ಬೆಳಗಾವಿ: ಬೆಳಗಾವಿಯ ಪೀರನವಾಡಿಯ ಕೆಎಲ್‌ಎಸ್ ಪಬ್ಲಿಕ್ ಸ್ಕೂಲ್‌ನ ಹತ್ತನೇ ತರಗತಿ ವಿದ್ಯಾರ್ಥಿ ಪ್ರಣವ್ ಶಶಿಭೂಷಣ ಬಾಯರಿ ‘ದಿ ರಸ್ಟೆಡ್ ರಿಡಲ್’ ಎಂಬ ಇಂಗ್ಲಿಷ್ ಕಾದಂಬರಿ ಬರೆದು ಚಿಕ್ಕ ವಯಸ್ಸಿನಲ್ಲೆ ಸಾಹಿತ್ಯ ಲೋಕಕ್ಕೆ ಸೈಲೆಂಟ್ ಆಗಿಯೇ ಎಂಟ್ರಿ ಕೊಟ್ಟಿದ್ದಾನೆ. ಇಂದಿನ ಮಕ್ಕಳು ಕಥೆ, ಕಾದಂಬರಿ ಬರೆಯುವುದು ಇರಲಿ, ಓದುವುದೂ ದೂರದ ಮಾತು. ಇನ್‌ಸ್ಟಾ , ಫೇಸ್‌ಬುಕ್, ಸ್ನ್ಯಾಪ್‌ಚಾಟ್‌ನಲ್ಲಿ ಸ್ಟೈಲಿಶ್ ಫೋಟೋ, ರೀಲ್ಸ್ ಅಪ್‌ಲೋಡ್ ಮಾಡಿ ಲೈಕ್ಸ್, ಕಮೆಂಟ್ಸ್ಗೆ ಕಾಯೋದೇ ದೊಡ್ಡ ಸಾಧನೆ ಆಗಿ ಬಿಟ್ಟಿದೆ. ಇನ್ನು ಪಬ್ಜಿ, ಲೋಡೋ ಗೇಮ್ ಆಡೋಕೆ ಅವರಿಗೆ ಟೈಮ್ ಸಾಕಾಗೋದಿಲ್ಲ. ಆದರೆ, ಇಲ್ಲೊಬ್ಬ ಹದಿನೈದು ವರ್ಷದ ಬಾಲಕ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಒಳಗೊಂಡ ಇಂಗ್ಲೀಷ್ ಕಾದಂಬರಿ ಬರೆದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ.

ಬೆಳಗಾವಿಯ ಪೀರನವಾಡಿಯ ಕೆಎಲ್‌ಎಸ್ ಪಬ್ಲಿಕ್ ಸ್ಕೂಲ್‌ನ ಹತ್ತನೆ ನೇ ತರಗತಿ ವಿದ್ಯಾರ್ಥಿ ಪ್ರಣವ್ ಶಶಿಭೂಷಣ ಬಾಯರಿ ‘ದಿ ರಸ್ಟೆಡ್ ರಿಡಲ್’ ಎಂಬ ಇಂಗ್ಲಿಷ್ ಕಾದಂಬರಿ ಬರೆದು ಚಿಕ್ಕ ವಯಸ್ಸಿನಲ್ಲೆ ಸಾಹಿತ್ಯ ಲೋಕಕ್ಕೆ ಸೈಲೆಂಟ್ ಆಗಿಯೇ ಎಂಟ್ರಿ ಕೊಟ್ಟಿದ್ದಾನೆ. ಮಗನ ಸಾಧನೆಗೆ ತಂದೆ-ತಾಯಿ ಖುಷಿ ವ್ಯಕ್ತಪಡಿಸಿದ್ದಾರೆ ಚಿಕ್ಕಮಗಳೂರು ಮೂಲದ ಪ್ರಣವ್ ತಂದೆ ಕೆ.ಎಸ್.ಶಶಿಭೂಷಣ, ತಾಯಿ ಸಾವಿತ್ರಿ ಬೆಳಗಾವಿಯಲ್ಲಿ ಸ್ವಂತ ಫಾರ್ಮಾಸೂಟಿಕಲ್ ಬ್ಯುಸಿನೆಸ್ ನಡೆಸುತ್ತಾರೆ. ಮಗನ ಸಾಧನೆ ಬಗ್ಗೆ ಮಾತನಾಡಿದ ಶಶಿಭೂಷಣ, ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸ ಅವನಿಗಿತ್ತು. ಬರೆಯವ ಆಸೆಯೂ ಇತ್ತು. ಆದರೆ, ಇಷ್ಟು ಚಿಕ್ಕ ವಯಸ್ಸಲ್ಲಿ ಪುಸ್ತಕ ಬರೆಯುವುದು ಅಷ್ಟೊಂದು ಸುಲಭ ಏನಲ್ಲ. ಅದರಲ್ಲೂ ಇಂಗ್ಲೀಷ್ ಕಾದಂಬರಿ ಬರೆದು ಮುಗಿಸಿರೋದು ಅಚ್ಚರಿ ತಂದಿದೆ. ಸಂತೋಷದ ಜೊತೆಗೆ ಹೆಮ್ಮೆಯೂ ಎನಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.