ಬೆಂಗಳೂರು || ಡಿಕೆಶಿಯನ್ನು ಎದುರಿಸಲು ಬಿಜೆಪಿಗೆ ತಾಕತ್ತಿಲ್ಲ : ರಮೇಶ್ ಬಾಬು

ಬೆಂಗಳೂರು || ಡಿಕೆಶಿಯನ್ನು ಎದುರಿಸಲು ಬಿಜೆಪಿಗೆ ತಾಕತ್ತಿಲ್ಲ : ರಮೇಶ್ ಬಾಬು

ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಹಿಂಬಾಗಿಲ ಮೂಲಕ ಹಣಿಯಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೇರವಾಗಿ ರಾಜಕೀಯ ಮಾಡಬೇಕೆ ಹೊರತು ತೆರೆಮರೆಯಲ್ಲಿ ಅಲ್ಲ. ಇದು ಹತಾಶ ಮನಸ್ಥಿತಿ’ ಎಂದು ಟೀಕಿಸಿದರು.

‘ಶಿವಕುಮಾ‌ರ್ ಅವರು ದೆಹಲಿಯಲ್ಲಿ ಖಾಸಗಿ ಸುದ್ದಿ ವಾಹಿನಿಗೆ ಮಾತನಾಡಿದ ವಿಡಿಯೊ ತುಣುಕು ಇಟ್ಟುಕೊಂಡು ಅವರ ವಿರುದ್ಧ ಬಿಜೆಪಿ ಅಪಪ್ರಚಾರಕ್ಕೆ ಇಳಿದಿದೆ. ಸಂವಿಧಾನ ಬದಲಾವಣೆ ಬಗ್ಗೆ ಶಿವಕುಮಾ‌ರ್ ಮಾತನಾಡಿದರು ಎನ್ನುವ ಅಪಪ್ರಚಾರದಿಂದ ಬಿಜೆಪಿಯವರೇ ಬೆತ್ತಲಾಗಿದ್ದಾರೆ’ ಎಂದರು.

‘ಕಾಂಗ್ರೆಸ್ ಪಕ್ಷದ ನಾಯಕರು ಎಂದಿಗೂ ಸಂವಿಧಾನದ ಆಶಯಗಳನ್ನು ಬದಲಾವಣೆ ಮಾಡುವ ಬಗ್ಗೆ ಮಾತನಾಡುವುದಿಲ್ಲ. ಇದು ನಮ್ಮ ಪಕ್ಷದ ನಿಲುವು ಕೂಡ ಅಲ್ಲ. ಸಂವಿಧಾನದ ಬಗ್ಗೆ ಬಿಜೆಪಿ ಹಾಗೂ ಸಂಘ ಪರಿವಾರದಿಂದ ಪಾಠ ಹೇಳಿಸಿಕೊಳ್ಳುವ ಸಂದರ್ಭ ಕಾಂಗ್ರೆಸ್‌ಗೆ ಬಂದಿಲ್ಲ’ ಎಂದರು.

ಕೆಪಿಸಿಸಿ ಅಧ್ಯಕ್ಷರ ಮಾಧ್ಯಮ ಮತ್ತು ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಇದ್ದರು.

Leave a Reply

Your email address will not be published. Required fields are marked *