ಬೆಂಗಳೂರು : ರಾಜ್ಯದಲ್ಲಿ ಒಂದು ಅಘೋಷಿತ ಎಮರ್ಜೆನ್ಸಿ ನಡೆಯುತ್ತಿದೆ. ಸಿದ್ದರಾಮಯ್ಯ ಸಿಎಂ ಆದಾ ನಂತ್ರ ಹಿಟ್ಲರ್ ಆಗಿದ್ದಾರೆ. ಬಿಜೆಪಿ ಪಕ್ಷದ ಸಂಸದರು & ಶಾಸಕರ ಮೇಲೆ FIR ದಾಖಲು ಆಗ್ತಿದೆ. ರಾಜ್ಯದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ತೇಜಸ್ವಿ ಸೂರ್ಯ ಸೇರಿದಂತೆ ಅನೇಕರ ಮೇಲೆ FIR ದಾಖಲು ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐವಾನ್ ಡಿಸೋಜ ಅವರು ರಾಜ್ಯಪಾಲರಿಗೆ ಬಾಂಗ್ಲಾ ಮಾದರಿ ಆಗುತ್ತೆ ಅಂದ ಹೇಳಿದ್ರು. ಪ್ರತಿದಿನ ದೂರು ನೀಡಲು ಹೋದ್ರು ದೂರು ತೆಗೆದುಕೊಳ್ತಿಲ್ಲ, FIR ದಾಖಲು ಮಾಡ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡ ಪರುಶುರಾಮ್ ಪತ್ರದ ಮೂಲಕ ಕಾಂಗ್ರೆಸ್ ಶಾಸಕರ ಮೇಲೆ ಆರೋಪ ಮಾಡಿದ್ರು FIR ಮಾಡಲು ಹಿಂದು ಮುಂದೆ ನೋಡಿದ್ರು ಎಂದು ಆರೋಪ ಮಾಡಿದರು.
ವಾಲ್ಮೀಕಿ ನಿಗಮದ ಅಕ್ರಮದಲ್ಲಿ SIT ನೀಡಿದ ವರದಿಯಲ್ಲಿ ಮಾಜಿ ಸಚಿವರ ಹೆಸರು ಇರಲಿಲ್ಲ. ಇಡಿ ನೀಡಿದ ವರದಿಯಲ್ಲಿ ನಾಗೇಂದ್ರ ಹೆಸರು ಪ್ರಸ್ತಾಪ ಆಗಿದೆ ಎಂದ ಅವರು, ನಾಗಮಂಗಲದಲ್ಲಿ ಗಲಾಟೆ ಆಯ್ತು. ಆ ಘಟನೆ ಹೇಗೆ ಆಯ್ತು..? ಯಾರು ಮಾಡಿದ್ರು..? ಆ ಘಟನೆಯನ್ನ ಮುಚ್ಚಿ ಹಾಕೋ ಪ್ರಯತ್ನ ಮಾಡ್ತಿದ್ದಾರೆ ಪೊಲೀಸರು ಎಂದು ಹೇಳಿದರು.
ಹಿಂದು ಯುವಕನ ಮೇಲೆ ಗಣೇಶ್ ವಿಸರ್ಜನೆ ವೇಳೆ ಚಾಕು ಹಾಕಿದ್ದಾರೆ. ತ್ರಿವರ್ಣ ಧ್ವಜದಲ್ಲಿ ಅಶೋಕ್ ಚಕ್ರ ತೆಗೆದು ಬಾವುಟ ಹಾರಿಸಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಬಾದ್ ಎಂದು ಘೋಷಣೆ ಕೂಗಿದ್ರು. ಟಿಪ್ಪು ಅವರನ್ನ ವೈಭವೀಕರ ಮಾಡೋ ಕೆಲಸ ಮಾಡ್ತಿದ್ದಾರೆ. ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಗಲಾಟೆ ಆಯ್ತು. ನಾವು ಕೇಳಿದ್ರೆ ಕೇಸ್ ಹಾಕಿದ್ರಿ. ಅವರ ಮೇಲೆ ಯಾವುದೇ ಕ್ರಮ ಆಗಲಿಲ್ಲ ಎಂದು ಕಿಡಿ ಕಾರಿದ್ದಾರೆ.
ನಮ್ಮ ಮೇಲೆ & ಅಶೋಕ್ ಮೇಲೆ ಯಾವ ಆಧಾರದ ಮೇಲೆ ಕೇಸ್ ಹಾಕಿದ್ದಿರಾ..? ಸಂವಿಧಾನ ಬಗ್ಗೆ ಕಾರ್ಯಕ್ರಮ ಮಾಡಿದ್ರಿ ಯಾವ ಉದ್ದೇಶಕ್ಕಾಗಿ ಮಾಡಿದ್ರಿ. ಮೊನ್ನೆ ಮೈಸೂರು ಜಿಲ್ಲೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದ್ದಾರೆ. ಒಲೈಕೆ ರಾಜಕೀಯ ಮಾಡಿಲು ಹಿಂದುಗಳ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ನಾಗಮಂಗಲಕ್ಕೆ ಒಂದು ಬಾರಿಯಾದ್ರು ಹೋದ್ರಾ..? ಯಾಕೆ ಹೋಗಲಿಲ್ಲ. ಎಂದು ಪ್ರಶ್ನೆ ಮಾಡಿದ್ದಾರೆ.
ಗೃಹ ಸಚಿವರು ಹೋಗಲ್ಲ, ಸಿಎಂ ಹೋಗಲ್ಲ ಅಂದ್ರೆ ಹಿಂದುಗಳಿಗೆ ಮಾನ ಮರ್ಯಾದೆ ಇಲ್ಲ. ಹಿಂದು ದೇವರಿಗೆ ಬೆಲೆ ಇಲ್ವಾ..? ನಾವು ಬೀದಿ ಬೀದಿಯಲ್ಲಿ ಪೂಜೆ ಮಾಡುತ್ತೇವೆ. ಅಲ್ಪಸಂಖ್ಯಾತರು ಈ ರೀತಿ ಮಾಡಲು ನೀವು ಕೊಟ್ಟ ಸಲಿಗೆ ಕಾರಣ. ಭಾರತ ಬಾವುಟ ಕೋಡ್ ಉಲ್ಲಂಘನೆ ಮಾಡಿದ್ದಾರೆ ಯಾವ ಕ್ರಮ ಕೈಗೊಂಡ್ರಿ. ನೀವು ಯಾವ ದೇಶ ದ್ರೋಹಿಗಳನ್ನ ಹೊರ ಬಿಟ್ರಾಲ್ಲ ಅಂತಹವರಿಂದ ನಾಗಮಂಗಲ ಅಂತಹ ಗಲಾಟೆ ನಡೆಯುತ್ತಿದೆ ಎಂದರು.
ಸಿದ್ದರಾಮಯ್ಯ ಹಿಟ್ಲರ್ ದೋರಣೆಯಿಂದ ಹಿಂದುಗಳು ಭಯಭೀತರಾಗಿ ಓಡಾಡುವ ರೀತಿ ಆಗಿದೆ. ನಮ್ಮ ಕಾರ್ಯಕರ್ತರ ಮೇಲೆ FIR ಹಾಕಿದ್ರಿ. ನಾವು ಯಾವುದೇ FIRಗೂ ಎದುರುವುದಿಲ್ಲ. ನಿಮ್ಮ ಮನಸ್ಥಿತಿ ಬಿಡಬೇಕು. ನಾವು ಎದುರಿ ಓಡಿಹೋಗಲ್ಲ ನಾವು ಹೋರಾಟ ಮಾಡಿಕೊಂಡು ಬಂದವರು. ನಾವು FIR ಹಾಕಿದ್ರೆ ಹೋರಾಟ ಬಿಡಲ್ಲ. ಅಧಿಕಾರ ಶಾಶ್ವತ ಅಲ್ಲ, ಬದಲಾವಣೆ ಆಗುತ್ತೆ. ನಾವು 135 ಗೆದಿದ್ದೇವೆ ಅಂತ ಅಹಂಕಾರ ಇರಬಹುದು.. ಆದ್ರೆ ಜನ ಬುದ್ದಿ ಕಲಿಸುತ್ತಾರೆ ಎಂದಿದ್ದಾರೆ.
ದ್ವೇಷದ ರಾಜಕೀಯ ಮಾಡ್ತಿರೋದು ಕಾಂಗ್ರೆಸ್ ನವರು. 135 ಸೀಟ್ ಗೆದಿದ್ದೇವೆ ಎಂದು ಅಹಂಕಾರದಲ್ಲಿ ದ್ವೇಷ ರಾಜಕೀಯ ಮಾಡ್ತಿದ್ದಾರೆ. ನಿಮ್ಮ ಶಾಸಕರ ಮೇಲೆ ದೂರು ಕೊಟ್ರೆ ತೆಗೆದುಕೊಳ್ಳಲ್ಲ. ಪೊಲೀಸರು ಆ ರೀತಿ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಬಿಜೆಪಿ ಯಾವತ್ತು ದ್ವೇಷದ ರಾಜಕೀಯ ಮಾಡಿಲ್ಲ. ಸದಾಕಾಲ ಕಾರ್ಯಕರ್ತರ ಜೊತೆ ಇದ್ದೇವೆ ಎಂದರು.
ಮುನಿರತ್ನ ವಿಚಾರದ ಬಗ್ಗೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ
ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ಉಪ್ಪು ತಿಂದವರು ನೀರು ಕೂಡಿಯಲೇಬೇಕು. FSL ವರದಿ ತರಿಸಿಕೊಳ್ಳಿ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಿ ಆದ್ರೆ ದ್ವೇಷದ ರಾಜಕೀಯ ಮಾಡಬೇಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.