ಬೆಂಗಳೂರು : ನಮ್ಮ ಮೆಟ್ರೋ ಯೋಜನೆಯೊಂದರ ಅಡಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮೆಟ್ರೋ ನಿಲ್ದಾಣವನ್ನು ಬೇರೆಡೆ ಸ್ಥಳಾಂತರಿಸಲು ತಿರ್ಮಾನಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ ನಿರ್ಮಿಸುವ ಕಾರಣಕ್ಕೆ ಪೀಣ್ಯ ಮೆಟ್ರೋ ನಿಲ್ದಾಣ ಬೇರೆಡೆ ಸ್ಥಳಾಂತರಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
BMRCL ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯಡಿ ವಿವಿಧ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದೇ ಯೋಜನೆಯಡಿ ಪೀಣ್ಯದಲ್ಲಿ ಹೊಸ ಮೆಟ್ರೋ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದು ಸೇರಿದಂತೆ ವಿವಿಧ ಇಂಟರ್ ಚೇಂಜ್ ನಿಲ್ದಾಣಗಳು ಈ ಯೋಜನೆಯಡಿ ಬರಲಿವೆ. ಅದರಲ್ಲಿ ಪೀಣ್ಯ ಮೆಟ್ರೋ ನಿಲ್ದಾಣವು ಒಂದಾಗಿದ್ದು, ಇದರ ಸ್ಥಳಾಂತರಕ್ಕೆ ಬಿಎಂಆರ್‌ಸಿಎಲ್ ನಿರ್ಧರಿಸಲಾಗಿದೆ.
ಪೀಣ್ಯ ಮೆಟ್ರೋ ನಿಲ್ದಾಣವು ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ ಆಗಿರಲಿದೆ. ಈ ಕಟ್ಟಡ ಹೆಚ್ಚು ಎತ್ತರ ಹೊಂದಿರುವ ಕಾರಣ, ಹಾಲಿ ಸ್ಥಳದಿಂದ ಹೊರ ವರ್ತುಲ ರಸ್ತೆಯ ಗೋರಗುಂಟೆಪಾಳ್ಯ ಸಿಗ್ನಲ್ ಬಳಿಯ ಸ್ಥಳಾಂತರಿಸಲು, ಅಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಸ್ಥಳ ಪರಿಶೀಲನೆಗೆ ಬಂದಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ BMRCL ಪ್ರಸ್ತಾವನೆ ಸಲ್ಲಿಸಲಿದೆ. ಮುಂದಿನ ದಿನಗಳಲ್ಲಿ ಈ ಮೆಟ್ರೋ ನಿಲ್ದಾಣದ ಬಗ್ಗೆ ಅಧ್ಯಯನ ನಡೆಯುವ ಸಾಧ್ಯತೆ ಇದೆ.
ಮಾರ್ಗದ 300 ಮೀಟರ್ ಉದ್ದ ಇಳಿಕೆ
ಬೆಂಗಳೂರು ಮೆಟ್ರೋ ಮೂರನೇ ಹಂತದ ಯೋಜನೆಯಡಿ ಜೆ.ಪಿ. ನಗರ ಹಂತ 4 ದಿಂದ ಕೆಂಪಾಪುರವರೆಗೆ (32.15 ಕಿಮೀ) ಎತ್ತರಿಸಿದ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಇದಕ್ಕೆ ಕಿತ್ತಳೆ ಮಾರ್ಗವೆಂದು ಹೆಸರಿಡಲಾಗಿದೆ. ಈ ಮಾರ್ಗ ಉದ್ದೇಶಿಸಿ ನಿರ್ಮಾನದಲ್ಲಿ ಕಾರಣಾಂತರಗಳಿಂದ 300 ಮೀಟರ್ ಉದ್ದ ಕಡಿತಗೊಳ್ಳಲಿದೆ. ಇದೆಲ್ಲವನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ಗೋರಗುಂಟೆ ಪಾಳ್ಯ ಅಸ್ತಿತ್ವದಲ್ಲಿರುವ ಹಾಲಿ ಮೆಟ್ರೋ ನಿಲ್ದಾಣಗಳು ಹಾಗೂ ಹೊಸ ಪೀಣ್ಯ ಇಂಟರ್‌ಚೆಂಜ್ ಮೆಟ್ರೋ ನಿಲ್ದಾಣಗಳಿಗೆ ಪ್ರತ್ಯೇಕ ಪಾದಚಾರಿ ಮೇಲ್ಸೇತುವೆ ನಿರ್ಮಿಸಿ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಮೇಲಿನ ಎಲ್ಲ ಅಂಶಗಳು, ಬದಲಾವಣೆಗಳನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಗಮನಕ್ಕೆ ತಂದಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ನಮ್ಮ ಮೆಟ್ರೋ 3ನೇ ಹಂತ ಸಮಗ್ರ ಯೋಜನಾ ವರದಿಗೆ (DPR) ಒಪ್ಪಿಗೆ ನೀಡಿದೆ. ಒಟ್ಟು ಎರಡು ಕಾರಿಡಾರ್‌ಗಳು ಈ ಯೋಜನೆಯಡಿ ಬರಲಿವೆ. ಕಿತ್ತಳೆ ಮಾರ್ಗದ ಜೊತೆಗೆ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಮೀ ಉದ್ದದ ಎತ್ತರಿಸಿದ ಎರಡನೇ ಮಾರ್ಗ ನಿರ್ಮಾಣಗೊಳ್ಳಲಿದೆ.
ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳು
ಈ ಮಾರ್ಗಗಳಲ್ಲಿ ಜೆ.ಪಿ. ನಗರ, ಮೈಸೂರು ರಸ್ತೆ, ಸುಮನಹಳ್ಳಿ ಮತ್ತು ಪೀಣ್ಯದಲ್ಲಿ ಇಂಟರ್ಚೇಂಜ್ ನಿಲ್ದಾಣಗಳು ತಲೆ ಎತ್ತಲಿವೆ. ನೇರಳೆ ಮಾರ್ಗ ಮತ್ತು ಹಸಿರು ಮಾರ್ಗವನ್ನು ಸಂಧಿಸಲಿವೆ. ಸದ್ಯ ಈ ಬಗ್ಗೆ ಪೀಣ್ಯ ಇಂಟರ್‌ಚೇಂಜ್ ಕುರಿತು ಮರು ಮೌಲ್ಯಮಾಪನ ನಡೆಸುವ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ.
ಇಂಟರ್‌ಚೇಂಜ್ ನಿಲ್ದಾಣ ನಿರ್ಮಿಸುವ ಕಾರಣಕ್ಕೆ ಪೀಣ್ಯದಲ್ಲಿ ತಲೆಎತ್ತಬೇಕಿದ್ದ ಮೆಟ್ರೋ ನಿಲ್ದಾಣ ಗೊರಗುಂಟೆ ಪಾಳ್ಯದ ಸಮೀಪ ಸ್ಥಾಪಿಸುವ ಚಿಂತನೆ ಮುನ್ನೆಲೆಗೆ ಬಂದಿದೆ. ಇನ್ನೂ ಇದೇ ಮೂರನೇ ಹಂತದ ಯೋಜನೆಯಡಿ ಎತ್ತರಿಸಿದ ಎರಡು ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು ಸರ್ಕಾರ ಸೂಚನೆ ನೀಡಲಾಗಿದೆ.