ಬೆಂಗಳೂರು || ‘ನೀಲಿ ಮಾರ್ಗ’ದಲ್ಲಿ ತೆಲೆ ಎತ್ತಲಿದೆ ಅತೀ ಎತ್ತರದ ಮೆಟ್ರೋ ನಿಲ್ದಾಣ, ಕಾಮಗಾರಿ ಅಪ್ಡೇಟ್

ಬೆಂಗಳೂರು || 'ನೀಲಿ ಮಾರ್ಗ'ದಲ್ಲಿ ತೆಲೆ ಎತ್ತಲಿದೆ ಅತೀ ಎತ್ತರದ ಮೆಟ್ರೋ ನಿಲ್ದಾಣ, ಕಾಮಗಾರಿ ಅಪ್ಡೇಟ್

Our metro

ಬೆಂಗಳೂರು: ಬೆಂಗಳೂರು ಜನರ ಜೀವನಾಡಿ ನಮ್ಮ ಮೆಟ್ರೋ ನೀಲಿ ಮಾರ್ಗದಲ್ಲಿ ಕಾಮಗಾರಿ ಬರದಿಂದ ಸಾಗಿದೆ. ಉತ್ತರದಿಂದ ದಕ್ಷಿಣ ಭಾಗಗಳಲ್ಲಿ ಸಂಪರ್ಕ ಸಾಧಿಸುವ ಈ ನೀಲಿ ಮಾರ್ಗದಲ್ಲಿ ಅತೀ ಎತ್ತರದ ಮೆಟ್ರೋ ನಿಲ್ದಾಣದ ರೂಫ್ ಟ್ರಸ್ ಸಾಮಗ್ರಿ ಅಳವಡಿಕೆ ಮಾಡಲಾಗುತ್ತಿದೆ. ನೀಲಿ ಮಾರ್ಗದಲ್ಲಿನ ಎಲ್ಲ ನಿಲ್ದಾಣಗಳ ಈ ನಿಲ್ದಾಣವೇ ರೂಫ್ ಟ್ರಸ್ ಅಳವಡಿಕೆಯಲ್ಲಿ ಮೊದಲನೇಯದ್ದು ಎಂದು ಹೇಳಲಾಗುತ್ತಿದೆ.

ನಮ್ಮ ಮೆಟ್ರೋ ಯೋಜನೆಯ ಪೈಕಿ 2ಎ ಮತ್ತು 2ಬಿ ಅಡಿ ಎರಡು ಹಂತಗಳಲ್ಲಿ ಔಟರ್ ರಿಂಗ್ ರೋಡ್ (ORR) ಈ ನೀಲಿ ಮಾರ್ಗದ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂ ಮತ್ತು ಕೆ.ಆರ್.ಪುರಂ ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಎರಡು ಹಂತಗಳಲ್ಲಿ ನೀಲಿ ಮಾರ್ಗವು ತಲೆ ಎತ್ತಲಿದೆ. ಒಟ್ಟು 56 ಕಿ.ಮೀ. ಉದ್ದವಿರುವ ಈ ಮಾರ್ಗದಲ್ಲಿ, 30 ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗುತ್ತಿವೆ.

ಈ ಎಲ್ಲ ಮೆಟ್ರೋ ನಿಲ್ದಾಣಗಳ ಪೈಕಿ ORR ವ್ಯಾಪ್ತಿಯಲ್ಲಿ ಬರುವ ಸರಸ್ವತಿ ನಗರ ಮೆಟ್ರೋ ನಿಲ್ದಾಣವು ಪರಿಪೂರ್ಣವಾಗಿ ಸಿದ್ಧವಾಗುವ ಮೊದಲ ನಿಲ್ದಾಣವಾಗಲಿದೆ. ರೂಫ್ ಟ್ರಸ್ ಸಾಮಗ್ರಿಗಳನ್ನು ಅಳವಡಿಸಲಾಗುತ್ತಿದೆ. ಈ ಕಾರ್ಯ ಆರಂಭಿಸುತ್ತಿರುವ ಎಲ್ಲ ನಿಲ್ದಾಣಗಳಲ್ಲಿ ಮೊದಲನೆಯದು ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ (X) @sunilho ಮಾಹಿತಿ ಹಂಚಿಕೊಂಡಿದ್ದಾರೆ.

