ಬೆಂಗಳೂರು || ಅತುಲ್ ಸುಭಾಷ್ ಕೇಸ್: ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಶಾಕಿಂಗ್ ಹೇಳಿಕೆ

ಬೆಂಗಳೂರು || ಅತುಲ್ ಸುಭಾಷ್ ಕೇಸ್: ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಶಾಕಿಂಗ್ ಹೇಳಿಕೆ

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್ ಅವರ ಆತ್ಮಹತ್ಯೆ ಇದೀಗ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿದ್ದು, ಈ ವಿಚಾರದ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಕಂಗನಾ ಅವರು ದೇಶದ ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಆದರೆ, ಹಲವು ವಿಚಾರಗಳಲ್ಲಿ ಅವರು ನೀಡುವ ಹೇಳಿಕೆಗಳು ವಿವಾದ ಸ್ವರೂಪವನ್ನು ಪಡೆದುಕೊಂಡಿದ್ದೇ ಹೆಚ್ಚು. ಇದೀಗ ಅತುಲ್ ಅವರ ವಿಚಾರದಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಪರ – ವಿರೋಧ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಪ್ರಕರಣವು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಅತುಲ್ ಕುಟುಂಬದವರ ನೋವು ಮುಗಿಲು ಮುಟ್ಟಿದೆ ಅವರ ತಾಯಿಯ ಕಣ್ಣೀರು ಎಂತವರಲ್ಲೂ ನೋವು ತರಿಸುತ್ತೆ. ಅತುಲ್ ಅವರು ಸಾವಿಗೆ ನ್ಯಾಯ ಸಿಗಬೇಕು ಅಂತ ಸೋಷಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗ್ತಿದೆ. ಈ ನಡುವೆ ಇದು ಸುಪ್ರೀಂ ಕೋರ್ಟ್ ಅಂಗಳವನ್ನೂ ತಲುಪಿದೆ. ಟೆಕ್ಕಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಜಸ್ಟಿಸ್ ಫಾರ್ ಅತುಲ್ ಎನ್ನುವುದು ಟ್ರೆಂಡ್ ಆಗುತ್ತಿದೆ. ಇದರ ನಡುವೆ ಕಂಗನಾ ಅವರು ತಮ್ಮ ಅನಿಸಿಕೆ ಹೇಳಿದ್ದಾರೆ.

ಈ ರೀತಿಯ ಕೇಸ್ಗಳಿಗೆ ಸಂಬಂಧಿಸಿದಂತೆ ನಿರಂತರ ಇನ್ವೆಸ್ಟಿಗೇಷನ್ ನಡೆಯಬೇಕು. ಈ ರೀತಿಯ ಕೇಸ್ಗಳಲ್ಲಿ ಶೇ 99ರಷ್ಟು ಗಂಡಸರದ್ದೇ ತಪ್ಪಿರುತ್ತೆ ಅಂತ ಕಂಗನಾ ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂದುವರಿದು ನಕಲಿ ಸ್ತ್ರೀವಾದದ ಬಗ್ಗೆ ಕಂಗನಾ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಮದುವೆಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ವಿಶೇಷ ಸ್ಥಾನವಿದೆ. ಆದರೆ, ಸ್ರ್ರೀವಾದ, ಕಮ್ಯುನಿಸಂ ಹಾಗೂ ಸಮಾಜವಾದ ಎನ್ನುವ ಧೋರಣೆಗಳಿಂದ ಮದುವೆ ಸಾಂಪ್ರದಾಯವು ಇತ್ತೀಚಿನ ದಿನಗಳಲ್ಲಿ ಹಳಿ ತಪ್ಪುತ್ತಿದೆ. ಇನ್ನು ನಕಲಿ ಸ್ತ್ರಿವಾದ ಎನ್ನುವುದು ಅತ್ಯಂತ ಖಂಡನೀಯವಾಗಿದೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.

ಶೇಕಡ 99ರಷ್ಟು ಮದುವೆಗಳಲ್ಲಿ ಗಂಡಸರ ತಪ್ಪೇ ಹೆಚ್ಚಾಗಿ ಇರುತ್ತದೆ. ಇದೇ ಕಾರಣಕ್ಕೆ ಈ ರೀತಿಯ ತಪ್ಪುಗಳು ಸಂಭವಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಅತುಲ್ ಅವರ ಕೊನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಕಲಿ ಸ್ತ್ರೀವಾದದ ಬಗ್ಗೆ ಚರ್ಚೆ: ಅತುಲ್ ಪ್ರಕರಣದ ಬೆನ್ನಲ್ಲೇ ದೇಶದಲ್ಲಿ ನಕಲಿ ಸ್ತ್ರೀವಾದ ಹಾಗೂ ಕೆಲವು ಕಾನೂನುಗಳನ್ನು ಕೆಲವು ಮಹಿಳೆಯರು ತಪ್ಪಾಗಿ ಬಳಸಿಕೊಳ್ಳುತ್ತಿರುವುದು ಚರ್ಚೆಯಾಗುತ್ತಿದೆ. ಅತುಲ್ ಪ್ರಕರಣದಲ್ಲೂ ಇದೇ ಆಗಿದ್ದು, ಅತುಲ್ ಮೇಲೆ ಅವರ ಪತ್ನಿ ಹಾಗೂ ಕುಟುಂಬದವರು ದೂರು ನೀಡಿದ್ದರು ಎನ್ನಲಾಗಿದೆ.

ಅತುಲ್ ಅವರು ಸಾವನ್ನಪ್ಪುವ ಮುನ್ನ ಸುದೀರ್ಘ 36 ಪುಟಗಳ ಡೆತ್ನೋಟ್ ಬರೆದಿಟ್ಟು ಅದನ್ನು ಹಲವರಿಗೆ ಇ – ಮೇಲ್ ಮಾಡಿದ್ದರು. ಈ ವಿಷಯದ ಬಗ್ಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಇನ್ನು ಅತುಲ್ ಸುಭಾಷ್ ಅವರ ಆತ್ಮಹತ್ಯೆ ಪ್ರಕರಣವು ಭಾರತದಲ್ಲಿ ವರದಕ್ಷಿಣೆ ಕಾನೂನುಗಳ ದುರುಪಯೋಗದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬರುವಂತೆ ಆಗಿದೆ. ವಿವಾಹಿತ ಮಹಿಳೆಯರ ಮೇಲೆ ಪತಿ ಹಾಗೂ ಅವರ ಕುಟುಂಬದವರ ಕ್ರೌರ್ಯವನ್ನು ತಿಳಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ

(ಕಾಯ್ದೆ)ಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪವೂ ಇದೆ. ಈ ಹಿಂದೆಯೂ ಈ ವಿಚಾರವಾಗಿ ಕಳವಳ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *