ಮೇ.24ರಂದು ನಿಗದಿಯಾಗಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ..!

ಮೇ.24ರಂದು ನಿಗದಿಯಾಗಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ..!

UPSC ಪರೀಕ್ಷೆ ಹಿನ್ನೆಲೆ: ಮೇ 24ರ MBA, MCA ಪ್ರವೇಶ ಪರೀಕ್ಷೆ ವೇಳಾಪಟ್ಟಿ ಬದಲಾವಣೆ..

ಬೆಂಗಳೂರು : ರಾಜ್ಯದ ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ PGCET-2026 ಪರೀಕ್ಷಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮೇ 24 ರಂದು ನಡೆಯಬೇಕಿದ್ದ MBA ಮತ್ತು MCA ಪ್ರವೇಶ ಪರೀಕ್ಷೆಗಳನ್ನು ಇದೀಗ ಜೂನ್ 14ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ತಿಳಿಸಿದ್ದಾರೆ.

​ಬದಲಾವಣೆಗೆ ಕಾರಣವೇನು?

​ಮೇ 24 ರಂದು ಕೇಂದ್ರ ಲೋಕಸೇವಾ ಆಯೋಗವು (UPSC) ಪ್ರಿಲಿಮಿನರಿ ಪರೀಕ್ಷೆಗಳನ್ನು ನಡೆಸುತ್ತಿದೆ. ಒಂದೇ ದಿನ ಎರಡು ಪ್ರಮುಖ ಪರೀಕ್ಷೆಗಳು ಎದುರಾಗುವುದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೆ.ಇ.ಎ ಈ ನಿರ್ಧಾರ ಕೈಗೊಂಡಿದೆ.

​ನಿಗದಿತ ವೇಳಾಪಟ್ಟಿಯಲ್ಲೇ ಉಳಿದ ಪರೀಕ್ಷೆಗಳು:

​MBA ಮತ್ತು MCA ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದರೂ, ಉಳಿದ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ:

​M.Tech / ME ಪರೀಕ್ಷೆಗಳು: ಈ ಹಿಂದೆ ಪ್ರಕಟಿಸಿದಂತೆ ಮೇ 23ರಂದು ನಡೆಯಲಿವೆ.

​DCET-2026 ಪರೀಕ್ಷೆ: ಇದು ಕೂಡಾ ಯಾವುದೇ ಬದಲಾವಣೆ ಇಲ್ಲದೆ ಮೇ 23ರಂದೇ ನಡೆಯಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *