ಚನ್ನಬಸವ.ಎಂ ಕಿಟ್ಟದಾಳ್
ತುಮಕೂರು ಗ್ರಾಮಾಂತರ : ಗ್ರಾಮಗಳ ಅಭಿವೃದ್ಧಿಯೇ ಸರ್ಕಾರದ ದ್ಯೇಯವಾಗಿದೆ. ಸರ್ಕಾರಗಳು ಕೋಟಿ ಕೋಟಿ ಅನುದಾನವನ್ನು ರಸ್ತೆ, ಚರಂಡ ನಿರ್ಮಾಣದ ಅಭಿವೃದ್ಧಿಗೆ ವಿನಿಯೋಗ ಮಾಡುತ್ತವೆ. ಆದರೆ ಅದೇಷ್ಟೋ ರಸ್ತೆಗಳು, ಚರಂಡಿಗಳು ಅಭಿವೃದ್ಧಿ ಮಾತ್ರ ಸುಧಾರಿಸಿಲ್ಲ. ಹೌದು ತುಮಕೂರು ನಗರಕ್ಕೆ ಸಮೀಪ ವಿರುವ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ವರ್ಷಗಳಿಂದಲು ಚರಂಡಿ ಸಮಸ್ಯೆ ಇದ್ದರು ಅದರ ಬಗ್ಗೆ ಯಾವುದೇ ಅಧಿಕಾರಿಗಳು ಗಮನ ಹರಿಸಿಲ್ಲ.
ತುಮಕೂರು ತಾಲ್ಲೂಕು ಕಸಬ ಹೋಬಳೀ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಊರ್ಡಿಗೆರೆ ಮುಖ್ಯ ರಸ್ತೆ,ಸಾಧನ ಬಡಾವಣೆಯ ಕುಂದೂರು ಕ್ರಾಸ್‌ನಲ್ಲಿ ರಸ್ತೆ ಅಗಲಿಕರಣದ ಕಾಮಗಾರಿ ನಡೆದಿದೆ. ರಸ್ತೆ ನಿರ್ಮಾಣ ಮಾಡುವ ಬರದಲ್ಲಿ ಚರಂಡಿಯನ್ನ ರಾಜಕಾಲುವೆಗೆ ಸಂಪರ್ಕಕಲ್ಪಿಸಿದ್ದಾರೆ. ಆದರೆ ಈ ರಾಜಕಾಲುವೆ ಖಾಸಗಿ ವ್ಯಕ್ತಿಗಳ ಜಮೀನಾದ ಸರ್ವೆ ನಂ. 22 ರಲ್ಲಿ ಹಾದು ಹೋಗಿದೆ. ಈ ಖಾಸಗಿ ವ್ಯಕ್ತಿಗಳು ರಾಜಕಾಲುವೆಯನ್ನು ಮುಚ್ಚಿರುವ ಪರಿಣಾಮ ಅಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಸಮರ್ಪಕವಾಗಿ ಹೋಗದೆ ರಸ್ತೆಯ ಮೇಲೆ ಹರಿಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.
ಮಳೆ ನೀರು, ಚರಂಡಿ ನೀರು ಹರಿಯಲು ಕೆಳ ಸೇತುವೆ ಇತ್ತು : ಬೆಳಗುಂಬ ಗ್ರಾ.ಪಂನ ಕುಂದೂರು ಕ್ರಾಸ್ ಬಳಿ ಮಳೆ ನೀರು ಹಾಗೂ ಚರಂಡಿ ನೀರು ಸರಾಗವಾಗಿ ಹರಿಯಲು ಪುರಾತನ ಕಾಲದಿಂದಲೂ ಒಂದು ಕೆಳ ಸೇತುವೆ ಇದ್ದಂತಹದ್ದು, ಆದರೇ ರಸ್ತೆ ಅಗಲಿಕರಣ ಮಾಡುವ ವೇಳೆ ಆ ಕೆಳ ಸೇತುವೆಯನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಆದ್ದರಿಂದ ಕೊಳಚೆ ನೀರು ಈಗ ರಸ್ತೆಯ ಮೇಲೆ ಹರಿಯುತ್ತಿರುವಂತಹದ್ದು ಎಂದು ಅಲ್ಲಿನ ಸ್ಥಳೀಯರ ಆಕ್ರೋಶ.
