ಬೆಂಗಳೂರು: ಬೆಂಗಳೂರಿನ ಜನರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಿಹಿ ಸುದ್ದಿ ನೀಡುತ್ತಲೇ ಇದೆ. ಏಕೆಂದರೆ ಒಂದರ ಹಿಂದೊಂದರಂತೆ ಹೊಸ ಯೋಜನೆಗಳು, ವಿಸ್ತರಣೆ ಯೋಜನೆಗಳಿಗೆ ಅನುಮೋದನೆ ದೊರೆಯುತ್ತಿದೆ. ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಪಡೆದಿದ್ದ ಅಧಿಕಾರಿಗಳು, ಸರ್ಕಾರದ ಸೂಚನೆ ಮೇರೆಗೆ ಇದೀಗ ನಮ್ಮ ಮೆಟ್ರೋ 3ನೇ ಹಂತದ ಯೋಜನೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದ್ದಾರೆ.
ಹೌದು, ಬೆಂಗಳೂರು ನಮ್ಮ ಮಟ್ರೋ ಜೆಪಿ ನಗರ 4ನೇ ಹಂತದಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣವರೆಗೆ ಹೊಸ ಮಾರ್ಗ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆ ಸಾಕಾರಕ್ಕೆ ಬೇಕಾದ ಭೂಮಿ ಪೈಕಿ BMRC ಸದ್ಯ 26,811 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ವರದಿ ಆಗಿದೆ.
ಮೆಟ್ರೋ ಹಂತ 3ನೇ ಹಂತದ ಯೋಜನೆಗಾಗಿ ಭೂಸ್ವಾಧೀನ ಆರಂಭಿಸಿದ್ದ ಅಧಿಕಾರಿಗಳು, ಇದೀಗ ಸ್ವಾಧೀನ ಕಾರ್ಯದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಈ ಹೊಸ ಮಾರ್ಗದಿಂದ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟು ತಗ್ಗಲಿದೆ. ಪ್ರಯಾಣಿಕರಿಗೆ ಸಹಾಯವಾಗಲಿದೆ.
ಮೆಟ್ರೋ ಹಸಿರು ಮಾರ್ಗದಲ್ಲಿರುವ ಜೆಪಿ ನಗರ ಹಾಗೂ ನೇರಳೆ ಮಾರ್ಗದಲ್ಲಿರುವ ಮೈಸೂರು ರಸ್ತೆ ನಿಲ್ದಾಣವರೆಗೆ ನಿರ್ಮಾಣವಾಗಲಿದೆ. ಇನ್ನೂ ಹಸಿರು ಮಾರ್ಗದ ಪೀಣ್ಯ ಮತ್ತು ಜೆಪಿ ನಗರ ನಿಲ್ದಾಣಗಳು ಹಾಗೂ ಹೊಸಹಳ್ಳಿ-ಕಡಬಗೆರೆ ಮಾರ್ಗ ನಿರ್ಮಾಣಗೊಳ್ಳಲಿವೆ. ಇವುಗಳ ಪೈಕಿ ಕೆಲ ನಿಲ್ದಾಣಗಳಲ್ಲಿ ಇಂಟರ್ಚೇಂಜ್ ನಿಲ್ದಾಣಗಳು ಸ್ಥಾಪನೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಕಾರಿಡಾರ್ ಯೋಜನೆ, ಉದ್ದ & ವಿವರ ನಮ್ಮ ಮೆಟ್ರೋದ 3ನೇ ಹಂತದಲ್ಲಿ ವಿವಿಧ ಹೊಸ ಮೆಟ್ರೋ ಮಾರ್ಗಗಳು ನಿರ್ಮಾಣಗೊಳ್ಳಲಿವೆ. ಈ ಹಂತದಲ್ಲಿ ಎರಡು ಕಾರಿಡಾರ್ ತಲೆ ಎತ್ತಲಿವೆ. ಜೆಪಿ ನಗರ ಹಂತ -4 ರಿಂದ ಕೆಂಪಾಪುರದವರೆಗೆ ಒಂದು ಕಾರಿಡಾರ್ ನಿರ್ಮಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇದು ಒಟ್ಟು 32.15 ಕಿ.ಮೀ ಉದ್ದವಿದೆ. ಮತ್ತೊಂದು ಕಾರಿಡಾರ್ ಹೊಸಹಳ್ಳಿ-ಕಡಬಗೆರೆವರೆಗೆ 12.5 ಕಿ.ಮೀ. ಉದ್ದದವರೆಗೆ ತಲೆ ಎತ್ತಲಿದೆ. ನಗರದ ಪ್ರಮುಖ ಭಾಗಗಳಲ್ಲಿ ಇವು ನಿರ್ಮಾಣಗೊಳ್ಳಲಿರುವ ಕಾರಣ ಲಕ್ಷಾಂತರ ಪ್ರಯಾಣಿಕರಿಗೆ ಸಾರಿಗೆ ಅನುಕೂಲ ಜೊತೆಗೆ ಟ್ರಾಫಿಕ್ ನಿಯಂತ್ರಣವಾಗಲಿದೆ.
ಜೆಪಿ ನಗರ ಹಂತ -4 ರಿಂದ ಕೆಂಪಾಪುರವರೆಗೆ (ಕಾರಿಡಾರ್ 1) ಯೋಜನೆಗೆ 1,29,743 ಚದರ ಮೀಟರ್ ಭೂಮಿ ಗುರುತಿಸಲಾಗಿದೆ. 777 ಖಾಸಗಿ ಮಾಲೀಕರಿಗೆ ಸಂಬಂಧಿಸಿದ ಆಸ್ತಿಗಳಿದ್ದು, ಎಲ್ಲ ಭೂಮಿ ಸ್ವಾಧೀನಕ್ಕೆ 1,900 ಕೋಟಿ ರೂ. ತಗುಲಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ಈ ಲೈನ್ನಲ್ಲಿ ಡಬಲ್ ಡೆಕ್ಕರ್ ವಯಾಡಕ್ಟ್ ಇನ್ನೂ ಈ ಮೂರನೇ ಹಂತದಲ್ಲಿ ನಿಮಾರ್ಣಗೊಳ್ಳುವ ಯೋಜನೆಗಳು ಡಬಲ್ ಡೆಕ್ಕರ್ ವಯಾಡಕ್ಟ್ ಹೊಂದಿರಲಿವೆ. ಹಳದಿ ಮಾರ್ಗದಲ್ಲಿ ನಿರ್ಮಾಣವಾದ ಡಬಲ್ ಡೆಕ್ಕರ್ ಅನುಕೂಲ ಕಂಡು ಸರ್ಕಾರ ಬಿಎಂಆರ್ಸಿಎಲ್ಗೆ ಈಗಾಗಲೇ ಸೂಚನೆ ನೀಡಿತ್ತು. ಮುಂದಿನ ಎಲ್ಲ ಕಾರಿಡಾರ್ಗಳಲ್ಲಿ ಡಬಲ್ ಡೆಕ್ಕರ್ ನಿರ್ಮಿಸುವಂತೆ ಹೇಳಿತ್ತು. ಹೀಗಾಗಿ ಹೊಸ ಯೋಜನೆಯಲ್ಲಿ ಸೂಚನೆಗಳು ಅನುಷ್ಠನಕ್ಕೆ ಬರಲಿವೆ. ಜೆಪಿ ನಗರ ಹಂತ 4 ಬನ್ನೇರುಘಟ್ಟ ರಸ್ತೆಯಲ್ಲಿ ಗುಲಾಬಿ ಮಾರ್ಗವನ್ನು ಸಂಪರ್ಕಿಸಲಿದೆ. ಹೆಬ್ಬಾಳ- ಸರ್ಜಾರಪುರ ಕೆಂಪು ಮಾರ್ಗವು ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂ-ವಿಮಾನ ನಿಲ್ದಾಣ ತಲುಪುವ ನೀಲಿ ಮಾರ್ಗದ ಮಧ್ಯೆ ಸಂಪರ್ಕಿಸಲಿವೆ. ಹೀಗಾಗಿ ಇಲ್ಲಿ ಇಂಟರ್ಚೇಂಜ್ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.