ಶಾಲೆಗೆ ಗನ್ ತೆಗೆದುಕೊಂಡು ಬಂದು ವಿದ್ಯಾರ್ಥಿಗೆ ಗುಂಡು ಹಾರಿಸಿದ 5 ವರ್ಷದ ಬಾಲಕ

ಸುಪೌಲ್: ಬಿಹಾರದಲ್ಲಿ ಐದು ವರ್ಷದ ಬಾಲಕನೊಬ್ಬ ಬುಧವಾರ ಶಾಲೆಗೆ ಬಂದೂಕು ಹಿಡಿದುಕೊಂಡು ಬಂದಿದ್ದು, ಮತ್ತೊಂದು ಮಗುವಿನ ಮೇಲೆ ಗುಂಡು ಹಾರಿಸಿದ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನರ್ಸರಿ ವಿದ್ಯಾರ್ಥಿಯಾಗಿದ್ದ ಬಾಲಕ ತನ್ನ ಬ್ಯಾಗ್‌ನಲ್ಲಿ ಬಂದೂಕನ್ನು ಬಚ್ಚಿಟ್ಟುಕೊಂಡು ಶಾಲೆಗೆ ಆಗಮಿಸಿದ ಆಘಾತಕಾರಿ ಘಟನೆ ಉತ್ತರ ಬಿಹಾರ ಜಿಲ್ಲೆಯ ಸುಪೌಲ್‌ನಲ್ಲಿ ನಡೆದಿದೆ.

“ನರ್ಸರಿ ವಿದ್ಯಾರ್ಥಿ ಅದೇ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಬಾಲಕನ ಮೇಲೆ ಗುಂಡು ಹಾರಿಸಿದ್ದಾನೆ. ಬುಲೆಟ್ ಅವನ ತೋಳಿಗೆ ತಗುಲಿದೆ.” “ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಶವ್ ಯಾದವ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *