ಭಾರತದ ಸ್ಟಾರ್ಟ್‌ಅಪ್ ಇಕೋ ಸಿಸ್ಟಂ-ಮೊದಲ ತ್ರೈಮಾಸಿಕ ಸಾಧನೆ.

ಭಾರತದ ಸ್ಟಾರ್ಟ್‌ಅಪ್ ಇಕೋ ಸಿಸ್ಟಂ-ಮೊದಲ ತ್ರೈಮಾಸಿಕ ಸಾಧನೆ.

ನಾಯಕತ್ವದಲ್ಲಿ ಭಾರತದಲ್ಲಿಯೇ ಅಗ್ರಗಣ್ಯ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಭಾರತದ ಸ್ಟಾರ್ಟ್‌ಅಪ್ ಇಕೋ ಸಿಸ್ಟಂಗಳಲ್ಲಿ ಬೆಂಗಳೂರು 2026 ರ ಮೊದಲ ತ್ರೈಮಾಸಿಕದಲ್ಲಿ 89 ಒಪ್ಪಂದಗಳ ಮೂಲಕ $823 ಮಿಲಿಯನ್ ನಿಧಿಯೊಂದಿಗೆ ತನ್ನ ನಾಯಕತ್ವವನ್ನು ಮುಂದುವರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನ ಸಾಧನೆಯನ್ನು ಭಾರತದ ಇತರ  ಪ್ರಮುಖ ನಗರಗಳಿಗೆ ಹೋಲಿಸಿದರೆ, ದೆಹಲಿ 74 ಒಪ್ಪಂದಗಳಲ್ಲಿ $538 ಮಿಲಿಯನ್ ಮತ್ತು ಮುಂಬೈ 34 ಒಪ್ಪಂದಗಳಲ್ಲಿ $402 ಮಿಲಿಯನ್ ನಿಧಿಯನ್ನು ದಾಖಲಿಸಿವೆ. ಇದು ಬಂಡವಾಳ ಹರಿವು ಮತ್ತು ಒಪ್ಪಂದದ ವೇಗ ಎರಡರಲ್ಲೂ ಇರುವ ಸ್ಪಷ್ಟ ಅಂತರವನ್ನು ಒತ್ತಿಹೇಳುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು ಇಂದು ಅಮೆರಿಕ, ಯುರೋಪ್ ಹಾಗೂ ಚೀನಾದ ಹೊರಗೆ ಅತಿದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿ ಮತ್ತು ಜಾಗತಿಕವಾಗಿ 5 ನೇ ಅತಿದೊಡ್ಡ ಯುನಿಕಾರ್ನ್ ಕೇಂದ್ರವಾಗಿ ನಿಂತಿದೆ. ನಮ್ಮ ನಾಯಕತ್ವವು ಬಂಡವಾಳ ಹಾಗೂ ಉತ್ತಮ ಗುಣಮಟ್ಟದ ಉದ್ಯಮಿಗಳನ್ನು ಆಕರ್ಷಿಸುತ್ತಲೇ ಇರುವ ಪ್ರಬಲ, ಸಂಯೋಜಿತವಾದ ಇಕೋ ಸಿಸ್ಟಂನಿಂದ ಮೂಡಿ ಬಂದಿದೆ.ಡೀಪ್ ಟೆಕ್’ನಿಂದ ದೈನಂದಿನ ತಂತ್ರಜ್ಞಾನದವರೆಗೆ, ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಪ್ರತಿಯೊಂದು ಪ್ರಮುಖ ವಲಯದಲ್ಲೂ ಪ್ರಾಬಲ್ಯ ಸಾಧಿಸಿವೆ ಎಂದು ಮಾಹಿತಿ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ,  ಇಂದು ಬೆಂಗಳೂರು ನಗರವನ್ನು ಭಾರತದ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರದಲ್ಲಿರಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *