Bangalore ಏರ್ಪೋರ್ಟ್‌ನಲ್ಲಿ ದಾಖಲೆಯ ಬಿಸಿಲು: 38.2°C ತಾಪಮಾನ

Bangalore ಏರ್ಪೋರ್ಟ್‌ನಲ್ಲಿ ದಾಖಲೆಯ ಬಿಸಿಲು: 38.2°C ತಾಪಮಾನ

ಬೇಸಿಗೆಯ ತೀವ್ರತೆ ಹೆಚ್ಚಳ; ಮುಂದಿನ ದಿನಗಳಲ್ಲಿ ಮಳೆ ಸಾಧ್ಯತೆ.

ಬೆಂಗಳೂರು : ಬೇಸಿಗೆ ಜನರಿಗೆ ಸಾಕಪ್ಪಾ ಎನಿಸುವಷ್ಟು ಸುಸ್ತು ಮಾಡಿದೆ. ಅದರಲ್ಲಿಯೂ ವೆದರ್‌ನಿಂದಲೇ ಫೇಮಸ್‌ ಆಗಿದ್ದ ಬೆಂಗಳೂರಿಗೆ ಬಿಸಿಲಿನ ಕೆಟ್ಟ ದೃಷ್ಟಿ ಬಿದ್ದಂತಿದೆ.ನಿಂತಲ್ಲಿ ನಿಲ್ಲಲೂ ಆಗದೇ, ಕೂತಲ್ಲಿ ಕೂರಲೂ ಆಗದೇ, ಹೊರಗಡೆ ಹೋಗಲಾರದೆ, ಒಳಗಡೆ ಕೂರಲಾರದಂತೆ ಮಾಡಿರೋದು ಈ ವರ್ಷದ ಬೇಸಿಗೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ38.2°C ಗರಿಷ್ಠ ತಾಪಮಾನ ದಾಖಲಾಗಿದೆ. ನಗರ ಪ್ರದೇಶದಲ್ಲಿಯೂ 36 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದೆ.ಫ್ಲೈಟ್‌ ಲ್ಯಾಂಡ್‌ ಆದ ತಕ್ಷಣವೇ ಬೆಂಗಳೂರಿನ ಬಿಸಿಲು ತಗುಲುತ್ತಿದ್ದು, ಜನ ನಲುಗಿದ್ದಾರೆ. ಆದರೆ ಐಎಂಡಿ ಮಾಹಿತಿ ಪ್ರಕಾರ ಇನ್ನೇನು ಎರಡು ದಿನಗಳಲ್ಲಿ ಇನ್ನಷ್ಟು ಬಿಸಿಲು ಜಾಸ್ತಿಯಾಗಲಿದೆ. ಅದರ ಮಧ್ಯೆಯೂ ಬೆಂಗಳೂರಿನಲ್ಲಿ ಬುಧವಾರ ಅಥವಾ ಗುರುವಾರದಿಂದ ಎರಡು ದಿನ ಮಳೆ ಬೀಳಬಹುದು ಎನ್ನಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *