ಕೌಚರ್ ವೀಕ್ 2024: ಗ್ರ್ಯಾಂಡ್ ಫಿನಾಲೆಯಲ್ಲಿ ಗಮನ ಸೆಳೆದ ವಿಕ್ಕಿ ಕೌಶಲ್- ರಶ್ಮಿಕಾ ಮಂದಣ್ಣ 

ನವದೆಹಲಿ: ಹ್ಯುಂಡೈ ಎಫ್‌ಡಿಸಿಐ ಇಂಡಿಯಾ ಕೌಚರ್ ವೀಕ್ ಫ್ಯಾಷನ್ ಶೋ ಪುನಃ ನನ್ನ ಮದುವೆಯ ದಿನಗಳನ್ನು ನೆನಪಿಸಿತು ಎಂದು ಬಾಲಿವುಡ್​ ನಟ ವಿಜೇತ ವಿಕ್ಕಿ ಕೌಶಲ್ ಹೇಳಿದರು. ದಿಲ್ಲಿಯಲ್ಲಿ ಬುಧವಾರ ನಡೆದ ಹ್ಯುಂಡೈ ಎಫ್‌ಡಿಸಿಐ ಇಂಡಿಯಾ ಕೌಚರ್ ವೀಕ್ 2024ರ ಗ್ರ್ಯಾಂಡ್ ಫಿನಾಲೆಯಲ್ಲಿ ಶೇನ್ ಪೀಕಾಕ್ ವಿನ್ಯಾಸಗೊಳಿಸಿದ ಧಿರಿಸಿನಲ್ಲಿ ರಾಂಪ್ ವಾಕ್ ಮಾಡಿದ ಬಳಿಕ ಅವರು ತಮ್ಮ ಮನದಾಳದ ಮಾತು ಹೇಳಿಕೊಂಡರು.

ಪ್ರಸಿದ್ಧ ಫ್ಯಾಷನ್ ಶೋದ ಕೊನೆಯ ದಿನದಲ್ಲಿ ಖ್ಯಾತ ವಸ್ತ್ರ ವಿನ್ಯಾಸಗಾರರಾದ ಫಲ್ಗುಣಿ ಪೀಕಾಕ್ ಮತ್ತು ಶೇನ್ ಪೀಕಾಕ್ ಅವರು ಇತ್ತೀಚೆಗೆ ಸಿದ್ಧಪಡಿಸಿದ “ರಂಗ್ ಮಹಲ್” ಪ್ರಸ್ತುತಪಡಿಸಿದರು. ಸಾಂಪ್ರದಾಯಿಕ ಹಾಗೂ ಭಾರತೀಯ ಕರಕುಶಲತೆಗೆ ಸಾಕ್ಷಿಯಾದ ಡಿಸೈನರ್‌ವೇರ್‌ಗಳು ಅನಾವರಣಗೊಂಡು ಎಲ್ಲರಲ್ಲೂ ಕುತೂಹಲ ಮೂಡಿಸಿದವು.

ಮಿನುಗು ಮತ್ತು ಬೀಡ್‌ವರ್ಕ್‌ನಿಂದ ಅಲಂಕರಿಸಲ್ಪಟ್ಟ ಅದ್ಭುತವಾದ ಲೆಹೆಂಗಾದಲ್ಲಿ ರಶ್ಮಿಕಾ ಕಾಣಿಸಿಕೊಂಡರೆ, ಬೀಜ್-ಬಣ್ಣದ ಬಟನ್-ಅಪ್ ಬನಾರಸ್ ಬ್ರೋಕೇಡ್ ಶೆರ್ವಾನಿಯಲ್ಲಿ ವಿಕ್ಕಿ ಕೌಶಲ್ ಗಮನ ಸೆಳೆದರು. ಈ ಜೋಡಿ ‘ಛಾವಾ’ ಎಂಬ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವುದರಿಂದ ಎಲ್ಲರ ಕಣ್ಣು ಇವರ ಮೇಲೆಯೇ ನಟ್ಟಿತ್ತು. ವಿಕ್ಕಿ ಕೌಶಲ್ ಅವರೊಂದಿಗೆ ತೆರೆ ಹಂಚಿಕೊಳ್ಳಲು ಸಿದ್ಧವಾಗಿರುವ ರಶ್ಮಿಕಾ ಮಂದಣ್ಣ ಚಿತ್ರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ್ದರೆ, ರಶ್ಮಿಕಾ ಅವರ ಪತ್ನಿ ಯೇಸುಬಾಯಿ ಭೋನ್ಸಾಲೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *