ಅವಶ್ಯಕ ದಾಖಲೆಗಳನ್ನು ಕ್ರಮಬದ್ಧಗೊಳಿಸುವುದಕ್ಕೆ ಕಂದಾಯ ಇಲಾಖೆಯನ್ನು ಸಜ್ಜುಗೊಳಿಸಿರುವ ಭರವಸೆಯನ್ನು ಕಂದಾಯ ಸಚಿವರು ನೀಡಿದ್ದು ಇದರಿಂದ ರೈತರಲ್ಲಿ ನಿರಾಳ ಮನಃಸ್ಥಿತಿ ಮೂಡುವಂತಾಗಿದೆ. ರಾಜ್ಯದಾದ್ಯಂತ ಎಷ್ಟು ಜನರೈತರ ಪೊàಡಿ ಕೆಲಸ ಬಾಕಿ ಇದೆ ಎಂಬ ಮಾಹಿತಿಯಾಗಲಿ, ಅಂಕಿ ಸಂಖ್ಯೆಯಾಗಲಿ ಸರ್ಕಾರದ ಬಳಿ ಇಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಒಪ್ಪಿಕೊಂಡಿರುವ ಸಚಿವರು ಮಾಹಿತಿ ಕೊರತೆಯ ಕಾರಣದ ರ್ಖಾಸ್ತು ಪೊàಡಿ ಬಾಕಿ ಕೆಲಸವನ್ನುಅಭಿಯಾನದಂತೆ ಸೆಪ್ಟೆಂಬರ್ ಒಂದರಿಂದಲೇ ಆರಂಭಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಮಟ್ಟದಲ್ಲಿ ಕನಿಷ್ಠ ನಾಲ್ಕು ಲಕ್ಷರೈತರಿಗೆ ಸಂಬಂಧಿಸಿದ 69,437 ಸರ್ವೆ ನಂಬರ್ಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿ ಸಂಬಂಧ ಪಟ್ಟರೈತರ ಕಡತಗಳನ್ನು ತಯಾರು ಮಾಡುವ ಪ್ರಕ್ರಿಯೆಆರಂಭಿಸಲಾಗಿದೆ. ಈ ದಾಖಲೆಗಳನ್ನು ಒಂದುಗೂಡಿಸಿ ರೈತರು ಪೊàಡಿಗೆಅರ್ಹರೇಎಂದುಗುರುತಿಸಲಾಗುತ್ತದೆ.
ಕಂದಾಯ ನಿರೀಕ್ಷಕ, ಶಿರಸ್ತೇದಾರ್ ಹಾಗೂ ತಹಶೀಲ್ದಾರ್ ಈ ಬಗ್ಗೆ ಪರಿಶೀಲಿಸಿ ನಂತರ ನಮೂನೆ 6-10 ರ ಪ್ರಕ್ರಿಯೆಗೆ ಸರ್ವೆ ಇಲಾಖೆಗೆ ಪೊàಡಿಗೆ ಶಿಫಾರಸು ಮಾಡುತ್ತಾರೆ. ತದನಂತರರೈತರಿಗೆ ಪೊàಡಿ ಲಭ್ಯವಾಗುವಂತೆ ಪ್ರಕ್ರಿಯೆಯನ್ನುರೂಪಿಸಲಾಗಿದೆ.
ರಾಜ್ಯದಾದ್ಯಂತ ಈ ರೀತಿಯ ಪೊàಡಿಅಭಿಯಾನ ಪ್ರಕ್ರಿಯೆ ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು ನಾಲ್ಕು ಲಕ್ಷರೈತರಿಗೆ ಸಂಬಂಧಿಸಿದ ಸರ್ವೆ ನಂಬರುಗಳಲ್ಲಿ ನಮೂನೆ 1-5 ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹಿಂದೆ ಒಟ್ಟು 8379 ಸರ್ಕಾರಿ ಸರ್ವೆ ನಂಬರ್ ಗಳಲ್ಲಿ 80,000 ರೈತರಿಗೆಜಮೀನು ಮಂಜೂರು ಮಾಡಲಾಗಿತ್ತು.
ಈ ಕೆಲಸ ಸವಾಲಿ ಇನದಾಗಿದ್ದು ಪ್ರಸಕ್ತ ತಿಂಗಳಿನಿಂದ ಭೂಮಿ ಸರ್ವೆ ಕೆಲಸಗಳನ್ನು ಆರಂಭಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಪೊàಡಿ ಮಾಡಿಕೊಡಲಾಗುವುದು. ಹಾಸನದಲ್ಲಿ 35,000 ರೈತರ ಬಳಿ ಸಂಪೂರ್ಣದಾಖಲೆಇದೆ. ಹೀಗಾಗಿ ಈ ವರ್ಷದಲ್ಲಿ ಕನಿಷ್ಠ 30,000 ರೈತರಿಗೆ ಪೊàಡಿ ಮಾಡಿಕೊಡಲಾಗುವುದು. ಇದೇ ಮಾದರಿಯನ್ನುರಾಜ್ಯದಾದ್ಯಂತ ಜಾರಿಗೊಳಿಸುವ ಭರವಸೆಯನ್ನು ಸಚಿವ ಕೃಷ್ಣ ಬೈರೇಗೌಡ ಅವರು ನೀಡಿದ್ದಾರೆ.
ರಾಜ್ಯದಾದ್ಯಂತ 22 ಲಕ್ಷ ಖಾಸಗಿ ಸರ್ವೆ ನಂಬರ್ಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದಾರೆ. ಪ್ರತಿಯೊಬ್ಬರ ಸ್ವಾಧೀನವನ್ನು ನಿರ್ಧರಿಸಿ ಅದಕ್ಕೆತಕ್ಕಂತೆ ಪ್ರತ್ಯೇಕ ಪಹಣಿ ಮಾಡಿಕೊಡ ಬೇಕಾಗುವ ಕರ್ತವ್ಯ ಕಂದಾಯ ಇಲಾಖೆಯದಾಗಿದೆ. ದರ್ಖಾಸ್ತು ಪೊàಡಿ ಕೆಲಸದ ಜೊತೆಗೆ ಅದನ್ನೂ ಮಾಡಿಕೊಡಲು ಸೂಚನೆ ನೀಡಲಾಗಿದೆ.ಕೆಲವು ವರ್ಷಗಳ ಹಿಂದೆ ಇಲಾಖೆಯಿಂದ ಪೊàಡಿ ಅಭಿಯಾನ ಆರಂಭಿಸಲಾಗಿತ್ತು.ಆದರೆ, ಕಚೇರಿಯನ್ನು
ಹುಡುಕಿ ಬಂದವರಿಗೆ ಪಹಣಿ ಮಾಡಿಕೊಡಲಾಯಿತೇ ವಿನಃ ಎಲ್ಲರಿಗೂ ಮಾಡಿಕೊಡಲಾಗಿಲ್ಲ. ಈ ಬಾರಿ ಒಟ್ಟು ಎಲ್ಲ ರೈತರಿಗೂ ಮಾಡಿಕೊಡುವ ಗುರು ಇಟ್ಟುಕೊಳ್ಳಲಾಗಿದೆ.
ರಾಜ್ಯದಲ್ಲಿ ಬಗರ್ ಹುಕುಂ ನಮೂನೆಗಳ ಅಡಿಯಲ್ಲಿಒಟ್ಟಾರೆ 9 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಆನರ್ಹ ಅರ್ಜಿಗಳೇ ಹೆಚ್ಚಾಗಿರುವುದು ಮೇಲು ನೋಟಕ್ಕೆ ಗೊತ್ತಾಗಿದೆ. ಈ ಅರ್ಜಿಗಳ ವಿಲೇವಾರಿಗೆ ಈಗಾಗಲೇ ರಾಜ್ಯದಾದ್ಯಂತ 169 ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗಿದೆ.ಪ್ರತಿ ತಿಂಗಳೂ ಕನಿಷ್ಠ ಮಟ್ಟದಅರ್ಜಿ ವಿಲೇ ಆಗಬೇಕು, ಮುಂದಿನ ಎಂಟು ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನೂ ವಿಲೇಗೊಳಿಸಿ ಅರ್ಹರಿಗೆ ಭೂ ಮಂಜೂರು ಮಾಡುವಂತೆ ಈಗಾಗಲೇ ತಹಶೀಲ್ದಾರ್ ಗಳಿಗೆ ಸೂಚಿಸಲಾಗಿದೆ. ರಾಜ್ಯದಾದ್ಯಂತ ಈವರೆಗೆ ರೈತರ ಪಹಣಿ ಜೊತೆಗೆ ಆಧಾರ್ಜೋಡಣೆ ಕೆಲಸ ಶೇ. 81.74 ರಷ್ಟು ಪೂರ್ಣಗೊಳಿಸಲಾಗಿದೆ.
ಈ ಪೈಕಿ ಸುಮಾರು 41ಲಕ್ಷ ಜಮೀನುಗಳು ಕೃಷಿಯೇತರ ಚ ಟುವಟಕೆಗೆ ಉಪಯೋಗವಾಗುತ್ತಿದೆ. ಕೃಷಿ ಭೂಮಿಗೆ ಮಾತ್ರ ಆಧಾರ್ ಜೋಡಣೆ ಮಾಡಲು ಸಾಧ್ಯ. ಈವರೆಗೆ 2.15 ಕೋಟಿ ಜಮೀನುಗಳಿಗೆ ಆಧಾರ್ಜೋಡಿಸುವ ಕೆಲಸ ಮುಗಿಸಲಾಗಿದೆ ಎಂಬ ಮಾಹಿತಿಯನ್ನೂ ಸಚಿವರು ನೀಡಿದ್ದಾರೆ.ರಾಜ್ಯದಾದ್ಯಂತ 48,16,813 ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ.
ಆದರೆ, ಅವರ ಹೆಸರಲ್ಲೇ ಪಹಣಿ ಮುಂದು ವರೆಯುತ್ತಿರುವುದರಿಂದ ಈ ಎಲ್ಲ ಸಂದರ್ಭಗಳಲ್ಲಿ ಸಂಬಂಧಿಸಿದವರಿಗೆ ಶೀಘ್ರದಲ್ಲಿ ಪೌತಿ ಖಾತೆ ಆಂದೋಲನ¨ Üಆಡಿಯಲ್ಲಿ ಖಾತೆ ಬದಲಿಸಿಕೊಡುವ ಪ್ರಕ್ರಿಯೆಯನ್ನೂ ನಡೆಸುವ ಸೂಚನೆಯನ್ನು ಸಚಿವರು ನೀಡಿದ್ದಾರೆ.ಯಾವುದೇ ಸರ್ಕಾರ ಜನಮುಖಿ ಯಾಗುವಂತಿದ್ದರೆ ಕಂದಾಯ ಇಲಾಖೆಯಲ್ಲಿ ರೈತರ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯುವಂಥ ವ್ಯವಸ್ಥೆ ರೂಪುಗೊಳ್ಳಬೇಕು.ಕಂದಾಯ ಸಚಿವರ ಭರವಸೆಯ ಮಾತುಗಳು ಕ್ರಿಯಾರೂಪದಲ್ಲಿ ಜಾರಿಯಾದರೆ ಮಾತ್ರರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.