ಬೆಂಗಳೂರು || ನಗರದಲ್ಲಿ ಹೆಚ್ಚಾದ ಥಂಡಿ, ಇಂದು ಹೇಗಿರಲಿದೆ ವಾತಾವರಣ, ಮುನ್ಸೂಚನೆ

ಬೆಂಗಳೂರು || ನಗರದಲ್ಲಿ ಹೆಚ್ಚಾದ ಥಂಡಿ, ಇಂದು ಹೇಗಿರಲಿದೆ ವಾತಾವರಣ, ಮುನ್ಸೂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಜೊತೆಗೆ ಏರುಗತಿಯ ಚಳಿಯ ವಾತಾವರಣವು ಮುಂದುವರಿದಿದೆ. ಬುಧವಾರ ಸಂಜೆ ಮತ್ತು ರಾತ್ರಿ ವಿಪರೀತ ಚಳಿಯ ಅನುಭವವಾಗಿದೆ. ಮಧ್ಯಾಹ್ನದವರೆಗೆ ಇದ್ದ ಕನಿಷ್ಠ ತಾಪಮಾನದಲ್ಲಿ ಭಾರೀ ಬದಲಾವಣೆ ಆಗಿದೆ. ಮೈಕೊರೆವ ಚಳಿಗೆ ಜನರ ಸುಸ್ತಾಗಿದ್ದಾರೆ. ಇಂದು ಗುರುವಾರವು (ಜ.09) ಈ ವಿಪರಿತ ಚಳಿ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಂತೆ ಬೆಂಗಳೂರಿನಲ್ಲೂ ವಿಪರೀತ ಚಳಿಯ ಅನುಭವವಾಗುತ್ತಿದೆ. ಬುಧವಾರ ದಿಢೀರ್ ಚಳಿ ಪ್ರಮಾಣದ ಹೆಚ್ಚಳದಿಂದಾಗಿ ಜನರು ಅನಾರೋಗ್ಯದ ಆತಂಕ ಎದುರಿಸುವಂತಾಗಿದೆ. ವಯಸ್ಸಾದವರು, ಶ್ವಾಸಕೋಶ ಸಂಬಂಧಿ ಕಾಯಿಲೆ ಇರುವವರು, ಮಕ್ಕಳು ಹೀಗೆ ವಿವಿಧ ವರ್ಗದವರಿಗೆ ಈ ಮೈಕೊರೆವ ಚಳಿ ಇನ್ನಿಲ್ಲದಂತೆ ಕಿರಿ ಕಿರಿ ನೀಡುತ್ತಿದೆ.

ಬುಧವಾರ ಬೆಳಗ್ಗೆಯಿಂದ ವಿವಿಧಡೆ ಕನಿಷ್ಠ ತಾಪಮಾನ 15 ರಿಂದ 16 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಸಂಜೆ ಹೊತ್ತಿಗೆ 14 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆ ಆಯಿತು. ತಡರಾತ್ರಿ ಚಳಿಯ ಪ್ರಮಾಣ ಇನ್ನಷ್ಟು ಏರಿಕೆ ಆಗಿದೆ. ಗುರುವಾರ ಬೆಳಗ್ಗೆ ನಗರದಲ್ಲಿ ಬೆಳ್ಳಂಬೆಳಗ್ಗೆ 14 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ಕನಿಷ್ಠ ತಾಪಮಾನ ದಾಖಲಾಗಿದೆ.

ಇಂದು ಗುರುವಾರ ಬೆಳಗ್ಗೆ ದಾಖಲಾದ ತಾಪಮಾನ

ಇಂದು ಬೆಳಗ್ಗೆ 09 ಗಂಟೆಗೆ ಬೆಂಗಳೂರು ನಗರದಲ್ಲಿ 14. 09 ಕನಿಷ್ಠ ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ (KIAL) ಪ್ರದೇಶದಲ್ಲಿ 14.3 ಹಾಗೂ ಬೆಂಗಳೂರು ಎಚ್ಎಎಲ್ ಏರ್ಪೋರ್ಟ್ ವ್ಯಾಪ್ತಿಯಲ್ಲಿ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಕರ್ನಾಟಕ ಹವಾಮಾನ ವರದಿ ಮಾಹಿತಿ ನೀಡಿದೆ.

ನಗರದಲ್ಲಿ ಇಂದು ಸಹ ಸಂಜೆ ಹೊತ್ತಿಗೆ ವ್ಯಾಪಕ ಚಳಿ ಆವರಿಸುವ ಲಕ್ಷಣಗಳು ದಟ್ಟವಾಗಿದೆ. ಹಿಂದು ಮಹಾಸಾಗರ ಮತ್ತು ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರವೇಶ, ಸುಳಿಗಾಳಿ ಪ್ರಭಾವದಿಂದಾಗಿ ವಾತಾವರಣದಲ್ಲಿ ಅದರಲ್ಲೂ ತಾಪಮಾನದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಇದರಿಂದಾಗಿ ಆಗಾಗ ವಾತಾವರಣದಲ್ಲಿ ದಿಢೀರ್ ಬದಲಾವಣೆಗಳು, ಚಳಿ ಏರಿಕೆಯಂತಹ ಸಂಗತಿಗಳು ಘಟಿಸುತ್ತಿವೆ.

ಮುಂದಿನ ಮೂರುದಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಬೆಳಗ್ಗೆ ಮತ್ತು ರಾತ್ರಿ ವಿಪರೀತ ಚಳಿ ಸೃಷ್ಟಿಯಾಗಲಿದ್ದು, ಮಂಜಿನ ವಾತಾವರಣವು ಕಂಡು ಬರಲಿದೆ.

ಎಲ್ಲೆಡೆ ಚಳಿ ಏರಿಕೆ, ಮುಂದುವರಿಕೆ ಸಾಧ್ಯತೆ

ಕೇವಲ ಬೆಂಗಳೂರು ಮಾತ್ರವಲ್ಲದೇ ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಬೀದರ್ ಜಿಲ್ಲೆಗಳಲ್ಲಿ ಚಳಿ ಬುಧವಾರದ (ಜನವರಿ 08) ಏರಿಕೆ ಆಗಿದೆ. ಇನ್ನೂ ಕೆಲವು ದಿನ ಇದೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *