MSP ಕಾನೂನು ಖಾತರಿ ನೀಡಲು ಆಗ್ರಹ; ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ
ಬೆಂಗಳೂರು: ಫೀಡಂ ಪಾರ್ಕ್ ಅವರಣದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ರೈತ ವಿರೋಧಿ ಯು.ಎಸ್.ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಿ ಮತ್ತು ಎಂ.ಎಸ್.ಪಿ.ಗೆ ಕಾನೂನು ಬದ್ದ ಖಾತರಿ ನೀಡಿ , ದೇಶ ರೈತರು ಮತ್ತು ಕೃಷಿಯನ್ನು ಉಳಿಸಲು ಸತ್ಯಾಗ್ರಹ ಕಾರ್ಯಕ್ರಮ.
ವಿಧಾನಪರಿಷತ್ ಸದಸ್ಯರಾದ ಸಲೀಮ್ ಅಹಮದ್ ರವರು, ರಾಜ್ಯ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ ಗೌಡರು, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎಸ್.ಕೇಶವಮೂರ್ತಿ, ಮೋಹನ್ ಕುಮಾರ್ ರವರು ಯುವ ಕಾಂಗ್ರೆಸ್ ಸಮಿತಿಯ ಮುಖಂಡರುಗಳು, ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಸಲೀಮ್ ಅಹಮದ್ ರವರು* ಮಾತನಾಡಿ ರೈತ ಪರ ಹೋರಾಟ ಹಿನ್ನಲೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಕಿಸಾನ್ ನ್ಯಾಯ ಸತ್ಯಾಗ್ರಹ ಮಾಡುತ್ತಿದ್ದಾರೆ. 11ವರ್ಷಗಳಿಂದ ಬಿಜೆಪಿ ಕೇಂದ್ರ ಸರ್ಕಾರ ರೈತರ ಹಿತ ಕಾಪಾಡಲ್ಲಿಲ.
ಇಂಡೋ-ಅಮೇರಿಕಾ ಒಪ್ಪಂದದಿಂದ ದೇಶದ ರೈತರಿಗೆ ಮರಣ ಶಾಸನವಾಗಿದೆ. 24ಕೋಟಿ ಯುವಕ-ಯುವತಿಯರಿಗೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿ ಎರಡು ಕೋಟಿ ಉದ್ಯೋಗ ಕೊಟ್ಟಿಲ್ಲ. ಕಪ್ಪು ಹಣ ತರುತ್ತೇವೆ ಎಂದು ಸುಳ್ಳು ಹೇಳಿ ದೇಶದ ಜನರಿಗೆ ಮೋಸ ಮಾಡಿದ್ದಾರೆ.
ನಮಗೆ ಅಧಿಕಾರ ಕೊಡಿ ರಾಮರಾಜ್ಯ ಮಾಡುತ್ತೇವೆ ಎಂದು ಹೇಳಿದ್ದರು ಅದರೆ ಇಂದು ರಾವಣರಾಜ್ಯವಾಗಿದೆ. ಕೊರೋನ ಸಂದರ್ಭದಲ್ಲಿ ಲಕ್ಷಾಂತರ ಜನರ ಸಾವನ್ನಪ್ಪಿದ್ದರು, ದೇಶದ ಜನರ ರಕ್ಷಣೆಗೆ ಬರಲಿಲ್ಲ.
ಪ್ರಧಾನಿ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿವಾದ, ಕೋಮುವಾದ ಬಿಜೆಪಿ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷ ಸಂವಿಧಾನ ಎತ್ತಿ ಹಿಡಿಯುವ ಮತ್ತು ಎಲ್ಲ ಜಾತಿ, ಧರ್ಮದವರು ಸಹೋದರರಂತೆ ಬಾಳುವ ಸಿದ್ದಾಂತ ನಂಬಿಕೆವುಳ್ಳವುರು.
ರೈತ ವಿರೋದಿ ಒಪ್ಪಂದ ರದ್ದು ಮಾಡಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ನೇತೃತ್ವ ಮಾರ್ಗದರ್ಶನದಲ್ಲಿ ಸತ್ಯಾಗ್ರಹ ಹಮ್ಮಕೊಳ್ಳಲಾಗಿದೆ ಎಂದು ಹೇಳಿದರು.
For More Updates Join our WhatsApp Group :



