ಭಾರಿ ಮಳೆ ಮುನ್ನೆಚ್ಚರಿಕೆ: ಜಿಬಿಎ ವ್ಯಾಪ್ತಿಯಲ್ಲಿ ತುರ್ತು ಸಿದ್ಧತೆ ಬಲಪಡಿಸಲು ಸೂಚನೆ
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಮುಂಗಾರು ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ *ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್* ಅವರು ಎಲ್ಲಾ ನಗರ ಪಾಲಿಕೆಗಳ ಆಯುಕ್ತರಿಗೆ ತಮ್ಮ ವ್ಯಾಪ್ತಿಯಲ್ಲಿ ತಕ್ಷಣ “ಪ್ರಹರಿ” ವಾಹನಗಳ ಪರೇಡ್ ಆಯೋಜಿಸಲು ಸೂಚಿಸಿದರು.
ಇಂದು ಜಿಬಿಎ ಮುಖ್ಯ ಕಚೇರಿ ಸಭಾಂಗಣದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಹರಿ ವಾಹನಗಳಲ್ಲಿರುವ ಎಲ್ಲಾ ಅಗತ್ಯ ಉಪಕರಣಗಳನ್ನು ಸಮಗ್ರವಾಗಿ ಪರಿಶೀಲಿಸಿ, ಮಳೆ ಸಂಬಂಧಿತ ತುರ್ತು ಪರಿಸ್ಥಿತಿಗಳಿಗೆ ಸಂಪೂರ್ಣ ಕಾರ್ಯಸನ್ನದ್ಧತೆ ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದರು.ಜೊತೆಗೆ, ಎಲ್ಲಾ ಮರ ಕಟಾವು ಯಂತ್ರೋಪಕರಣಗಳು, ವಾಹನಗಳು, ಹಾಗೂ ಸಂಬಂಧಿತ ತುರ್ತು ಸೇವಾ ಸಾಧನಗಳನ್ನು ಕೂಡ ವಿವರವಾಗಿ ಪರಿಶೀಲಿಸಿ, ಒಂದು ವಾರದೊಳಗಾಗಿ ಸಮಗ್ರ ಸಿದ್ಧತಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು..

*ನಗರ ಸ್ವಚ್ಛತೆಗೆ ಲಿಟ್ಟರ್ ಪಿಕ್ಕರ್ ಖರೀದಿ:* ನಗರದ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಸಂಖ್ಯೆಯಲ್ಲಿ ಲಿಟ್ಟರ್ ಪಿಕ್ಕರ್ ಗಳನ್ನು ಖರೀದಿಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
For More Updates Join our WhatsApp Group :




