ಬೆಂಗಳೂರು || ಇದು ಅಂಬೇಡ್ಕರ್ ಸ್ಮರಣೆ ಅಲ್ಲ: ಸಿದ್ದರಾಮಯ್ಯ ವ್ಯಸನ ಬೇರೆಯದ್ದೇ ಇದೆ: ಆರ್.ಅಶೋಕ್

ಬೆಂಗಳೂರು || ಇದು ಅಂಬೇಡ್ಕರ್ ಸ್ಮರಣೆ ಅಲ್ಲ: ಸಿದ್ದರಾಮಯ್ಯ ವ್ಯಸನ ಬೇರೆಯದ್ದೇ ಇದೆ: ಆರ್.ಅಶೋಕ್

ಬೆಂಗಳೂರು: ರಾಜ್ಯಸಭೆಯಲ್ಲಿ ಬಿ.ಆರ್.ಅಂಬೇಡ್ಕರ್ ಕುರಿತು ಮಾತನಾಡಿದ್ದ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ಸಿಗರು ಮುಗಿಬಿದ್ದಿದ್ದಾರೆ. ಇದರ ಬೆನ್ನಲ್ಲೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿ ಕರ್ನಾಟಕದಲ್ಲಿ ಮುಖ್ಯಮಂತ್ರಿಗೆ ಸಿದ್ದರಾಮಯ್ಯನವರಿಗೆ ಹಿಡಿದಿರುವುದು ಅಂಬೇಡ್ಕರ್ ವ್ಯಸನ ಅಲ್ಲ, ಅಧಿಕಾರದ ವ್ಯಸನ ಎಂದು ಮತ್ತೆ ಜರಿದಿದ್ದಾರೆ.

‘ಇತ್ತೀಚೆಗೆ ಅಂಬೇಡ್ಕರ್ ಅವರ ಜಪ ಫ್ಯಾಶನ್ ಆಗಿಬಿಟ್ಟಿದೆ, ಇದರ ಬದಲು ದೇವ ಜಪ ಮಾಡಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು’ ಎಂದು ಅಮೀತ್ ಶಾ ಅವರು ಹೇಳಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಸಿಎಂ ವಿರುದ್ಧ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ಸಿದ್ದರಾಮಯ್ಯನವರದು ನಿತ್ಯ ಅಂಬೇಡ್ಕರ್ ಸ್ಮರಣೆ ಅಲ್ಲ, ಕುರ್ಚಿ ಉಳಿಸಿಕೊಳ್ಳಲು ನೆಹರು-ಗಾಂಧಿ ಪರಿವಾರದ ನಿತ್ಯ ಸ್ಮರಣೆ ಮಾಡುತ್ತಿದ್ದಾರೆ. ದಲಿತರಿಗೆ ಮತದಾನದ ಹಕ್ಕು ಬೇಡ, ಹಿಂದುಳಿದವರಿಗೆ ಮೀಸಲಾತಿ ಬೇಡ, ಅಂಬೇಡ್ಕರ್ ಅವರು ಸಂಪುಟದಲ್ಲಿ ಇಲ್ಲದಿದ್ದರೆ ಸರ್ಕಾರಕ್ಕೆ ಏನೂ ನಷ್ಟವಿಲ್ಲ ಎಂದಿದ್ದ ದಲಿತ ವಿರೋಧಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ.

ಅಂಬೇಡ್ಕರ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಕಾಂಗ್ರೆಸ್ನಲ್ಲಿ ಇದ್ದುಕೊಂಡು ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಸಿಎಂ ಸಿದ್ದರಾಮಯ್ಯನವರಿಗೆ ಯಾವ ನೈತಿಕತೆಯೂ ಇಲ್ಲ. ಕಾಂಗ್ರೆಸ್ ಸೇರುವುದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಮ ಎಂದು ಅಂಬೇಡ್ಕರ್ ಅವರು ದಲಿತರಿಗೆ ಸಲಹೆ ನೀಡಿದ್ದರು ಎಂದರು. ಆದರೆ ಅಂಬೇಡ್ಕರ್ ಅವರ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸಿದ್ದರಾಮಯ್ಯನವರು ಈಗ ಅಧಿಕಾರಕ್ಕಾಗಿ ಅದೇ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ, ಸಂವಿಧಾನದ ಬಗ್ಗೆ ಮಾತನಾಡುವುದಕ್ಕೆ ಮುಂಚೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ನಂತರ ಮಾತನಾಡಬೇಕು ಎಂದು ಆಗ್ರಹಿಸಿದರು.

ಕುರ್ಚಿಗಾಗಿ ನೆಹರು, ಗಾಂಧಿ ಪರಿವಾರ ಸ್ಮರಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಹಿಡಿದಿರುವುದು ಅಂಬೇಡ್ಕರ್ ವ್ಯಸನ ಅಲ್ಲ. ಅಧಿಕಾರದ ವ್ಯಸನ. ಆತ್ಮವಂಚನೆ ಮಾಡಿಕೊಂಡಾದರೂ ಸರಿ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡರೂ ಸರಿ, ಒಟ್ಟಿನಲ್ಲಿ ಅಧಿಕಾರ ಅನುಭವಿಸುವ ಕೆಟ್ಟ ವ್ಯಸನ ಅವರಿಗೆ ಹಿಡಿದುಕೊಂಡಿದೆ. ಸಿದ್ದರಾಮಯ್ಯನವರದು ನಿತ್ಯ ಅಂಬೇಡ್ಕರ್ ಸ್ಮರಣೆ ಅಲ್ಲ, ಕುರ್ಚಿ ಉಳಿಸಿಕೊಳ್ಳಲು ನೆಹರು-ಗಾಂಧಿ ಪರಿವಾರದ ಸ್ಮರಣೆ ಎಂದು ಲೇವಡಿ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ತಮಗೆ ನಿಜವಾಗಿಯೂ ಅಂಬೇಡ್ಕರ್ ಅವರ ಬಗ್ಗೆ ಕಿಂಚಿತ್ತಾದರೂ ಅಭಿಮಾನ, ಗೌರವ ಇದ್ದರೆ, ಅಂಬೇಡ್ಕರ್ ಅವರ ಉದಾತ್ತ ಚಿಂತನೆಗಳ ಬಗ್ಗೆ ಕಿಂಚಿತ್ತಾದರೂ ಬದ್ಧತೆ ಇದ್ದರೆ ಮೊದಲು ಮುಖ್ಯಮಂತ್ರಿ ಪದವಿ ತ್ಯಜಿಸಬೇಕು. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *