ಸಿವಿಲ್ ಸರ್ವೀಸ್ ವಿದ್ಯಾರ್ಥಿನಿಯ ದಾರುಣ ಸಾ*.!
ನವದೆಹಲಿ : ತನ್ನ ಮನೆಯ ಕೊಠಡಿಯಲ್ಲಿ ಕುಳಿತು ದೇಶ ಸೇವೆ ಮಾಡುವ ಕನಸಿನೊಂದಿಗೆ ಸಿವಿಲ್ ಸರ್ವೀಸಸ್ ಪರೀಕ್ಷೆಗೆಂದು ಓದುತ್ತಿದ್ದ 22 ವರ್ಷದ ಯುವತಿಯ ಕೊಲೆ ಪ್ರಕರಣದಲ್ಲಿ ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಮರಣೋತ್ತರ ಪರೀಕ್ಷೆಯ ವರದಿಯು ಆಕೆ ಸಾವನ್ನಪ್ಪುವ ಮೊದಲು ಎದುರಿಸಿದ ನರಕಯಾತನೆಯನ್ನು ಎತ್ತಿ ತೋರಿಸಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.
ಸಾವಿನವರೆಗೂ ಹೋರಾಡಿದ್ದ ಯುವತಿ ವೈದ್ಯಕೀಯ ವರದಿಗಳ ಪ್ರಕಾರ, ಯುವತಿಯ ತೋಳುಗಳು ಮತ್ತು ಕೈಗಳ ಮೇಲೆ ಅನೇಕ ಮೂಗೇಟುಗಳಿವೆ. ಇದು ಆಕೆ ಸುಲಭವಾಗಿ ಶರಣಾಗಲಿಲ್ಲ, ಬದಲಾಗಿ ತನ್ನ ಪ್ರಾಣ ಉಳಿಸಿಕೊಳ್ಳಲು ದಾಳಿಕೋರನೊಂದಿಗೆ ಕೊನೆಯ ಕ್ಷಣದವರೆಗೂ ಸೆಣಸಾಡಿದ್ದಾಳೆ ಎಂಬುದನ್ನು ಸಾಬೀತುಪಡಿಸಿದೆ. ಆದರೆ, ಆರೋಪಿ ಮೊಂಡಾದ ವಸ್ತುವಿನಿಂದ ಆಕೆಯ ಮುಖಕ್ಕೆ ಬಲವಾಗಿ ಹೊಡೆದ ಪರಿಣಾಮ ಆಕೆಯ ಮೂಗಿನ ಮೂಳೆ ಮುರಿದುಹೋಗಿತ್ತು.
ಚಾರ್ಜಿಂಗ್ ಕೇಬಲ್ನಿಂದ ಉಸಿರುಗಟ್ಟಿಸಿ ಹತ್ಯೆ ಯುವತಿಯ ಕುತ್ತಿಗೆಯ ಸ್ನಾಯುಗಳಲ್ಲಿ ರಕ್ತಸ್ರಾವ ಮತ್ತು ಥೈರಾಯ್ಡ್ ಕಾರ್ಟಿಲೆಜ್ ಮುರಿತಗೊಂಡಿರುವುದು ಕಂಡುಬಂದಿದೆ. ಮೊಬೈಲ್ ಚಾರ್ಜಿಂಗ್ ಕೇಬಲ್ ಬಳಸಿ ಕತ್ತು ಹಿಸುಕಿದ ಪರಿಣಾಮ ಉಸಿರುಕಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆಕೆ ಪ್ರಜ್ಞಾಹೀನಳಾದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ ಮಾದರಿಗಳನ್ನು ಸಂರಕ್ಷಿಸಲಾಗಿದೆ.
ಪರಾರಿಯಾಗುವ ಮೊದಲು ತನ್ನ ರಕ್ತದ ಕಲೆಗಳಿರುವ ಬಟ್ಟೆಗಳನ್ನು ಬದಲಿಸಿಕೊಂಡು, ಬೆಳಗ್ಗೆ 7.20ಕ್ಕೆ ಅಂದರೆ ಪೋಷಕರು ಬರುವ ಕೆಲವೇ ನಿಮಿಷಗಳ ಮೊದಲು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಘಟನೆಗೂ ಕೆಲವೇ ಗಂಟೆಗಳ ಮೊದಲು ರಾಜಸ್ಥಾನದ ಅಲ್ವಾರ್ನಲ್ಲಿ ತನ್ನದೇ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದ ರಾಹುಲ್ ಮೀನಾ, ಅಲ್ಲಿಂದ ದೆಹಲಿಗೆ ಬಂದು ಈ ಕೃತ್ಯವೆಸಗಿದ್ದಾನೆ. ಕೆಲಸದಿಂದ ವಜಾಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಇಡೀ ಕುಟುಂಬವನ್ನೇ ನಾಶಮಾಡಲು ಈತ ಮುಂದಾಗಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ.
For More Updates Join our WhatsApp Group :




