ಚಿಕ್ಕಬಳ್ಳಾಪುರ || ಭಯೋತ್ಪಾದನೆಯ ಉದ್ದೇಶವನ್ನು ಉಕ್ಕಿನ ಹಸ್ತದಿಂದ ನಿಭಾಯಿಸಬೇಕಾಗಿದೆ : ಸದ್ಗುರು

ಚಿಕ್ಕಬಳ್ಳಾಪುರ || ಭಯೋತ್ಪಾದನೆಯ ಉದ್ದೇಶವನ್ನು ಉಕ್ಕಿನ ಹಸ್ತದಿಂದ ನಿಭಾಯಿಸಬೇಕಾಗಿದೆ : ಸದ್ಗುರು

ಚಿಕ್ಕಬಳ್ಳಾಪುರ: ಭಯೋತ್ಪಾದನೆಯ ಉದ್ದೇಶ ಸಮಾಜವನ್ನು ಭಯದಿಂದ ಅಂಗವಿಕಲಗೊಳಿಸುವುದು. ಅದನ್ನು ಉಕ್ಕಿನ ಹಸ್ತದಿಂದ ನಿಭಾಯಿಸಬೇಕಾಗಿದೆ ಎಂದು ಪಹಲ್ಗಾಮದಲ್ಲಾದ ಉಗ್ರರ ದಾಳಿಯ ಕುರಿತು ಸದ್ಗುರುಗಳು ತಿಳಿಸಿದರು.

ಪಹಲ್ಗಾಮ್  ದಾಳಿಯ ಬಗ್ಗೆ ಬಲವಾಗಿ ಪ್ರತಿಕ್ರಿಯಿಸಿದ ಸದ್ಗುರುಗಳು, ನಾವು ಈ ರಾಷ್ಟçದ ಸಾರ್ವಭೌಮತ್ವವನ್ನು ಸಂರಕ್ಷಿಸಲು ಮತ್ತು ಪೋಷಿಸಲು ಬಯಸಿದರೆ, ಈ ಶಕ್ತಿಗಳನ್ನು ದೃಢ ನಿರ್ಧಾರಗಳಿಂದ ಮತ್ತು ಕಠಿಣವಾದ ದೀರ್ಘಕಾಲೀನ ಸಂಕಲ್ಪದಿAದ ನಿಭಾಯಿಸಬೇಕು ಎಂದು ಹೇಳಿದರು.

ಏಪ್ರಿಲ್ 23 ರಂದು  ಜಮ್ಮು – ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಯು ಕನಿಷ್ಠ 26 ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಅವರಲ್ಲಿ ಹೆಚ್ಚಿನವರು ಮುಗ್ಧ ಪ್ರವಾಸಿಗರಾಗಿದ್ದರು. ಈ ಘಟನೆಯ ಬಗ್ಗೆ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ ಸದ್ಗುರುಗಳು, ಹೇಡಿ ತನದ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಅವರು ತಮ್ಮ ಆಲೋಚನೆಗಳನ್ನು ಹಂಚಿಕೊAಡಿದ್ದು, ಇಂತಹ ಕೃತ್ಯಗಳ ಹಿಂದಿನ ದೊಡ್ಡದಾದ ಉದ್ದೇಶ ಮತ್ತು ಅದಕ್ಕೆ ಬೇಕಾದ ದೇಶದ ಒಗ್ಗಟ್ಟಿನ ಮತ್ತು ವಿಚಾರಯುಕ್ತ  ಪ್ರತಿಕ್ರಿಯೆಯ ಮಹತ್ವದ ಬಗ್ಗೆ ಪ್ರತಿಬಿಂಬಿಸಿದ್ದಾರೆ.

ತಮ್ಮ ಎಕ್ಸ್ ಖಾತೆ ಪೋಸ್ಟ್ನಲ್ಲಿ ಸದ್ಗುರುಗಳು, ಭಯೋತ್ಪಾದನೆಯ ಉದ್ದೇಶ ಯುದ್ಧ ಅಲ್ಲ, ಸಮಾಜದಲ್ಲಿ ಭಯವನ್ನು ಉಂಟು ಮಾಡಿ ಅದರ ಶಕ್ತಿ ಗುಂದಿಸುವುದು. ಆತಂಕವನ್ನು ಹರಡಿ, ಸಮಾಜವನ್ನು ಒಡೆದು, ದೇಶದ ಆರ್ಥಿಕ ಪ್ರಗತಿಯನ್ನು ತಡೆದು ಎಲ್ಲಾ ಹಂತದಲ್ಲೂ ನಿರಂಕುಶತೆಯನ್ನು  ನಿರ್ಮಿಸುವುದು. ಈ ದೇಶದ ಸ್ವಾಯತ್ತತೆಯನ್ನು ಕಾಪಾಡಿ ಅದನ್ನು ಪೋಷಿಸಬೇಕೆಂದರೆ, ಇಂತಹ ವಿಷಯಗಳನ್ನು ಅತ್ಯಂತ ಕಠಿಣವಾದ ಕ್ರಮಗಳ ಮೂಲಕ ನಿಭಾಯಿಸಿ ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳಬೇಕು ಎಂದುಅಭಿಪ್ರಾಯಪಟ್ಟರು.

ಭಯೋತ್ಪಾದನೆ ಒಡ್ಡುವ ಸವಾಲುಗಳಿಗೆ ದೀರ್ಘಕಾಲೀನ ಪರಿಹಾರಗಳ ಕುರಿತು ಮಾತನಾಡಿದ ಸದ್ಗುರುಗಳು, ಶಿಕ್ಷಣ, ಆರ್ಥಿಕ ಅವಕಾಶ ಮತ್ತು ಮಾನವ ಕಲ್ಯಾಣಕ್ಕೆ ಹೆಚ್ಚು ಸಮಾನವಾದ ಅವಕಾಶಗಳನ್ನು ಕಲ್ಪಿಸುವ ವಿಧಾನದ ಅಗತ್ಯವನ್ನು ಒತ್ತಿ ಹೇಳಿದರು. ಶಿಕ್ಷಣ, ಆರ್ಥಿಕತೆ, ಸಂಪತ್ತು ಮತ್ತು ಸೌಖ್ಯ ಎಲ್ಲಾ ಹಂತಗಳಲ್ಲೂ ಸಮಾನ ಅವಕಾಶಗಳು ಸಿಗುವಂತಾದರೆ ಅವು ದೀರ್ಘಕಾಲಿಕ ಪರಿಹಾರವಾಗಬಹುದು ಎಂದು ಅವರು ಹೇಳಿದರು.

ಆದರೆ ಸದ್ಯಕ್ಕೆ ನಾವೀಗ ಜಾತಿ, ಮತ, ನಮ್ಮ ರಾಜಕೀಯ ನಿಲುವುಗಳನ್ನೆಲ್ಲ ಬದಿಗಿಟ್ಟು ಒಂದು ದೇಶವಾಗಿ ಒಗ್ಗೂಡಿ, ತಮ್ಮ ಕರ್ತವ್ಯ ನಿರ್ವಹಣೆಗೆ ಹೊರಟಿರುವ ನಮ್ಮ ಸುರಕ್ಷಾಬಲಗಳೊಂದಿಗೆ ನಿಲ್ಲಬೇಕಾಗಿದೆ. ಈ ದಾಳಿಯಲ್ಲಿ ನಮ್ಮನ್ನಗಲಿದವರಿಗೆ ತೀವ್ರ ಸಂತಾಪಗಳು ಮತ್ತು ಗಾಯಾಳುಗಳಿಗೆ ಆಶೀರ್ವಾದಗಳು ಎಂದು ಸದ್ಗುರುಗಳು ಹೇಳಿದರು.

Leave a Reply

Your email address will not be published. Required fields are marked *