ಬೆಂಗಳೂರು: ಗಣರಾತ್ಯೋತ್ಸವ ಪ್ರಯುಕ್ತ ಬೆಂಗಳೂರು ಸಸ್ಯಕಾಶಿ ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ 2025 ಪ್ರಯುಕ್ತ ನಮ್ಮ ಮೆಟ್ರೋ ಪೇಪರ್ ಟಿಕೆಟ್ ನೀಡುತ್ತಿದೆ. ರಜಾ ದಿನವಾದ್ದರಿಂದ ಜನವರಿ 26ರಂದು ಅತ್ಯಧಿಕ ಜನರು ಲಾಲ್ಬಾಗ್ಗೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಅತೀ ಕಡಿಮೆ ದರದಲ್ಲಿ ಮೆಟ್ರೋ ಪೇಪರ್ ಟಿಕೆಟ್ ನೀಡಲಾಗುತ್ತದೆ. ದಟ್ಟಣೆ ನಿವಾರಣೆಗೆ ಈ ಕ್ರಮಕೈಗೊಳ್ಳಲಾಗಿದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ, ಜನವರಿ 26, 2025ರ ಭಾನುವಾರದಂದು, ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 07:00 ಗಂಟೆಯ ಬದಲಿಗೆ 06:00 ಗಂಟೆಗೆ ಎಲ್ಲಾ ನಾಲ್ಕು ಟರ್ಮಿನಲ್ ಳಿಂದ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ನಿಂದ ಪ್ರಾರಂಭವಾಗುತ್ತವೆ.
ಲಾಲ್ಬಾಗ್ ಪುಷ್ಪ ಪ್ರದರ್ಶನ ಮತ್ತು ಮಾದಾವರದ ಬಿಐಇಸಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ನಿಗಮವು ಜನವರಿ 26ರಂದು ಹಸಿರು ಮಾರ್ಗ ಮತ್ತು ನೇರಳೆ ಮಾರ್ಗಗಳಲ್ಲಿ 20 ಹೆಚ್ಚುವರಿ ಟ್ರಿಪ್ಗಳನ್ನು ನಡೆಸುತ್ತದೆ. ಸಾರ್ವಜನಿಕರು ಲಾಲ್ಬಾಗ್ ಮೆಟ್ರೋ ನಿಲ್ದಾಣಕ್ಕೆ ಟೋಕನ್ ಗಳು, ಸ್ಮಾರ್ಟ್ ಕಾರ್ಡ್ (ಸಿಎಸ್ಸಿ), ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್ಸಿಎಂಸಿ) ಮತ್ತು ಕ್ಯೂಆರ್ ಟಿಕೆಟ್ಗಳನ್ನು ಬಳಸಿ ಹಿಂತಿರುಗಬಹುದು.
ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ, ನಿಗಮವು ಟೋಕನ್ಗಳ ಬದಲಿಗೆ ಪ್ರಯಾಣಿಕರ ತ್ವರಿತ ಸಂಚಾರಕ್ಕೆ ಅನುಕೂಲವಾಗುವಂತೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 08 ಗಂಟೆಯವರೆಗೆ ಕೇಲವ ರೂ.30/-ಗೆ ಪೇಪರ್ ಟಿಕೆಟ್ಗಳನ್ನು ವಿತರಿಸುತ್ತದೆ. ಈ ಟಿಕೆಟ್ ಗಳು ಈ ಒಂದು ಮಾತ್ರವೇ ಮಾನ್ಯವಾಗಿರುತ್ತವೆ.
ಪ್ರಯಾಣಿಕರಿಗೆ ರೂ.30 ನಗದು ಪಾವತಿಸಿ ಪೇಪರ್ ಟಿಕೆಟ್ ಪಡೆದು ಅಂದು ನೀವು ಲಾಲ್ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಪೇಪರ್ ಟಿಕೆಟ್ಗಳು ಮಾತ್ರ ಮಾನ್ಯವಾಗಿರುತ್ತವೆ. ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಈ ಅವಧಿಯಲ್ಲಿ ಟೋಕನ್ಗಳನ್ನು ನೀಡಲಾಗುವುದಿಲ್ಲ. ನಮ್ಮ ಮೆಟ್ರೋದ ಎಲ್ಲಾ ಪ್ರಯಾಣಿಕರು, ಸುಗಮ ಪ್ರಯಾಣಕ್ಕಾಗಿ ಈ ತ್ವರಿತ ಪೇಪರ್ ಟಿಕೆಟ್ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಪ್ರಕಟಣೆಯಲ್ಲಿ ತಿಳಿಸಿದೆ. ನಮ್ಮ ಮೆಟ್ರೊ ರೈಲುಗಳ ಸಮಯ ಪ್ರತಿ ಭಾನುವಾರ ನಮ್ಮ ಮೆಟ್ರೋ ರೈಲುಗಳು 07 ಗಂಟೆಗೆ ಆರಂಭವಾಗುತ್ತಿತ್ತು. ಸಾಮಾನ್ಯ ದಿನಗಳಲ್ಲಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 5.ಗಂಟೆಗೆ ತೆರೆಯಲಾಗುತ್ತಿತ್ತು. ಇತ್ತೀಚೆಗೆ ಪ್ರತಿ ಸೋಮವಾರ ಬೆಳಗ್ಗೆ 4.15ಕ್ಕೆ ನಮ್ಮ ಮೆಟ್ರೋ ರೈಲುಗಳು ಸಂಚಾರ ಆರಂಭಿಸಲಿ ಬಿಎಂಆರ್ಸಿಎಲ್ ನಿರ್ಧರಿಸಿದೆ. ಇದೀಗ ಲಾಲ್ಬಾಗ್ ಫ್ಲವರ್ ಶೋ ಹಿನ್ನೆಲೆಯಲ್ಲಿ ನಾಡಿದ್ದು, ಭಾನುವಾರ (ಜ.26) ಮಾತ್ರವೇ ಬೆಳಗ್ಗೆ 6 ಗಂಟೆಗೆ ಓಡಾಡಲಿವೆ.