ದೇವನಹಳ್ಳಿ || ಶ್ರೀ ದುರ್ಗಾ ಮಹೇಶ್ವರಿ ದೇವಿಗೆ ಎಕ್ಕದ ಹೂವಿನ ಅಲಂಕಾರ

ಶ್ರೀ ದುರ್ಗಾ ಮಹೇಶ್ವರಿ ದೇವಿಗೆ ಎಕ್ಕದ ಹೂವಿನ ಅಲಂಕಾರ

ದೇವನಹಳ್ಳಿ : ದೇವನಹಳ್ಳಿ ತಾಲ್ಲೂಕಿನ ಗಡ್ಡದನಾಯಕನಹಳ್ಳಿಯಲ್ಲಿ ನೆಲೆಸಿರುವ ಶ್ರೀ ದುರ್ಗಾ ಮಹೇಶ್ವರಿ ಅಮ್ಮನವ ದೇವಾಲಯದಲ್ಲಿ ಮೌನಿ ಅಮಾವಾಸ್ಯೆ ಅಂಗವಾಗಿ ಪ್ರತ್ಯಂಗಿರ ಹೋಮ ವಿಶೇಷ ಎಕ್ಕದ ಹೂವಿನ ಅಲಂಕಾರ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯ ವಿಜೃಂಭಣೆಯಿAದ ನಡೆಯಿತು.

ದುರ್ಗಾ ಮಹೇಶ್ವರಿ ದೇವಾಲಯದ ಅರ್ಚಕ ಚಂದ್ರಶೇಖರ್ ಶರ್ಮ ಮಾತನಾಡಿ, ಪುಷ್ಯ ಮಾಸದ ಮೌನಿ ಅಮಾವಾಸ್ಯೆ ಅಂಗವಾಗಿ ದೇವಿಗೆ ಪ್ರತ್ಯಂಗಿರ ಹೋಮ ಹಮ್ಮಿಕೊಂಡಿದ್ದು ಬೆಳಗ್ಗೆಯಿಂದಲೇ ಅಮ್ಮನವರಿಗೆ ಅಲಂಕಾರ, ಕಳಶಾರಾಧನೆ ಕಳಶ ಸ್ಥಾಪನೆ ಅಭಿಷೇಕ ಗಣಪತಿ ಹೋಮ , ದುರ್ಗಾ ಶಾಂತಿ ಹೋಮ ಮಾಡಲಾಗಿತ್ತು. ಈ ದೇವಾಲಯಕ್ಕೆ ಜಿಲ್ಲೆಯಿಂದ ಅಲ್ಲದೇ ಹೊರ ರಾಜ್ಯಗಳಿಂದಲೂ ದರ್ಶನಕ್ಕಾಗಿ ಆಗಮಿಸುತ್ತಾರೆ ತಮ್ಮ ಕಷ್ಟಗಳನ್ನು ದೇವಿಯ ಬಳಿ ಹೇಳಿ ಪರಿಹರಿಸಿಕೊಳ್ಳುತ್ತಾರೆ ದೇವಿಯ ಅನುಗ್ರಹ ಭಕ್ತರ ಮೇಲೆ ಇರುತ್ತದೆ ಎಂದು ತಿಳಿಸಿದರು.

ಅಮ್ಮನವರು ದಿನದಿಂದ ದಿನಕ್ಕೆ ಭಕ್ತರನ್ನು ಆಕರ್ಷಿಸಿ ಕಷ್ಟ ಎಂದು ಬಂದ ಭಕ್ತರನ್ನು ಸಲಹಿ ತನ್ನತ್ತ ಆಕರ್ಷಿತಳಾಗುತ್ತಿದ್ದಾರೆ.

Leave a Reply

Your email address will not be published. Required fields are marked *