ಹಾಸನ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತ ಪಟ್ಟಿರುವವರು ಹೆಚ್ಚು. ಇನ್ನು ಹಾಸನದಲ್ಲಿ ಹೃದಯಘಾತದಿಂದ 11 ವರ್ಷದ ಬಾಲಕ ಮೃತಪಟ್ಟ ಘಟನೆ ಆಲೂರು ತಾಲೂಕಿನ ಚೆನ್ನಾಪುರ ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ಸಚಿನ್ಗೆ ನೆನ್ನೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು ಎದೆ ನೋವಿನಿಂದ ಶಾಲೆಗೆ ಹೋಗದೆ ಮನೆಯಲ್ಲಿ ಇದ್ದ ಮನೆಯಲ್ಲಿರುವಾಗ ಏಕಾಏಕಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾನೆ. ಮಲಗಿದ್ದ ಮಗನನ್ನು ಮಾತನಾಡಿಸಲು ಪೋಷಕರು ಮುಂದಾದಾಗ ಮಗ ಮಾತನಾಡಲಿಲ್ಲ ಎಚ್ಚರವೂ ಆಗಿಲ್ಲ ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣವೇ ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಮೃತ ಪಟ್ಟಿರುವುದನ್ನು ದೃಢಪಡಿಸಿದ್ದಾರೆ.
Related Posts
2 ಕೋಟಿ ಮೌಲ್ಯ ನೋಟುಗಳಿಂದ ಗಣೇಶನಿಗೆ ಅದ್ಧೂರಿ ಸಿಂಗಾರ
ಆಂಧ್ರಪ್ರದೇಶ: ಭಾರತಾದ್ಯಂತ ಅತ್ಯಂತ ಅದ್ದೂರಿಯಾಗಿ ಆಚರಿಸುವ ಹಬ್ಬಗಳ್ಳಲ್ಲಿ ವಿಶೇಷವಾದ ಹಬ್ಬವೆಂದರೆ ಅದುವೇ ಗಣೇಶ ಹಬ್ಬ, ಹಳ್ಳಿಯಿಂದ ದಿಲ್ಲಿಯ ವರೆಗೆ ಬೀದಿ ಬೀದಿಗಳಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತೆ.…
ಬೆಂಗಳೂರಿನಲ್ಲಿ ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ..
ಬೆಂಗಳೂರು: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳ ಹಾವಳಿ ಹೆಚ್ಚಾಗಿದ್ದು, ಬೆಂಗಳೂರಿನ ಪೀಣ್ಯದಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನದ ಕುಟುಂಬವನ್ನು Pakistanis Arrested in Bangalore ಪೊಲೀಸರು ಪತ್ತೆಹಚ್ಚಿದ್ದು,…
ವಾಡಿಕೆಗಿಂತ ಹೆಚ್ಚು ಮಳೆ : ಹಣದುಬ್ಬರ ಕಡಿಮೆ ಆಗುತ್ತಾ..?
ನವದೆಹಲಿ : ಈ ವರ್ಷ ಭಾರತದಲ್ಲಿ ಉತ್ತಮ ಮಟ್ಟದ ಮಳೆಯಾಗಿದ್ದು ವಾಡಿಕೆಗಿಂತ ಶೇ 8ರಷ್ಟು ಹೆಚ್ಚು ಮುಂಗಾರು ಮಳೆಯಾಗಿದೆ ಎಂದು ವರದಿ ತಿಳಿಸಿದೆ ಈ ಭಾರಿ ಉತ್ತಮ…