ಬೆಂಗಳೂರು || ಪುಣೆ-ಬೆಂಗಳೂರು ಎಕ್ಸ್ಪ್ರೆಸ್ ವೇ ನಿರ್ಮಾಣದಿಂದ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭೂಮಿಗೆ ಚಿನ್ನದ ಬೆಲೆ

ಬೆಂಗಳೂರು || ಪುಣೆ-ಬೆಂಗಳೂರು ಎಕ್ಸ್ಪ್ರೆಸ್ ವೇ ನಿರ್ಮಾಣದಿಂದ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭೂಮಿಗೆ ಚಿನ್ನದ ಬೆಲೆ

ಬೆಂಗಳೂರು: ಭಾರತದಲ್ಲಿ ನಿರ್ಮಾಣ ಹಂತದಲ್ಲಿರುವ ಬಹುನಿರೀಕ್ಷಿತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆಂಗಳೂರು-ಪುಣೆ ಎಕ್ಸ್ಪ್ರೆಸ್ ವೇ ಕೂಡ ಒಂದಾಗಿದೆ. ಈ ಹೆದ್ದಾರಿಯೂ ಕರ್ನಾಟಕದ ಹಲವು ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಹಾಗಾದರೆ ಇದು ನಿರ್ಮಾಣವಾದರೆ ರಾಜ್ಯದ ಯಾವೆಲ್ಲ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಸಾಮಾನ್ಯವಾಗಿ ರಸ್ತೆಗಳ ಪಕ್ಕದ ಭೂಮಿಗಳಿಗೆ ಚಿನ್ನದ ಬೆಲೆ ಇರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮನ್ಯ ಏರಿಯಾಗಳಲ್ಲೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ಹೆದ್ದಾರಿ ಪಕ್ಕ ಭೂಮಿ ಹೊಂದಿದ್ದರೆ, ಅಂತಹರು ಕೋಟ್ಯಧಿಪತಿ ಆಗುವುದರಲ್ಲಿ ಒಂದು ಮಾತಿಲ್ಲ. ಯಾಕೆಂದರೆ ಆ ಪ್ರದೇಶದಲ್ಲಿ ಅಷ್ಟರ ಮಟ್ಟಿಗೆ ಭೂಮಿಗೆ ಬೆಲೆ ಇರುತ್ತದೆ. ಇನ್ನೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಇಂಚು ಭೂಮಿಗೂ ಚಿನ್ನದ ಬೆಲೆ ಇದ್ದೇ ಇರುತ್ತದೆ.

ಈ ಹೆದ್ದಾರಿ ನಿರ್ಮಾಣದಿಂದ ಕರ್ನಾಟಕದ 9 ಜಿಲ್ಲೆಗಳು ಸೇರಿದಂತೆ ಅಲ್ಲಿನ ಅಕ್ಕಪಕ್ಕದ ಆಸ್ತಿ, ಭೂಮಿಗಳು ಕೂಡ ಚಿನ್ನದ ಬೆಲೆ ಬರಲಿದೆ. ಅಲ್ಲದೆ,ಬೆಂಗಳೂರು, ಪುಣೆ ಮತ್ತು ಮುಂಬೈ ನಗರಗಳ ನಡುವಿನ ಪ್ರಯಾಣದ ಸಮಯ 15ರಿಂದ 7 ಗಂಟೆಗೆ ಇಳಿಕೆಯಾಗಲಿದೆ. ಈ ಮೂಲಕ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಸುವವರಿಗೆ ಇದು ತುಂಬಾ ಸಹಕಾರಿಯಾಗಲಿದೆ. ಇದು 700 ಕಿಲೋ ಮೀಟರ್ ಉದ್ದದ ಎಕ್ಸ್ಪ್ರೆಸ್ವೇ ಆಗಿದ್ದು, ಕರ್ನಾಟಕದ 9, ಮಹಾರಾಷ್ಟ್ರದ ಮೂರು ಜಿಲ್ಲೆಗಳು ಸೇರಿದಂತೆ ಒಟ್ಟು 12 ಜಿಲ್ಲೆಗಳ ಮೂಲಕ ಈ ಹೆದ್ದಾರಿ ಹಾದು ಹೋಗಲಿದೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಚಿತ್ರದುರ್ಗ, ದಾವಣಗೆರೆಯ ಜಗಳೂರು, ವಿಜಯನಗರದ ಕೂಡ್ಲಿಗಿ, ಕೊಪ್ಪಳದ ಯಲಬುರ್ಗಾ, ಗದಗ ಜಿಲ್ಲೆಯ ರೋಣ, ನರಗುಂದ, ಬಾಗಲಕೋಟೆಯ ಬಾದಾಮಿ, ಮುಧೋಳ, ಜಮಖಂಡಿ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಮಾರ್ಗವಾಗಿ ಪುಣೆ ತಲುಪಲಿದೆ.

ರಾಜ್ಯದ ಯಾವೆಲ್ಲಾ ಜಿಲ್ಲೆಗಳಿಗೆ ಉಪಯುಕ್ತ? * ಬೆಂಗಳೂರು ಗ್ರಾಮಾಂತರ ( ದೊಡ್ಡಬಳ್ಳಾಪುರ, ನೆಲಮಂಗಲ) * ತುಮಕೂರು ( ಕೊರಟಗೆರೆ, ಮಧುಗಿರಿ) * ಚಿತ್ರದುರ್ಗ * ದಾವಣಗೆರೆ (ಜಗಳೂರು) * ವಿಜಯನಗರ (ಕೂಡ್ಲಿಗಿ) * ಕೊಪ್ಪಳ (ಯಲಬುರ್ಗಾ) * ಗದಗ (ರೋಣ, ನರಗುಂದ) * ಬಾಗಲಕೋಟೆ (ಬಾದಾಮಿ, ಮುಧೋಳ, ಜಮಖಂಡಿ) * ಬೆಳಗಾವಿ ಮಹಾರಾಷ್ಟ್ರದ ಯಾವೆಲ್ಲಾ ಜಿಲ್ಲೆಗಳಿಗೆ ಉಪಯುಕ್ತ? * ಸಾಂಗ್ಲಿ

* ಸತಾರಾ * ಪುಣೆ ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳಾದ ಮುಂಬೈ, ಪುಣೆ ಹಾಗೂ ಕರ್ನಾಟಕದ ಬೆಂಗಳೂರು ನಡುವಿನ ಸಂಪರ್ಕ ಕಲ್ಪಿಸುವಲ್ಲಿ ಈ ಹೊಸ ಎಕ್ಸ್ಪ್ರೆಸ್ವೇ ಪ್ರಮುಖ ಪಾತ್ರ ವಹಿಸಲಿದೆ. ಪುಣೆ-ಬೆಂಗಳೂರು ಎಕ್ಸ್ಪ್ರೆಸ್ವೇ 3 ನಗರಗಳ ನಡುವಿನ ಪ್ರಯಾಣದ ದೂರವನ್ನು 95 ಕಿಲೋ ಮೀಟರ್ಗಳಷ್ಟು ಕಡಿಮೆ ಮಾಡುತ್ತದೆ. ಇನ್ನು ನಿರ್ಮಾಣದ ಅಂದಾಜು ವೆಚ್ಚ ₹50,000 ಕೋಟಿ ರೂಪಾಯಿಗೂ ಹೆಚ್ಚು ಎನ್ನುವ ಮಾಹಿತಿ ಇದೆ. ಗ್ರೀನ್ಫೀಲ್ಡ್ ಯೋಜನೆಯಡಿಯಲ್ಲಿ ಪ್ರತಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ವಾಹನ ಸಂಚರಿದುವಂತೆ ಎಕ್ಸ್ಪ್ರೆಸ್ವೇ ನಿರ್ಮಾಣ ಮಾಡಲಾಗುತ್ತಿದೆ. ಡಿಪಿಆರ್ ಪೂರ್ಣಗೊಂಡ ಬಳಿಕ ಭೂ ಸ್ವಾಧೀನ ಮತ್ತು ಇತರ ಪ್ರಾಥಮಿಕ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಕ್ಸ್ಪ್ರೆಸ್ವೇ 55 ಫ್ಲೈಓವರ್ಗಳು, ಮೇಲ್ಸೇತುವೆಗಳು ಮತ್ತು ಇಂಟರ್ಚೇಂಜ್ಗಳನ್ನು ಹೊಂದಿದ್ದು, ತಡೆರಹಿತ ಸಂಪರ್ಕವನ್ನು ಹೊಂದಿದೆ. ಇದು ವಾಹನ ಸಂಚಾರಕ್ಕೆ 2028ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇನ್ನು ಇಲ್ಲಿ ವಾಹನ ಸಂಚಾರಕ್ಕೆ ಮುಕ್ತವಾದರೆ, ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ವಿಶೇಷವಾಗಿ ರಿಯಲ್ ಎಸ್ಟೇಟ್ ಅಭಿವೃದ್ಧಿ, ಸುಧಾರಿತ ಸಂಪರ್ಕ ಮತ್ತು ಮೂಲಸೌಕರ್ಯ ಒದಗಿಸಲು ಸಹಕಾರಿಯಾಗಲಿದೆ.

Leave a Reply

Your email address will not be published. Required fields are marked *