ಪಶ್ಚಿಮೋತ್ತನಾಸನವು ತೂಕ ಕಡಿಮೇ ಮಾಡಲು ಹೆಚ್ಚು ಸಹಕಾರಿಯಾಗಿದೆ. ಪಶ್ಚಿಮೋತ್ಥಾನಾಸನವು ತೂಕ ಕಡಿಮ ಮಾಡಲು ಸಹಾಯ ಮಾಡುವುದಷ್ಟೆಯಲ್ಲದೆ, ಇನ್ನು ಕೆಲವು ಆರೋಗ್ಯಕರ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಈ ಆಸನವನ್ನು ಮಾಡುವುದರಿಂದ ದೇಹವು ಇತರ ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ. ಈ ಆಸನವನ್ನು, ನೆಲದ ಮೇಲೆ ಪಾದವನ್ನು ಮುಂದಕ್ಕೆ ಇರಿಸಿ, ದೇಹವನ್ನು ಮುಂದಕ್ಕೆ ಬಾಗಿಸಿ ಮತ್ತು ಕಾಲ್ಬೆರಳುಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಮಾಡಲಾಗುತ್ತದೆ. ಪಶ್ಚಿಮೋತ್ಥಾನಾಸನ ಮಾಡುವುದರಿಂದ ದೇಹದ ನಮ್ಯತೆ ಹೆಚ್ಚುತ್ತದೆ. ಇನ್ನು ಇದರಿಂದ ಭುಜ ಮತ್ತು ಬೆನ್ನಿನ ಸ್ನಾಯುಗಳಲ್ಲಿನ ನೋವು ದೂರವಾಗುತ್ತದೆ. ಹಾಗೇ ನರಮಂಡಲವು ಶಾಂತವಾಗುತ್ತದೆ. ಈ ಆಸನವನ್ನು ಮಾಡುವುದರಿಂದ ದೇಹದ ಇಂಟರ್ನಲ್ ಒರ್ಗನ್ಸ್ ಅಂದ್ರೆ ಆಂತರಿಕ ಅಂಗಗಳು ಸಹ ಪ್ರಯೋಜನ ಪಡೆಯುವುದರ ಜೋತೆಗೆ ರಕ್ತದ ಹರಿವು ಸುಧಾರಿಸಲು ಪ್ರಾರಂಭಿಸುತ್ತದೆ.
ಪಶ್ಚಿಮೋತ್ತನಾಸನ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದು ನಿಮಿಗೆ ಗೊತ್ತಿದಿಯಾ?
