ಇಎಂಐ (EMI) ಮೂಲಕ ನೀರಿನ ಸಂಪರ್ಕ ಪಡೆಯಲು ಸಾರ್ವಜನಿಕರಿಗೆ ಸುವರ್ಣಾವಕಾಶ.
ಬೆಂಗಳೂರು : ಬೆಂಗಳೂರಿನ ಎಲ್ಲಾ ನಾಗರಿಕರಿಗೂ ಆರೋಗ್ಯಕರವಾದ ಶುದ್ಧ ಕಾವೇರಿ ನೀರನ್ನು ನೀಡುವ ಮೂಲಕ ಜನರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರ ಆಶಯದಂತೆ, ಆರ್ಥಿಕ ಹೊರೆಯಿಲ್ಲದೆ ಸುಲಭವಾಗಿ ನೀರಿನ ಸಂಪರ್ಕ ಕಲ್ಪಿಸಲು ಜಾರಿಗೆ ತರಲಾಗಿರುವ ‘ಸರಳ ಕಾವೇರಿ’ ಯೋಜನೆಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಸರಳ ಕಾವೇರಿ ಯೋಜನೆಯ ಮುಖ್ಯಾಂಶಗಳು:
1. ಸಣ್ಣ ನಿವೇಶನದಾರರಿಗೆ ಆದ್ಯತೆ: 600 ಅಡಿಗಳ ಬಿಲ್ಡ್-ಅಪ್ ಏರಿಯಾ ಹೊಂದಿರುವ ಸಣ್ಣ ನಿವೇಶನದಾರರು ಕೇವಲ 1,000 ರೂ. ಆರಂಭಿಕ ಹಣ ಪಾವತಿಸಿ ನೀರಿನ ಸಂಪರ್ಕ ಪಡೆಯಬಹುದು. ಬಾಕಿ ಉಳಿದ ಮೊತ್ತವನ್ನು ಸುಲಭ ಕಂತುಗಳಲ್ಲಿ (EMI) ಪಾವತಿಸಲು ಅವಕಾಶ ನೀಡಲಾಗಿದೆ.
2. *ಅಪಾರ್ಟ್ಮೆಂಟ್ ಗಳಿಗೆ ಇಎಂಐ ಸೌಲಭ್ಯ* : ಒಮ್ಮೆಲೇ ದೊಡ್ಡ ಮೊತ್ತದ ಡಿಮ್ಯಾಂಡ್ ನೋಟಿಸ್ (DN) ಪಾವತಿಸಲು ಕಷ್ಟಪಡುವ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳಿಗೆ ಇದು ವರದಾನವಾಗಿದೆ. ಒಟ್ಟು ಶುಲ್ಕದ 20% ರಷ್ಟು ಮೊತ್ತವನ್ನು ಆರಂಭದಲ್ಲಿ ಪಾವತಿಸಿ ಸಂಪರ್ಕ ಪಡೆಯಬಹುದು. ಉಳಿದ 80% ಹಣವನ್ನು ಪಾವತಿಸಲು 12 ತಿಂಗಳ ಕಾಲಾವಕಾಶ ನೀಡಲಾಗಿದೆ.
3. *ನಾನ್-ಡೊಮೆಸ್ಟಿಕ್ ಗ್ರಾಹಕರಿಗೂ ಸೌಲಭ್ಯ* : ಕೇವಲ ಮನೆಗಳಿಗೆ ಮಾತ್ರವಲ್ಲದೆ, ವಾಣಿಜ್ಯ ಕಟ್ಟಡಗಳಿಗೂ ಇಎಂಐ ಮೂಲಕ ಸರಳ ಕಾವೇರಿ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನಾನ್-ಡೊಮೆಸ್ಟಿಕ್ ಗ್ರಾಹಕರು ಕೂಡಾ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
4. *ಮನೆ ಮನೆಗೆ ಶುದ್ಧ ನೀರು:* ಆರೋಗ್ಯಕರವಾದ ಶುದ್ಧ ಕಾವೇರಿ ನೀರನ್ನು ಮನೆ ಮನೆಗೆ ತಲುಪಿಸುವ ಮೂಲಕ ಜನರ ಆರೋಗ್ಯವನ್ನು ಕಾಪಾಡುವ ಸಂಕಲ್ಪವನ್ನು ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ನಗರದಾದ್ಯಂತ ಸಮರ್ಪಕ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲಮಂಡಳಿಯು ಈಗಾಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಈ ಯೋಜನೆಯ ವಿಸ್ತರಣೆಯು ನಾಗರಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