ಅಧಿಕಾರಿಗಳ ನಿರ್ಲಕ್ಷ : ಗ್ರಾಮದಲ್ಲಿನ ಅವ್ಯವಸ್ಥೆ ಕುರಿತು ಗ್ರಾಮದ ಜನರು ಪಿಡಬ್ಲೂಡಿ ಅಧಿಕಾರಿ ಮತ್ತು ಪಿಡಿಒ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯು ತಮಕೂರು ನಗರ ಮತ್ತು ಗ್ರಾಮಾಂತರದ ಗಡಿ ಭಾಗದಲ್ಲಿರುವುದರಿಂದ ಈ ರಸ್ತೆ ನಮ್ಮ ಸರ್ಬದಿಗೆ ಬರುವುದಿಲ್ಲ ಎಂದು ಕುಂಟು ನೆಪ ಹೇಳಿ ಜಾರಿ ಕೊಳ್ಳುತ್ತಿರುವ ಅಧಿಕಾರಿಗಳು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್‌ಗೆ ಗ್ರಾಮಸ್ಥರ ಮನವಿ : ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದರು ಯಾವ ಉಪಯೋಗವಾಗದ ಕಾರಣ ಸ್ಥಳೀಯರು ಬೇಸತ್ತು ತಹಶೀಲ್ದಾರ್ ಅವರಿಗೆ ರಸ್ತೆಯನ್ನು ಮತ್ತು ಚರಂಡಿಯನ್ನು ಸರಿಪಡಿಸಿಕೊಡುವಂತೆ ಮನವಿಯನ್ನು ನೀಡಿದ್ದರು. ಆದರೂ ತಾಹಶೀಲ್ದಾರ್ ಕೂಡ ನಿರ್ಲಕ್ಷö್ಯತನವನ್ನು ತೋರಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂಬುದು ಜನರ ಆರೋಪ.
ಕಂಡು ಕಾಣದಂತಿರುವ ಜನಪ್ರತಿನಿಧಿಗಳು : ಬೆಳಗುಂಬ ಗ್ರಾ.ಪಂನ ಸಾಧನ ಬಡವಣೆಯಲ್ಲಿನ ದುಸ್ಥಿತಿಯನ್ನು ಕಂಡು ಕಾಣದಂತೆ ಬೇಜವಾಬ್ದಾರಿ ತನವನ್ನು ತೋರಿದ್ದಾರೆ. ಸಾಕಷ್ಟು ವರ್ಷಗಳ ಹಿಂದಿನಿOದಲೂ ಈ ಸಮಸ್ಯೆ ಇದ್ದು2 ಬಾರಿ ಶಾಸಕರ ಬದಲಾವಣೆಯಾದರು ಈ ಸಮಸ್ಯೆಗೆ ಪರಿಹಾರ ಕಂಡುಬOದಿಲ್ಲ ಎಂದು ಬೇಸರಿಸಿದ ಜನತೆ.
ಈ ಬಗ್ಗೆ ಸಂಬOಧ ಪಟ್ಟ ಪಿಡಬ್ಲೂಡಿ, ಪಿಡಿಒ, ತಹಶೀಲ್ದಾರ್ ಮತ್ತು ಜನಪ್ರತಿನಿಧಿಗಳು ಗಮನಹರಿಸಿ ಪರಿಹಾರಕ್ಕೆ ಸೂಚನೆ ನೀಡಬೇಕೆಂದು ಗ್ರಾಮಸ್ಥರು ಹಾಗೂ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಮನವಿಯನ್ನು ಮಾಡಿದರು.
ಗ್ರಾಮಸ್ಥರು ಈ ಬಗ್ಗೆ ಬೆಳಗುಂಬ ಗ್ರಾ.ಪಂಗೆ ದೂರನ್ನು ನೀಡಿದ್ದಾರೆ. ರಸ್ತೆ ರಸ್ತೆ ಸಮಸ್ಯೆ ಜೊತೆಗೆ ಚರಂಡಿ ಸಮಸ್ಯೆಯೂ ಇದ್ದು, ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬOಧ ಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಮಾಡಲಾಗಿದೆ. ಶೀಘ್ರದಲ್ಲೇ ಶಾಸಕರು ಕೂಡ ಸ್ಥಳ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಹೇಳಿದರು.