ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆ ಆಗಿದ್ದರಿಂದ ಜನರು ರೋಸಿಹೋಗಿದ್ದಾರೆ. ಇದರ ಪರಿಣಾಮವೆಂಬಂತೆ Namma Metro ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC Passengers) ಸಂಖ್ಯೆ ಏರಿಕೆ ಆಗುತ್ತಿದೆ. ಶೇಕಡಾ 90ರಷ್ಟು ದರ ಹೆಚ್ಚಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಂತ ವಾಹನ, ಸಾರ್ವಜನಿಕ ಸಾರಿಗೆ ಬಸ್ ಬಳಕೆ ಅವಲಂಬಿಸಿದ್ದಾರೆ.
ಸದ್ಯ ನಗರದಲ್ಲಿ ಮೆಟ್ರೋ ದರ ಏರಿಕೆ ಬಳಿಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ಗಳ ಪ್ರಯಾಣಿಕರ ಸಂಖ್ಯೆ ನಿತ್ಯ ಸರಾಸರಿ 01 ಲಕ್ಷ ದಷ್ಟು ಏರಿಕೆ ಆಗಿದೆ. ಭಾನುವಾರ ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುವವರ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯೇ ಇರುತ್ತದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಸೋಮವಾರ ಗಣನೆಗೆ ತೆಗೆದುಕೊಂಡರೆ ಬಿಎಂಟಿಸಿ ಬಸ್ ಪ್ರಯಾಣಿಕರ ಸಂಖ್ಯೆ ನಿತ್ಯ 36 ಲಕ್ಷದಷ್ಟಿತ್ತು. ಫೆ.9ರಂದು ಬೆಂಗಳೂರು ಮೆಟ್ರೋ ರೈಲು ನಿಗಮವು ಮೆಟ್ರೋ ಪ್ರಯಾಣ ದುಬಾರಿ ಮಾಡಿದ ಬೆನ್ನಲ್ಲೆ ಬಿಎಂಟಿಸಿ ದೈನಂದಿನ ಪ್ರಯಾಣಕರ ಸಂಖ್ಯೆ 37 ಲಕ್ಷಕ್ಕೆ ಏರಿಕೆ ಆಗಿದೆ. ಸುಮಾರು ಒಂದು ಲಕ್ಷ ಮಂದಿ ಬಸ್ಗಳತ್ತ ವಾಲಿದ್ದಾರೆ. ಇದಕ್ಕೆ ಮೆಟ್ರೋ ದರ ಏರಿಕೆ ಕಾರಣವಾ? ಎಂಬ ಖಚಿತತೆ ಕೆಲವೇ ದಿನಗಳಲ್ಲಿ ಅಧಿಕೃತವಾಗಲಿದೆ.
ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಬೆಂಗಳೂರು ಮೆಟ್ರೋ ಪ್ರಯಾಣಿಕರ ದೈನಂದಿನ ಸಂಖ್ಯೆ ಸಾರ್ವತ್ರಿಕವಾಗಿ 9.20 ಲಕ್ಷವರೆಗೆ ತಲುಪಿತ್ತು. ನಿತ್ಯ ಸರಾಸರಿ 7.50 ಲಕ್ಷ ಜನರು ಓಡಾಡುತ್ತಾರೆ. ಆದರೆ ಮೊನ್ನೆ ದರ ಏರಿಕೆ ಮಾಡಿದ ದಿನವೇ ಈ ಸಂಖ್ಯೆಯಲ್ಲಿ ತೀವ್ರ ಇಳಿಕೆ ಆಗಿತ್ತು. ಮೆಟ್ರೋ ಪರಿಷ್ಕೃತ ದರ ಜಾರಿಯಾದ ದಿನವೇ ಪ್ರಯಾಣಿಕರ ಸಂಖ್ಯೆ 6.23 ಲಕ್ಷಕ್ಕೆ ಇಳಿಕೆ ಆಗಿತ್ತು.
ಅಲ್ಲಿಂದ ಈವರೆಗೆ ಗಮನಿಸುವುದಾದರೆ ಹಠ ಬಿಡಿದ BMRCL ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡಿದೆ. ಇದರ ಹೊರತಾಗಿ ದರ ಇಳಿಕೆಗೆ ಮುಂದಾಗಿದೆ. ಹೀಗಾಗಿ ನಮ್ಮ ಮೆಟ್ರೋ ಪ್ರಯಾಣೀಕರ ಸಂಖ್ಯೆ ಸದ್ಯ 5.30 ಲಕ್ಷಕ್ಕೆ ಮುಟ್ಟಿದೆ. ಇನ್ನೊಂದು ವಾರದಲ್ಲಿ ಬೆಂಗಳೂರು ನಾಗರಿಕರು ಮೆಟ್ರೋ ಹತ್ತುತ್ತಾರಾ? ಇಲ್ಲ ಪರಿಪೂರ್ಣವಾಗಿ ಖಾಸಗಿ ವಾಹನ, ಸಾರಿಗೆ ಬಸ್ ಗಳನ್ನೇ ಬಳಸಲು ನಿರ್ಧರಿಸುತ್ತಾರಾ ಎಂಬುದು ಗೊತ್ತಾಗುತ್ತದೆ.
ಬಿಎಂಟಿಸಿ 37 ಲಕ್ಷ ಪ್ರಯಾಣಿಕರ ಪೈಕಿ ಒಂದು ಲಕ್ಷದಷ್ಟು ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ. ಹೀಗಾಗಿ ಇದು ಮೆಟ್ರೋ ದರ ಏರಿಕೆಯಿಂದಲೇ ಹೆಚ್ಚಾಗಿದೆ ಎಂದು ಹೇಳಲು ಆಗದು. ಈ ಬಗ್ಗೆ ಕಾದು ನೋಡಿದರೆ ಖಚಿತ ಕಾರಣ ತಿಳಿಯಬಹುದು. ನಮ್ಮ ಮೆಟ್ರೋ ಬಹಿಷ್ಕಾರ ಶೀಘ್ರ ಮೆಟ್ರೋ ಪ್ರಯಾಣಿಕರ ಸಂಘಟನೆಗಳು BMRCL ವಿರುದ್ಧ ಸಮರ ಸಾರಿದೆ. ಹತ್ತು ಸಾವಿರ ಮಂದಿಯಿಂದ ಸಹಿ ಸಂಗ್ರಹಿಸಿದೆ. ಮೆಟ್ರೋ ನಿಗಮಕ್ಕೆ ಪತ್ರ ರವಾನಿಸಿದೆ. ಮೆಟ್ರೋ ದರ ಇಳಿಕೆಗೆ ಒಂದು ವಾರ ಗಡುವು ನೀಡಲಾಗಿದೆ. ಇಲ್ಲವಾದರೆ ಮೆಟ್ರೋ ಪ್ರಯಾಣಿಕರ ವೇದಿಕೆ ಮೆಟ್ರೋ ಸಂಚಾರ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದೆ.