6 ವರ್ಷಗಳಿಂದ ಚುನಾವಣೆ ಇಲ್ಲ: ಬೆಂಗಳೂರಿನ ಆಡಳಿತ ವ್ಯವಸ್ಥೆ ವಿರುದ್ಧ ಆಮ್ ಆದ್ಮಿ ಪಕ್ಷ ಆಕ್ರೋಶ
ಬೆಂಗಳೂರು: 2020 ರಿಂದ ಬೆಂಗಳೂರಿಗೆ ಸ್ಥಳೀಯ ವಾರ್ಡ್ ಮಟ್ಟದ ಚುನಾಯಿತ ಪ್ರತಿನಿಧಿಗಳೇ ಇಲ್ಲವಾಗಿದೆ. ಬೆಂಗಳೂರಿನ ನಾಗರಿಕರು ಸಾಕಷ್ಟು ನಾಗರಿಕ ಸಮಸ್ಯೆಗಳಿಂದ ಸಾಕಷ್ಟು ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವು ಕೂಡಲೇ ನಾಗರೀಕರ ಜನಕ್ರೋಶ ಬುಗಿಲೇಳುವ ಮುನ್ನ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೂಡಲೇ ಚುನಾವಣೆಯನ್ನು ನಡೆಸಿ ಎಂದು ಆಮ್ ಆದ್ಮಿ ಪಕ್ಷ ಇಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಅಂದಿನ ಬಿಜೆಪಿ ಸರ್ಕಾರವು ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ನಾನಾ ಕಸರತ್ತನ್ನು ನಡೆಸಿತ್ತು. ಕೆ ಎಂ ಸಿ ಕಾಯ್ದೆಯನ್ನೇ ರದ್ದುಪಡಿಸಿ ಬಿಬಿಎಂಪಿ 2020 ಕಾಯ್ದೆಯನ್ನು ರಚಿಸುವ ಮೂಲಕ ಆಡಳಿತಾಧಿಕಾರಿಗಳನ್ನು ನೇಮಿಸಿ ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಹೀಗಿದ್ದರೂ ಸಹ ಬೆಂಗಳೂರಿನ ನಾಗರಿಕರಿಗೆ ಸ್ಥಳೀಯ ಚುನಾವಣಾ ಪ್ರತಿನಿಧಿಗಳನ್ನು ನೇಮಿಸಿಕೊಳ್ಳುವ ಸಾಂವಿಧಾನಿಕ ಅಧಿಕಾರಕ್ಕೆ ಕೊಡಲಿ ಪೆಟ್ಟು ನೀಡಲು ಅನೇಕ ಕಾರಣಗಳನ್ನು ನೀಡುತ್ತಿರುವ ಕಾಂಗ್ರೆಸ್ ಸರ್ಕಾರವು ಚುನಾವಣೆಯನ್ನು ಮುಂದೂಡಲು ಹವಣಿಸುತ್ತಿದೆ. ಸರ್ಕಾರವು ಕೂಡಲೇ ಚುನಾವಣೆಯನ್ನು ನಡೆಸಿ ಸಮಸ್ಯೆಗಳ ಕೂಪವಾಗಿರುವ ಬೆಂಗಳೂರನ್ನು ಮುಕ್ತಗೊಳಿಸಬೇಕು ” ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರುಗಳಾದ ಲಕ್ಷ್ಮಿಕಾಂತ್ ರಾವ್, ಶಶಿಧರ್ ಆರಾಧ್ಯ,ಉಷಾ ಮೋಹನ್ ,ಶಿವರಾಮ್, ಪುಟ್ಟಣ್ಣ ಗೌಡ,ಉಮೇಶ್ ಯಾದವ್, ದೇವರಸಂ, ನವೀನ್ ಅಯ್ಯರ್ ,ಮಧುಮಿತ ಸೇರಿದಂತೆ ಅನೇಕ ಕಾರ್ಯಕರ್ತರುಗಳು ಭಾಗವಹಿಸಿದ್ದರು.
For More Updates Join our WhatsApp Group :




