ಮಾಂಸಾಹಾರ ಸೇವಿಸುವವರಿಗೆ ಅದರ ಹೆಸರು ಹೇಳಿದರೆ ಂತೋಷವಾಗುತ್ತದೆ. ಮಾಂಸಾಹಾರ ಸೇವನೆಯಿಂದ ದೇಹಕ್ಕೆ ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಮಾಂಸಾಹಾರ ತ್ಯಜಿಸುತ್ತಿದ್ದಾರೆ. ಮಾಂಸಾಹಾರಿಗಳು ಇತ್ತೀಚೆಗೆ ಸಸ್ಯಾಹಾರಿಗಳಾಗುತ್ತಿವೆ.
ಮಾಂಸಾಹಾರ ಮತ್ತು ಮಾಂಸಾಹಾರವನ್ನು ತ್ಯಜಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ ಎನ್ನಲಾಗುತ್ತದೆ. ನಾವು ಈ ಕುರಿತಾಗಿ ನಿಮಗೆ ಇಂದು ತಿಳಿಸಿ ಕೊಡಲಿದ್ದೇವೆ.
ಕರ್ನಾಟಕದಲ್ಲಿ ಕಾರ್ತಿಕ ಮಾಸವನ್ನು ನವೆಂಬರ್ 2ರಿಂದ ಡಿಸೆಂಬರ್ 1ರವರೆಗೆ ಇರಲಿದೆ. ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರದಂತೆಯೇ ಕಾರ್ತಿಕ ಸೋಮವಾರವೂ ತುಂಬಾನೇ ಅತ್ಯಂತ ಮಹತ್ವದ್ದಾಗಿದೆ, ಕಾರ್ತಿಕ ಮಾಸದಲ್ಲಿ ಪ್ರತಿದಿನ ದೀಪವನ್ನು ಹಚ್ಚಿಡಲಾಗುವುದು. ಕಾರ್ತಿಕ ದೀಪಗಳನ್ನು ಸೂರ್ಯೋದಯಕ್ಕೆ ಮುನ್ನ ಹಾಗೂ ಸೂರ್ಯಾಸ್ತದ ನಂತರ ಹಚ್ಚಲಾಗುವುದು. ದೇವಾಲಯದಲ್ಲಿ ಸುತ್ತಲೂ ಹಣತೆಯನ್ನು ಹಚ್ಚಲಾಗುವುದು. ಕಾರ್ತಿಕ ಮಾಸದಲ್ಲಿ ನೀವೂ ಒಂದು ತಿಂಗಳು ಮಾಂಸ ಆಹಾರವನ್ನು ಬಿಟ್ಟರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ.
ನಿಮ್ಮ ಆಹಾರದಲ್ಲಿ ಹೆಚ್ಚು ಸಸ್ಯ ಆಧಾರಿತ ಆಹಾರವನ್ನು ಸೇರಿಸಿದರೆ, ನೀವು ಮಾಂಸವನ್ನು ತಿನ್ನದೆಯೇ ಎಲ್ಲಾ ರೀತಿಯ ಅದ್ಭುತ ಪೋಷಕಾಂಶಗಳನ್ನು ಪಡೆಯುತ್ತೀರಿ. ಒಂದು ತಿಂಗಳ ಕಾಲ ಮಾಂಸಾಹಾರಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿದರೆ, ನಿಮ್ಮ ದೇಹದಲ್ಲಿ ಈ ಬದಲಾವಣೆಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ.
ಸಸ್ಯಾಧಾರಿತ ಆಹಾರಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದು ಉತ್ತಮ ಜೀರ್ಣ ಶಕ್ತಿಯನ್ನು ನೀಡುವುದಲ್ಲದೆ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಮೃದುವಾದ ಕರುಳಿನ ಚಲನೆಯು ನಮಗೆ ಆರೋಗ್ಯಕರ ಜೀರ್ಣಕ್ರಿಯೆಯನ್ನು ನೀಡುತ್ತದೆ. ಹಾಗಾಗಿ ಇಂತಹ ಗಿಡಗಳಿಗೆ ಸಂಬಂಧಿಸಿದ ನಾರಿನಂಶವನ್ನು ಆಹಾರದಲ್ಲಿ ಹೆಚ್ಚಿಗೆ ಸೇರಿಸಿಕೊಂಡರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ ಹಾಗೂ ಜೀರ್ಣಾಂಗ ವ್ಯವಸ್ಥೆ ಸಮರ್ಥವಾಗುತ್ತದೆ.
ಸಸ್ಯ ಆಧಾರಿತ ಆಹಾರವನ್ನು ಅನುಸರಿಸುವುದು ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಅವು ಮಾಂಸಕ್ಕೆ ಹೋಲಿಸಿದರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಹೆಚ್ಚಿನ ಫೈಬರ್ ಅಂಶದಿಂದಾಗಿ, ಹೆಚ್ಚಿನ ಕ್ಯಾಲೊರಿಗಳನ್ನು ಸೇವಿಸದೆಯೇ ಪೂರ್ಣತೆಯ ಭಾವನೆಯನ್ನು ತ್ವರಿತವಾಗಿ ಅನುಭವಿಸಲಾಗುತ್ತದೆ.
ಮಾಂಸ, ವಿಶೇಷವಾಗಿ ಸಂಸ್ಕರಿಸಿದ ಮಾಂಸವು ನಮ್ಮ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಇವುಗಳ ಹೊರತಾಗಿ, ಸಸ್ಯ ಆಧಾರಿತ ಆಹಾರವನ್ನು ಸೇವಿಸುವುದರಿಂದ ಉರಿಯೂತವನ್ನು ಕ್ರಮೇಣ ಕಡಿಮೆ ಮಾಡಬಹುದು, ವಿವಿಧ ದೀರ್ಘಕಾಲದ ಕಾಯಿಲೆಗಳನ್ನು ದೂರವಿಡಬಹುದು.