ಬೆಳಗಾವಿ : ಕಳೆದ ಎರಡು ವರ್ಷಗಳ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಮದುವೆಯಲ್ಲಿ ಫೋಟೋ ತೆಗೆದಿದ್ದ ಫೋಟೋಗ್ರಾಫರ್ ನನ್ನು ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನಡೆದಿದೆ.

ಅಕ್ಷಯ್ ತಲಸಂಗ ಹಲ್ಲೆಗೆ ಒಳಗಾದ ಫೋಟೋಗ್ರಾಫರ್ ಆಗಿದ್ದು, ಮದುವೆಯ ಫೋಟೋ ಹಾಗೂ ಡಾಟಾ ನೀಡುವಂತೆ ಠಾಣೆಗೆ ಕರೆಸಿದ ಪೊಲೀಸರು ಫೋಟೋಗ್ರಾಫರ್ ನನ್ನು ಥಳಿಸಿದ್ದಾರೆ. ಗಾಯಗೊಂಡಿರುವ ಅಕ್ಷಯ್ ತೆಲಸಂಗನನ್ನು ಸಂಬಂಧಿಕರು ಐಗಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಠಾಣೆ ಎದುರು ಜನರು ಜಮಾಯಿಸಿ ಐಗಳಿ ಪೊಲಿಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ಅಕ್ಷಯ ತೆಲಸಂಗನನ್ನು ಅಥಣಿ ಸಿಪಿಐ ಸಂತೋಷ ಹಳ್ಳೂರ ಇಂಟ್ರಾಗೇಟ್ ಮಾಡಿದ್ದು, ಈ ಬಗ್ಗೆ ಆಕ್ರೋಶ ಗೊಂಡ ಯುವಕನ ಪೋಷಕರು ಸಿಪಿಐ ಸಂತೋಷ ಹಳ್ಳೂರ ವಿರುದ್ದ ದೂರು ದಾಖಲಿಸಲು ಮುಂದಾಗಿದ್ದು, ತಮಗೆ ನ್ಯಾಯ ಒದಗಿಸಿ ಕೊಡುವಂತೆ ಆಗ್ರಹಿಸಿದ್ದಾರೆ.
