳ (ATS) ಮತ್ತು ರಾಷ್ಟ್ರೀಯ ತನಿಖಾ ದಳ (NIA) ಗೆ ನೀಡಲಾಗಿದೆ. ಈ ಜಾಲಕ್ಕೆ ವಿದೇಶಿ ಹಣಕಾಸಿನ ನೆರವು ಅಥವಾ ಅಂತಾರಾಷ್ಟ್ರೀಯ ಸಂಪರ್ಕಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಎಫ್ಐಆರ್ ದಾಖಲಾದ ಪ್ರಮುಖ ಆರೋಪಿಗಳು ಪ್ರಸ್ತುತ ಎಂಟು ಉದ್ಯೋಗಿಗಳ ವಿರುದ್ಧ 9 ಎಫ್‌ಐಆರ್‌ಗಳು ದಾಖಲಾಗಿದ್ದು, ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ.
ಟಿಸಿಎಸ್ ನಾಸಿಕ್ ಶಾಖೆಯು ಈಗ ಬಿಕೋ ಎನ್ನುತ್ತಿದೆ. ಒಂದು ಕಡೆ ಕಾನೂನು ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಐಟಿ ಕ್ಷೇತ್ರದ ಸುರಕ್ಷತೆಯ ಬಗ್ಗೆ ಜನರಲ್ಲಿ ಪ್ರಶ್ನೆಗಳು ಎದ್ದಿವೆ. ತನಿಖೆ ಮುಂದುವರೆದಂತೆ ಇನ್ನಷ್ಟು ಆಘಾತಕಾರಿ ಸತ್ಯಗಳು ಹೊರಬರುವ ಸಾಧ್ಯತೆಯಿದೆ.
For More Updates Join our WhatsApp Group :




