ಮಹೇಶ್ವರ್ ರಾವ್ ನಿರ್ದೇಶನ: ಪ್ರಮುಖ ರಸ್ತೆಗಳ ಡ್ರೈನ್, ಗ್ರೇಟಿಂಗ್ ಪರಿಶೀಲನೆ ಕಡ್ಡಾಯ.
ಬೆಂಗಳೂರು: ಮಾನ್ಸೂನ್ ಪೂರ್ವ ಸಿದ್ದತೆ ಪ್ರಯುಕ್ತ ಜಿಬಿಎ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆರ್ಟೀರಿಯಲ್ ಹಾಗೂ ಸಬ್- ಆರ್ಟೀರಿಯಲ್ ಮತ್ತು ಇತರೇ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಚರಂಡಿ ಹೂಳು ತಗೆಯುವುದು, ಶೋಲ್ಡರ್ ಡ್ರೈನ್ಸ್ ಹಾಗೂ ಗ್ರೇಟಿಂಗ್ಸ್ ಗಳ ಸ್ವಚ್ಚತೆಯನ್ನು ಖಾತರಿಪಡಿಸಿಕೊಳ್ಳಲು *ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ನಗರ ಪಾಲಿಕೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
• ಎಲ್ಲಾ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಎರಡೂ ಕಡೆ ತಗ್ಗು ಪ್ರದೇಶ ಮತ್ತು ಚರಂಡಿಗಳು ತೆಗೆದಿರುವುದನ್ನು ಮತ್ತು Intersect ಆಗಿರುವುದನ್ನು ಗಮನದಲ್ಲಿಟ್ಟುಕೊಂಡು ಒಂದು ಕಿ.ಮೀ (5 X 2 ಕಡೆ)= 10 ಕಡೆ ಡ್ರೈನ್ ಸ್ಲಾಬ್ ಗಳು/ ಗ್ರೇಟಿಂಗ್ ಗಳನ್ನು ತೆರೆದು ಮಳೆ ನೀರು ಸರಾಗವಾಗಿ ಹರಿಯಲು ಅವಕಾಶವಿದಯೇ ಅಥವಾ ಹೂಳು ತುಂಬಿದೆಯೇ ಎಂಬುದೆ ಬಗ್ಗೆ ಪರಿಶೀಲಿಸತಕ್ಕದ್ದು.
• ಮಳೆ ನೀರು ಚರಂಡಿಗೆ ಅಡ್ಡಲಾಗಿ ಮರಗಳು ಅಥವಾ ಇತರೇ ಯಾವುದಾದರೂ ಉಪಯುಕ್ತತೆಗಳು ಇದ್ದಲ್ಲಿ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯಿಸಿ ಸ್ಥಳಾಂತರ / ತೆರವುಗೊಳಿಸಲು ಕ್ರಮವಹಿಸತಕ್ಕದ್ದು.
For More Updates Join our WhatsApp Group :