ನೀಲಿ ಮಾರ್ಗದಲ್ಲಿ ಬರುವ ಈ ಸರಸ್ವತಿ ನಗರವು ಬೆಂಗಳೂರಿನಲ್ಲಿರುವ ನಮ್ಮ ಮೆಟ್ರೋದ ನೀಲಿ ಮಾರ್ಗದಲ್ಲಿ ಉತ್ತರ-ದಕ್ಷಿಣ ಕಾರಿಡಾರ್ನಲ್ಲಿ ಕಟ್ಟಲಾಗುತ್ತಿರುವ ಅತೀ ಎತ್ತರದ ಮೆಟ್ರೋ ನಿಲ್ದಾಣವಾಗಿದೆ. ಈ ಮೆಟ್ರೋ ನಿಲ್ದಾಣವು ಮುಖ್ಯವಾಗಿ ಲೌರಿ ಸ್ಮಾರಕ ಶಿಕ್ಷಣ ಸಂಸ್ಥೆಗಳಿಗೆ, ಹುಂಡೈ, ಎಂಜಿ (ಮೋರಿಸ್ ಗ್ಯಾರೇಜಸ್), ಟಾಟಾ ಮೋಟಾರ್ಸ್, ರೆನಾಲ್ಟ್ ಮತ್ತು ಹೋಂಡಾ ಮೋಟಾರ್ಸ್ನಂತಹ ಕೆಲವು ಆಟೋಮೋಟಿವ್ ಕಂಪನಿಗಳ ನೌಕರರಿಗೆ, ಈ ಭಾಗದ ಜನರಿಗೆ ಸೇವೆ ಸಲ್ಲಿಸುತ್ತದೆ.

SNC ಯಿಂದ ಸರಸ್ವತಿ ನಗರ ಮೆಟ್ರೋ ನಿಲ್ದಾಣ ನಿರ್ಮಾಣ ಇನ್ನೂ ಈ ಸರಸ್ವತಿ ನಗರ ವ್ಯಾಪ್ತಿಯಲ್ಲಿ ಕೆ.ಆರ್.ಪುರಂ, ಮಹಾದೇವಪುರ ಮತ್ತು ವೈಟ್ಫೀಲ್ಡ್, ಎಚ್ಎಸ್ಆರ್ ಬಡಾವಣೆ, ಸಿಲ್ಕಬೋರ್ಡ್ ಕಡೆಗಿಂತನ ಓಡಾಡುವವರಿಗೆ ಪ್ರಮುಖ ಸ್ಥಳವು ಆಗಿದೆ. ಈ ಮೆಟ್ರೋ ಮಾರ್ಗ ಮತ್ತು ನಿಲ್ದಾಣಗಳು 2026 ರ ಜೂನ್ ನಲ್ಲಿ ಕಾರ್ಯಾರಂಭಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ಲಾನ್ ಮಾಡಿಕೊಂಡಿದೆ. ಬೆಂಗಳೂರು ಮೆಟ್ರೋದ 56 ಕಿಮೀ ನೀಲಿ ಮಾರ್ಗವನ್ನು ನಾಗಾರ್ಜುನ್ ಕನ್ಸ್ಟ್ರಕ್ಷನ್ಸ್, ಶಂಕರನಾರಾಯಣ ಕನ್ಸ್ಟ್ರಕ್ಷನ್ಸ್ (SNC), ಎಂಆರ್ ನಾಗಾರ್ಜುನ್ ಸೇರಿ ವಿವಿಧ ಕಂಪನಿಗಳು ನಿರ್ಮಿಸುತ್ತಿವೆ. ಈ ಸರಸ್ವತಿ ನಗರ ಮೆಟ್ರೋ ನಿಲ್ದಾಣ ನಿರ್ಮಾಣ ಜವಾಬ್ದಾರಿಯನ್ನು ಶಂಕರನಾರಾಯಣ ಕನ್ಸ್ಟ್ರಕ್ಷನ್ಸ್ (SNC) ವಹಿಸಿಕೊಂಡಿದೆ.

Leave a Reply

Your email address will not be published. Required fields are marked *