ಬೆಂಗಳೂರು ನಗರ ಜಿ. ಪಂ  KDP ಸಭೆಯಲ್ಲಿ ಅಧಿಕಾರಿಗಳಿಗೆ DCM ತರಾಟೆ..!

ನಮ್ಮ ಸರ್ಕಾರ ಯಾರ ಪರವೂ ಅಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಖಂಡಿತವಾಗಿ ಜರುಗುತ್ತದೆ: DCM

ಬೆಂಗಳೂರು: “ಬೆಂಗಳೂರು ನಗರದ ಕೆರೆಗಳ ಒತ್ತುವರಿ ಸೇರಿದಂತೆ ಕೆರೆ ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಲು ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ ಹಾಗೂ ಗೋಪಿನಾಥ್ ಅವರ ನೇತೃತ್ವದಲ್ಲಿ ಪ್ರತ್ಯೇಕ ಮೂರು ಸಮಿತಿಗಳನ್ನು ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದರು.

ಬನಶಂಕರಿಯಲ್ಲಿರುವ ಬೆಂಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಡಿಸಿಎಂ ಮಾತನಾಡಿದರು. “ಈ ಸಮಿತಿಯು ನಗರದಾದ್ಯಂತ ಇರುವ ಕೆರೆಗಳ ಒತ್ತುವರಿ, ಕೆರೆಗಳಿಗೆ ಕೊಳಚೆ ನೀರು ಸೇರುತ್ತಿರುವುದು ಸೇರಿದಂತೆ ಇತರೇ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದೆ. ಕೆರೆಗಳಿಗೆ ಚರಂಡಿ ಕೊಳಚೆ ನೀರು ಬಿಡುತ್ತಿರುವವರು ಯಾರೇ ಆಗಿರಲಿ, ಯಾವುದೇ ಕೈಗಾರಿಕೆಗಳಾಗಲಿ ಯಾರಿಗೂ ಮುಲಾಜು ತೋರಬೇಡಿ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಕೆರೆಗಳನ್ನು ಈಗಲೇ ಸಂರಕ್ಷಣೆ ಮಾಡದಿದ್ದರೆ ಮುಂದಕ್ಕೆ ಕಷ್ಟವಾಗಲಿದೆ” ಎಂದು ಅಧಿಕಾರಿಗಳಿಗೆ ತಿಳಿಸಿದರು.

Leave a Reply

Your email address will not be published. Required fields are marked *