ಸರ್ಕಾರ ನಮಗೆ ವೇತನೆ ಅಥವಾ ಯೊಜನೆಗಳ ಮೂಲಕ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿ ಕೊಡುತ್ತೆ ಆದ್ರೆ ಕೆಲವರು ಅದನ್ನು ಸುದುಪಯೊಗ ಪಡಿಸಿಕೊಂಡರೆ ಇನ್ನು ಕೆಲವರು ಇಂತಹ ವೇತನೆಗಳ ಬಗ್ಗೆ ಅರಿವಿಲ್ಲದೆ ಇರುತ್ತಾರೆ.
ಈ ವಿಡಿಯೊದಲ್ಲಿ ಸರ್ಕಾರದಿಂದ ಸಿಗುವ ಕೆಲವು ವೇತನೆಗಳ ಬಗ್ಗೆ ಮತ್ತು ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಬಗ್ಗೆ ತಿಳಿಸಿಕೊಡ್ತಿನಿ ಬನ್ನಿ.
1.ವೃದ್ದಾಪ್ಯ ವೇತನ
ರಾಷ್ಟ್ರೀಯ ಸಾಮಾಜಿಕ ಭದ್ರತೆ ಮತ್ತು ಪಿಂಚಿಣಿಗಳ ನಿರ್ದೇಶನಾಲಯದಿಂದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆ ಜಾರಿಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸು ಬೇಕಾದ ದಾಖಲೆಗಳೆಂದರೆ 60 ವರ್ಷ ಮೇಲ್ಪಟ್ಟು ವಯಸ್ಸಾಗಿರುವ ಬಗ್ಗೆ ವೈದ್ಯಕೀಯ ದೃಢೀಕರಣ ಪತ್ರ, ಆಧಾರ್ ಕರ್ಡ್, 4 ಭಾವಚಿತ್ರಗಳು, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಪಡಿತರ ಚೀಟಿ.
2.ಅಂಗವಕಲ ಯೋಜನೆ
ಇನ್ನು ಅಂಗವಿಕಲಿಗಾಗಿ ಸರ್ಕಾರದಿಂದ ಅಂಗವಿಕಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೆಂದರೆ ಅಂಗವಿಕಲತೆಯ ಬಗ್ಗೆ ವೈದ್ಯಕೀಯ ದೃಢೀಕರಣ ಪತ್ರ, ಆಧಾರ್ ಕಾರ್ಡ್, 4 ಭಾವ ಚಿತ್ರಗಳು, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ, ಮತ್ತು ಪಡಿತರ ಚೀಟಿ.
3.ಮೈತ್ರಿ ಯೋಜನೆ
ಇನ್ನು ಮೈತ್ರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳಾವುವು ಎಂದರೆ ಲಿಂಗತ್ವ ಅಲ್ಪಸಂಖ್ಯಾತರೆಂದು ಸ್ವಯಂ ಘೋಷಿತ ಪ್ರಮಾಣ ಪತ್ರ, ಆಧಾರ್ ಕಾರ್ಡ್, 4 ಭಾವ ಚಿತ್ರಗಳು, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಡಿತರ ಚೀಟಿ, ಸ್ವಯಂ ಘೋಷಿತ ಪ್ರಮಾಣ ಪತ್ರ.
4.ಮನಸ್ವಿನಿ ಯೋಜನೆ
ಬಡ ಮಹಿಳೆಯರಿಗೆ ಸಾಮಾನ್ಯವಾಗಿ ಆಯಾ ಕುಟುಂಬಗಳಿಂದ ಆರ್ಥಿಕ ಬೆಂಬಲ ಇರುವುದಿಲ್ಲ. ಈ ಅಂಶಗಳನ್ನು ಪರಿಗಣಿಸಿ ಮತ್ತು ಅವರ ಪೋಷಣೆಗೆ ಸಹಾಯ ಹಸ್ತವನ್ನು ನೀಡಲು, ಕರ್ನಾಟಕ ಸರ್ಕಾರವು ಮನಸ್ವಿನಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಗೆ ಬೇಕಾದ ದಾಖಲೆಗಳೆಂದರೆ 40 ವರ್ಷ ಮೇಲ್ಪಟ್ಟು ಅವಿವಾಹಿತರು ತಮಗೆ ವಿವಾಹ ಆಗದರುವ ಬಗ್ಗೆ ಮತ್ತು ವಿಚ್ಚೇದಿತರು ಸ್ವಯಂ ಘೋಷಿತ ಪ್ರಮಾಣ ಪತ್ರ, ಆಧಾರ್ ಕಾರ್ಡ್, 4 ಭಾವ ಚಿತ್ರಗಳು, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ, ಮತ್ತು ಪಡಿತರ ಚೀಟಿ.
5.ಸಂಧ್ಯಾ ಸುರಕ್ಷಾ ಯೋಜನೆ
ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಹಿರಿಯ ನಾಗರಿಕರಿಗೆ ಆರ್ಥಿಕ ನೆರವು ನೀಡಲು ಸಂಧ್ಯಾ ಸುರಕ್ಷಾ ಯೋಜನೆಯನ್ನು ಪ್ರಾರಂಭಿಸಿದೆ. ಇದಕ್ಕೆ ಬೇಕಾದ ದಾಖಲೆಗಳಾವುವು ಎಂದರೆ 65 ವರ್ಷ ಮೇಲ್ಪಟ್ಟು ವಯಸ್ಸಾಗಿರುವ ಬಗ್ಗೆ ವೈದ್ಯಕೀಯ ದೃಢೀಕರಣ ಪತ್ರ, ಆಧಾರ್ ಕಾರ್ಡ್, 4 ಭಾವಚಿತ್ರಗಳು, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಪಡಿತರ ಚೀಟಿ.
6.ವಿಧವಾ ಯೋಜನೆ
ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸಿದ ಮಾನದಂಡಗಳ ಪ್ರಕಾರ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತ್ತು ಬಡತನ ರೇಖೆಯ ವರ್ಗಕ್ಕೆ ಸೇರಿದ ಎಲ್ಲಾ ವಿಧವೆಯರು ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ. ಇದಕ್ಕೆ ಬೇಕಾದ ದಾಖಲೆಗಳು ಹೀಗಿವೆ, ವಯಸ್ಸಿನ ದೃಢೀಕರಣ ಪತ್ರ (ಅರ್ಹ ವಹಸ್ಸು 18 ರಿಂದ 60 ವರ್ಷದವರೆಗೂ), ಆಧಾರ್ ಕಾರ್ಡ್, ಪತಿಯ ಮರಣ ಪ್ರಮಾಣ ಪತ್ರ, 4 ಭಾವ ಚಿತ್ರಗಳು, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ, ಮತ್ತು ಪಡಿತರ ಚೀಟಿ.